ಬಂಟ್ವಾಳ : ತಾಲೂಕು ಪಿಂಚಣಿದಾರರ ಸಂಘದ ಕಾರ್ಯಕಾರಿ ಸಮಿತಿ ಸಭೆಯು ಇದೇ ಫೆ.09ರಂದು ಬಿ.ಸಿ.ರೋಡ್ ಸರಕಾರಿ ನೌಕರರ ಸಂಘದ ಸಭಾ ಭವನದಲ್ಲಿ ಸಂಘದ ಅಧ್ಯಕ್ಷ ಬಿ.ತಮ್ಮಯ್ಯ ನವರ ಅಧ್ಯಕ್ಷತೆಯಲ್ಲಿ ಜರಗಿತು. ಸಂಘದ ಕಾರ್ಯದರ್ಶಿ ಕೆ.ನೀಲೋಜಿರಾವ್ ಬೇಕಲ್ ರವರು ಸ್ವಾಗತಿಸಿ ಕಳೆದ ಸಭೆಯ ವರದಿಯನ್ನು ಸಭೆಯಲ್ಲಿ ಮಂಡಿಸಿದರು. ಲೆಕ್ಕಪತ್ರವನ್ನು ಉಪಾಧ್ಯಕ್ಷ ಎ.ಲಿಂಗಪ್ಪನವರು ಮಂಡಿಸಿದರು.
ಸಂಘದ ವಾರ್ಷಿಕ ಮಹಾಸಭೆಯು ಇದೇ ಬರುವ ಎಪ್ರಿಲ್ 19ರಂದು ಬಿ.ಸಿ.ರೋಡ್ ನ ತು ಳು ಶಿವಳ್ಳಿ ಬ್ರಾಹ್ಮಣ ಸಮುದಾಯ ಭವನದಲ್ಲಿ ಗಣ್ಯ ವ್ಯಕ್ತಿಗಳ ಉಪಸ್ಥಿತಿಯಲ್ಲಿ ಜರಗಿಸುವುದೆಂದು ತೀರ್ಮಾನಿಸಲಾಯಿತು.
ಸಭೆಯಲ್ಲಿ ಉಪಾಧ್ಯಕ್ಷ ವಿ.ಸೋಮಪ್ಪ, ಚಂದೂ ನಾೈಕ್, ರಮೇಶ್ ಭಟ್, ಚಂದ್ರಶೇಖರ ಗಟ್ಟಿ, ಎಮ್.ದಿನಕರ್, ಶಂಕರ ಪೂಜಾರಿ ಲೋಕನಾಥ ಶೆಟ್ಟಿ, ಎಮ್.ಆರ್.ನಾಯರ್, ಅಬ್ದುಲ್ ಸಲಾಮ್, ಧನಂಜಯ ಶೆಟ್ಟಿ, ಡಿ.ರಾಧಾಕೃಷ್ಣ ನಾೈಕ್, ನಂದಕಿಶೋರ್, ಪದ್ಮನಾಭ ರಾವ್, ಕೆ.ಆರ್.ಪುತ್ತೂರಾಯ, ಜಲಜಾಕ್ಷಿ ಕುಲಾಲ್, ಶಾರದಾ ಎಸ್.ರಾವ್ ರವರು ಉಪಸ್ಥಿತರಿದ್ದು ತಮ್ಮ ಅಭಿಪ್ರಾಯಗಳನ್ನು ಮಂಡಿಸಿದರು. ಕೊನೆಯಲ್ಲಿ ಜತೆ ಕಾರ್ಯದರ್ಶಿ ಎ.ದಾಮೋದರ್ ರವರು ವಂದಿಸಿದರು.