ಕೈಕಂಬ: ಗಂಜಿಮಠ ತಾಲೂಕು ಪಂಚಾಯತ್ ಕ್ಷೇತ್ರದಿಂದ ಬಿಜೆಪಿ ಪಕ್ಷದ ಪರವಾಗಿ ಚುನಾವಣೆಯಲ್ಲಿ ಸ್ಪರ್ಧಿಸುತ್ತಿರುವ ಕೃಷಿಕ ದೋಗು ಪೂಜಾರಿ ಅವರು ಗೆಲುವಿನ ನಿರೀಕ್ಷೆಯಲ್ಲಿದ್ದಾರೆ. ಈ ಹಿಂದೆ ತಾಲೂಕು ಪಂಚಾಯತ್ ಸದಸ್ಯನಾಗಿದ್ದುಕೊಂಡು ಹಲವಾರು ಅಭಿವೃದ್ಧಿ ಕಾಮಗಾರಿಗಳನ್ನು ನಡೆಸಿಕೊಟ್ಟಿರುವ ದೋಗುಪೂಜಾರಿಯವರಿಗೆ ತಾನು ನಡೆಸಿದ ಕಾಮಗಾರಿಗಳೇ ಗೆಲುವಿನ ಶ್ರೀರಕ್ಷೆಯಾಗಲಿದೆ ಎಂಬ ಅಭಿಪ್ರಾಯ ಕೇಳಿಬರುತ್ತಿದೆ. ದೋಗುಪೂಜಾರಿ ವಿರುದ್ಧ ಕಾಂಗ್ರೆಸ್ ಪರವಾಗಿ ಸುನಿಲ್ ಕುಮಾರ್ ಅವರೂ ಸ್ಪರ್ಧಿಸಿದ್ದು, ಅವರು ಕೂಡಾ ರಾಜಕೀಯದಲ್ಲಿ ಪಳಗಿದವರೇ ಆಗಿರುವುದರಿಂದ ಇಬ್ಬರ ನಡುವೆಯೂ ಭಾರೀ ಪೈಪೋಟಿ ಉಂಟಾಗಿದೆ.
ಗಂಜಿಮಠ ಕ್ಷೇತ್ರದಲ್ಲಿ ಅಷ್ಟೊಂದು ಪ್ರಮಾಣದಲ್ಲಿ ವೋಟ್ ಬ್ಯಾಂಕ್ ಇರದಿದ್ದರೂ ಸಹ, ಕೆಲವೊಂದು ಕಡೆಗಳಲ್ಲಿ ವೋಟ್ ಬ್ಯಾಂಕ್ ಪರಿಸ್ಥಿತಿ ಇರುವುದನ್ನು ಗಮನಿಸಬಹುದು. ಇದು ಯಾವ ಅಭ್ಯರ್ಥಿಗೆ ವರವಾಗುತ್ತದೆ, ಅಥವಾ ಶಾಪವಾಗುತ್ತದೆ ಎಂಬ ನಿರೀಕ್ಷೆ ಹಲವರಲ್ಲಿ ಹುಟ್ಟಿಕೊಂಡಿದೆ. ಈ ನಡುವೆ ಎಸ್‍ಡಿಪಿಐ ಕೂಡಾ ಚುನಾವಣೆಗೆ ಸ್ಪರ್ಧಿಸಿರುವುದು ಕಾಂಗ್ರೆಸ್‍ನ ಮತಧ್ರುವೀಕರಣ ನಡೆಯಬಹುದು ಎನ್ನಲಾಗಿದೆ. ಇದರ ನಡುವೆ ಕೆಲವರು ಪಕ್ಷೇತರ ಅಭ್ಯರ್ಥಿಗಳೂ ಸಹ ಚುನಾವಣೆಗೆ ಸ್ಪರ್ಧಿಸಿದ್ದಾರೆ.

9
ಕೃಷಿಕರಾಗುರುವ ದೋಗುಪೂಜಾರಿ ಅವರು ಸರಳ ನಡೆನುಡಿ ಉಳ್ಳ ವ್ಯಕ್ತಿ ಎಂದೇ ಚಿರಪರಿಚಿತರಾದ ವ್ಯಕ್ತಿ. ನಾಗರಾಜ ಶೆಟ್ಟಿ ಹಾಗೂ ಕೃಷ್ಣ ಜೆ ಪಾಲೆಮಾರ್ ಅವರು ಶಾಸಕರಾಗಿದ್ದ ಸಂದರ್ಭ ತಾ.ಪಂ ಸದಸ್ಯರಾಗಿದ್ದ ದೋಗು ಪೂಜಾರಿ ಹಲವಾರು ಕಾಮಗಾರಿಗಳನ್ನು ನಡೆಸಿ ಅಭಿವೃದ್ದಿಯ ಹರಿಕಾರ ಎಂದೇ ಖ್ಯಾತಿ ಗಳಿಸಿದ್ದಾರೆ. ಕೈಕಂಬ-ನಾಡಾಜೆ ರಸ್ತೆ, ಮಟ್ಟಿ-ನಾಡಾಜೆ ರಸ್ತೆ, ನಾಡಾಜೆ-ವಸರ್‍ಪಳ್ಳ, ಕುಕ್ಕುರಿ ದೋಟ ರಸ್ತೆ, ಗಾಂಧೀನಗರ ರಸ್ತೆ ಕಾಮಕ್ರೀಟಿಕರಣ, ಮೊಗರು ಗ್ರಾಮದ ಗಟ್ನಮಜಲು ರಸ್ತೆ, ಜೋಡುತಡಮೆ, ತೆಂಕುಳಿಪಾಡಿ ಗ್ರಾಮದ ಕೊಡಮಣಿತ್ತಾಯ ರಸ್ತೆ, ಕಾಜಿಲ ಕೋರ್ದಬ್ಬು ದೈವಸ್ಥಾನದ ರಸ್ತೆ, ಗಂಜಿಮಠ ಕಾಜಿಲ ರಸ್ತೆ, ಮಳಲಿ, ಮೊಗರುವಿಗೆ ಕುಡಿಯವ ನೀರಿನ ಯೋಜನೆ, ಗಣೇಶನಗರದ ಕುಡುಬಿ ಸಮುದಾಯ ಭವನ ರಚನೆ ಮುಂತಾದ ಕಾಮಗಾರಿಗಳನ್ನು ನಡೆಸಿ ಹೆಸರುಗಳಿಸಿದ್ದಾರೆ.
ಈ ಎಲ್ಲಾ ಕಾಮಗಾರಿಗಳು ಮತವಾಗಿ ಬದಲಾಗಿ ತನ್ನನ್ನು ಚುನಾವಣೆಯಲ್ಲಿ ಗೆಲ್ಲಿಸಬಹುದು ಎಂಬ ನಿರೀಕ್ಷೆ ದೋಗುಪೂಜಾರಿಯವರದ್ದಾಗಿದೆ

By suddi9

Leave a Reply

Your email address will not be published. Required fields are marked *