ಕೈಕಂಬ: ಕುಮಾರ ಸ್ವಾಮಿ ಹಾಗೂ ಯಡಿಯೂರಪ್ಪ ಇದ್ದ ಸರಕಾರವನ್ನು ಆಲೋಚನೆ ಮಾಡಿದರೆ ಅದನ್ನು ಭ್ರಷ್ಟಾಚಾರದ ಸಂಘ ಎಂದು ಕರೆಯಬಹುದು. ಈ ವೇಳೆ ಸುಮಾರು ಹತ್ತು ಹದಿನೈದು ಮಂದಿ ಜೈಲಿಗೆ ಸೇರಿ ಜಾಮೀನು ಪಡೆದು ಮತ್ತೆ ಜೈಲು ಸೇರಿದರು ಎಂದು ಕೇಂದ್ರ ಮಾಜಿ ಸಚಿವ ವೀರಪ್ಪ ಮೊಯ್ಲಿ ಆರೋಪಿಸಿದ್ದಾರೆ.
ಅವರು ಗುರುಪುರ ಕೈಕಂಬದಲ್ಲಿ ಮಂಗಳವಾರ ರಾತ್ರಿ ಗುರುಪುರ ಬ್ಲಾಕ್ ಕಾಂಗ್ರೆಸ್ ಸಮಿತಿ ವತಿಯಿಂದ ಕಾಂಗ್ರೆಸ್ ಪಕ್ಷದ ಜಿ.ಪಂ., ತಾ.ಪಂ., ಅಭ್ಯರ್ಥಿಗಳ ಪರವಾಗಿ ನಡೆದ ಚುನಾವಣಾ ಪ್ರಚಾರ ಸಭೆಯಲ್ಲಿ ಮಾತನಾಡುತ್ತಿದ್ದರು.
ಬಳಿಕ ಮಾತಾಡಿದ ಅವರು ರಾಜ್ಯದಲ್ಲಿ ಆಡಳಿತ ನಡೆಸಿದ್ದ ಬಿಜೆಪಿ ಸರಕಾರ ಭ್ರಷ್ಟಾಚಾರದ ಸರಕಾರವಾಗಿದೆ. ಈ ಕಾಲದಲ್ಲಿ ಒಬ್ಬಾತ ಗೆಳೆಯನ ಮನೆಗೆ ತೆರಳಿ ಆತನ ಮಡದಿಯನ್ನೇ ಅತ್ಯಾಚಾರ ನಡೆಸಿದ ಘಟನೆ ನಡೆದಿದೆ. ರೇಣುಕಾಚಾರ್ಯ ಒಬ್ಬಾಕೆ ನರ್ಸ್ ಜೊತೆ ಯಾವ ರೀತಿ ಕೆಲಸ ಮಾಡಿದರೆಂಬುವುದೂ ಗೊತ್ತು. ಆ ವೇಳೆ ಸರಕಾರದ ಜಮೀನನ್ನು ಸ್ವಾದೀನ ಪಡಿಸಿದ್ದಾರೆ. ಭ್ರಷ್ಟಾಚಾರ ಅಂದ್ರೆ ಬಿಜೆಪಿ, ಬಿಜೆಪಿ ಅಂದ್ರೆ ಭ್ರಷ್ಟಾಚಾರ ಎನ್ನುವಂತಾಗಿದೆ. ಆದರೆ ಕಾಂಗ್ರೆಸ್ ಸರಕಾರ ಭೂ ಮಸೂದೆಯನ್ನು ಜಾರಿಗೆ ತಂದು ಲಕ್ಷಾಂತರ ಮಂದಿಗೆ ಭೂಮಿ ಒದಗಿಸಿದೆ. ಅಕ್ರಮ ಸಕ್ರಮ ಯೋಜನೆಯಿಂದ ಅನೇಕ ಮಂದಿ ಭೂಮಾಲಿಕರಾಗಿದ್ದಾರೆ ಎಂದು ಮೊಯ್ಲಿ ತಿಳಿಸಿದ್ದಾರೆ.

01

03

04

02ಈ ವೇಳೆ ಮಾತನಾಡಿದ ಸಚಿವ ರಮಾನಾಥ ರೈ, ಜನರು ಪ್ರೀತಿಯಿಂದ ಕರೆದಾಗ ಭಜನೆ, ನೇಮ, ಕೋಲಕ್ಕೆ ಹೋಗುತ್ತಿದ್ದೇನೆ ಆದರೆ ಅಭಿವೃದ್ಧಿ ಮರೆತಿಲ್ಲ.ನಾನು ರಾತ್ರಿ ಎರಡು ಗಂಟೆಯವರೆಗೆ ಬಿಡುವಿಲ್ಲದ ಕೆಲಸ ಮಾಡುತ್ತೇನೆ. ನಾನು ಮಲಗುವಾಗ ರಾತ್ರಿ ಎರಡು ಗಂಟೆಯಾಗುತ್ತದೆ ಎಂದು ಪ್ರತಿಕ್ರಿಯಿಸಿದ್ದಾರೆ.

ಸಭೆಯಲ್ಲಿ ಯುವ ಕಾಂಗ್ರೆಸ್ ಮುಖಂಡ ಮಿಥುನ್ ರೈ, ಕಾಂಗ್ರೆಸ್ ವಕ್ತಾರ ಬಿ. ಸುದರ್ಶನ, ಐವನ್ ಡಿ’ಸೋಜಾ, ಮೊಯ್ದೀನ್ ಸಾಹಿಬ್ ಮತ್ತಿತರರು ಮಾತನಾಡಿದರು. ಜಿ.ಪಂ. ಅಭ್ಯರ್ಥಿ ಯುಪಿ ಇಬ್ರಾಹಿಂ, ತಾ.ಪಂ ಅಭ್ಯರ್ಥಿ ಸುನಿಲ್, ಜಿ.ಪಂ ಅಭ್ಯರ್ಥಿ ಕೃಷ್ಣ ಅಮಿನ್, ಗಿರೀಶ್ ಆಳ್ವ, ನಾಬರ್ಟ್ ಮಥಾಯಿಸ್, ಅಪ್ಸತ್, ಹೆರಾಲ್ಡ್ ಲೋಬೋ, ಇಸ್ಮಾಯಿಲ್, ಎ.ಕೆ. ಅಶ್ರಫ್, ಗಿರಿಯಪ್ಪ, ಕಾವ್ಯ, ಮುಹಮ್ಮದ್ ಹನೀಫ್ ಮುಂತಾದವರು ಉಪಸ್ಥಿತರಿದ್ದರು. ಗುರುಪುರ ಬ್ಲಾಕ್ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಪೃಥ್ವಿರಾಜ್ ಸ್ವಾಗತಿಸಿ, ನಿರೂಪಿಸಿದರು.

By suddi9

Leave a Reply

Your email address will not be published. Required fields are marked *