ಬಂಟ್ವಾಳ : ಶ್ರೀ ಸದಾಶಿವ ದೇವಸ್ಥಾನ ಈಶ್ವರಮಂಗಲ ಸಜಿಪಮೂಡ ವಾಸ್ತು ಅಂದಾಜು ಪ್ರಕಾರ ರೂ.1ಕೋಟಿ ವೆಚ್ಚದಲ್ಲಿ ಪುನರ್ ನಿರ್ಮಾಣಗೊಂಡು 2016 ಮಾರ್ಚ್ 06 ರಿಂದ 11ರ ತನಕ ನವೀಕರಣ ಪುನಃ ಪ್ರತಿಷ್ಠಾಪನಾ ಅಷ್ಟಬಂಧ ಬ್ರಹ್ಮಕಲಶೋತ್ಸವ ಜರಗಲಿದ್ದು ಇದರ ಆಮಂತ್ರಣ ಪತ್ರವನ್ನು ನೀಲೇಶ್ವರ ಕೆ.ಉಚ್ಚಿಲತ್ತಾಯ ಪದ್ಮನಾಭ ತಂತ್ರಿಗಳು ಬಿಡುಗಡೆಗೊಳಿಸಿದರು.
ಈ ಸಮಾರಂಭದಲ್ಲಿ ಮಾಜಿ ಜಿ.ಪಂ.ಅಧ್ಯಕ್ಷ ಹಾಗೂ ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಬಿ.ಸದಾನಂದ ಪೂಂಜ, ಪದಾಧಿಕಾರಿಗಳಾದ ಎಂ.ಸುಬ್ರಹ್ಮಣ್ಯ ಭಟ್, ಎ.ಜಯಶಂಕರ ಬ್ರಾಸಿತ್ತಾಯ, ಕೆ.ಸದಾನಂದ ಶೆಟ್ಟಿ, ಯೋಗೀಶ್ ಬೆಳ್ಚಾಡ, ಕೆ.ಪದ್ಮನಾಭ ಮಯ್ಯ , ದೇವಿಪ್ರಸಾದ್ ಪೂಂಜ ಬಿ. ಉಪಸ್ಥಿತರಿದ್ದರು.
