ಮುಚ್ಚೂರು:ನಾಗಮಂಡಲ ಉತ್ಸವವು ಶಿವ ನಾಗ, ವಿಷ್ಣುನಾಗ ಇವುಗಳ ವ್ಯತ್ಯಾಸ ಅರಿತು ನಾಗಾರಾಧನೆ ನಡೆಯಬೇಕು. ನೈಸರ್ಗಿಕ ವಸ್ತುಗಳನ್ನು ಉಪಯೋಗಿಸಿ ನಾಗಮಂಡಲ ಮಾಡಬೇಕು. ರಾಸಾಯನಿಕ ವಸ್ತುಗಳನ್ನು ಬಳಸಿ, ನಾಗರಾಧನೆ ಮಾಡಿವುದರಿಂದ ಪುಣ್ಯ ಪ್ರಾಪ್ತಿಯಾಗದು ಎಂದು ವಿದ್ವಾನ್ ವೇ.ಮೂ. ಪಂಜ ಭಾಸ್ಕರ ಭಟ್ ಹೇಳಿದರು.ಶ್ರೀ ಕ್ಷೇತ್ರ ಮುಚ್ಚೂರು ಶ್ರೀ ದುರ್ಗಾಪರಮೇಶ್ವರೀ  ದೇವಸ್ಥಾನದಲ್ಲಿಗುರುವಾರ ರಾತ್ರಿ  ಬ್ರಹ್ಮಕಲಶಾಭಿಷೇಕ ಮತ್ತು ನಾಗಮಂಡಲ ಪುಣ್ಯೋತ್ಸವದಂಗವಾಗಿ ಏರ್ಪಡಿಸಲಾಗಿದ್ದ ಧಾರ್ಮಿಕ ಸಭೆಯಲ್ಲಿ ಧಾರ್ಮಿಕ ಉಪನ್ಯಾಸ ನೀಡಿದರು. IMG_7225

IMG_7248

2 (2)

ಶ್ರೀ ಸುಬ್ರಹ್ಮಣ್ಯ ಮಠಾದೀಶ ವಿದ್ಯಾಪ್ರಸನ್ನ ತೀರ್ಥ ಸ್ವಾಮೀಜಿ ಆಶೀರ್ವಚನ ನೀಡಿ,ನಾಗದೇವರ ಆವಾಸ ಸ್ಥಾನವಾಗಿರುವ ಈ ಕರಾವಳಿಯಲ್ಲಿ ನಾಗನೇ ಉನ್ನತಿಗೆ ಕಾರಣ. ನಾಗದೇವರ ಆರಾಧನೆಯಿಂದ ಖಂಡಿತ ಒಳಿತಾಗುವುದು. ಅಭಿವೃದ್ಧಿಯ ಹೆಸರಿನಲ್ಲಿ ನಾಗದೇವರ ತಾಣಗಳನ್ನು , ನಾಗ ನಡೆಯ ಹಾದಿಯನ್ನು ನಾಶ ಮಾಡುವುದರಿಂದ ನಮಗೆ ಉಳಿಗಾಲವಿಲ್ಲ ಎಂದು ನುಡಿದರು.
ಶ್ರೀ ಕ್ಷೇತ್ರ ಕಟೀಲು ವೇ.ಮೂ. ವಾಸುದೇವ ಆಸ್ರಣ್ಣ ಅಧ್ಯಕ್ಷತೆ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಪಾಲ್ಗೊಂಡ ಯುಪಿಸಿಎಲ್ (ಅದಾನಿ ಗ್ರೂಪ್)ನ ಕಿಶೋರ್ ಆಳ್ವ ಅವರು `ಯುಪಿಸಿಎಲ್ ವಿಸ್ತರಣೆಯಾಗುವುದು ಸಹಜ ಬೆಳವಣಿಗೆಯಾದರೂ ಸ್ಥಳೀಯ ಜನರ ಹಿತಾಸಕ್ತಿ, ಧಾರ್ಮಿಕ, ಸಾಂಸ್ಕೃತಿಕ  ನೆಲೆಗಳಿಗೆ ಹಾನಿಯಾಗದಂತೆ ನೋಡಿಕೊಳ್ಳುವ ಜವಾಬ್ದಾರಿ ಕಂಪೆನಿಗಿದೆ’ ಎಂದರು.

ಮುಖ್ಯಅತಿಥಿಗಳಾಗಿ ಸಂಸದ ನಳಿನ್ ಕುಮಾರ್ ಕಟೀಲು, ಡಾ.ಸುರೇಶ್ ರಾವ್ ಕಟೀಲು, ಏಳಿಂಜೆ ಕೊಂಜಾಲಗುತ್ತು ಪ್ರಭಾಕರ ಶೆಟ್ಟಿ, ದ.ಕ. ಜಿಲ್ಲಾ ಕಸಾಪ ನೂತನ ಅಧ್ಯಕ್ಷ ಪ್ರದೀಪ್ ಕುಮಾರ್ ಕಲ್ಕುರಾ, , ಮುಚ್ಚೂರು ಚಂದ್ರಹಾಸ ಶೆಟ್ಟಿ ಮುಂಬೈ, ಸಾಯಿರಾಧಾ ಗ್ರೂಪ್ಸ್ನ ಮನೋಹರ ಶೆಟ್ಟಿ,  ಬ್ರಹ್ಮಶ್ರೀ ವಿಷ್ಣುಮೂರ್ತಿ  ತಂತ್ರಿ,  ಬ್ರಹ್ಮಶ್ರೀ ವೇಂಕಟೇಶ ತಂತ್ರಿ,  ನಾಗಪಾತ್ರಿ ಸಗ್ರಿ ಗೋಪಾಲಕೃಷ್ಣ ಸಾಮಗ ಪಾಲ್ಗೊಂಡಿದ್ದರು. ಸ್ವಾಗತ ಸಮಿತಿ ಕಾರ್ಯಾಧ್ಯಕ್ಷ ಮುಕ್ತಾನಂದ ಶೆಟ್ಟಿ ಮುಚ್ಚೂರು, ಅಧ್ಯಕ್ಷ ಪ್ರಸಾದ್ ಶೆಟ್ಟಿ ಮುಚ್ಚೂರು ಬಾಳಿಕೆ, ಆನುವಂಶಿಕ ಆಡಳಿತ ಮೊಕ್ತೇಸರ ಮುಚ್ಚೂರು ಹರಿಭಟ್, ಪ್ರ. ಕಾರ್ಯದರ್ಶಿ  ದಯಾನಂದ ಐ. ಶೆಟ್ಟಿ, ಪ್ರಧಾನ ಅರ್ಚಕ ಮುಚ್ಚೂರು ಅನಂತ ಭಟ್ , ವಿವಿಧ ಸಮಿತಿಗಳ ಪ್ರಮುಖರು ಉಪಸ್ಥಿತರಿದ್ದರು.

ಸನ್ಮಾನ: ಅಧ್ಯಕ್ಷ ಪ್ರಸಾದ್ ಶೆಟ್ಟಿ ಮುಚ್ಚೂರು ಬಾಳಿಕೆ, ದೇವಿಪ್ರಸಾದ್ ಶೆಟ್ಟಿ ಕೆಳಗಿನ ಬಾಳಿಕೆ, ವಾರಿಜಾ ಜಗನ್ನಾಥ ಶೆಟ್ಟಿ ಮುಚ್ಚೂರು, ಹರಿಭಟ್ ಮುಚ್ಚೂರು, ಶ್ಯಾಮ್ಪ್ರಸಾದ್ ಬೆಂಗಳೂರು, ಡಾ.ಸುರೇಶ್ ರಾವ್ ಕಟೀಲು , ಮಾಧವಿ ಹರಿಭಟ್, ಪಂಜ ಭಾಸ್ಕರ ಭಟ್, ಮುಚ್ಚೂರು ಮುಗೇರ ಪರಾರಿ ಅಶೋಕ್ ಬಲ್ಲಾಳ್, ಬಾಲಕೃಷ್ಣ ಶೆಟ್ಟಿ ಮುಚ್ಚೂರು ಇವರನ್ನು ಸಮ್ಮಾನಿಸಲಾಯಿತು.
ಸ್ವಾಗತ ಸಮಿತಿ ಅಧ್ಯಕ್ಷ ಶ್ರೀನಿವಾಸ ಭಟ್ ಸ್ವಾಗತಿಸಿದರು. ಕೆ.ವಿ. ರಮಣ್ ಮತ್ತು ಸುಧಾಕರ ರಾವ್ ಪೇಜಾವರ ನಿರೂಪಿಸಿದರು. ಸಾಂಸ್ಕೃತಿಕ ಸಮಿತಿ ಕಾರ್ಯದರ್ಶಿ  ಪ್ರಶಾಂತ್ ಶೆಟ್ಟಿ ವಂದಿಸಿದರು

By suddi9

Leave a Reply

Your email address will not be published. Required fields are marked *