ಮಂಗಳೂರು: ಏಳನೇ ಅಖಿಲ ಕರ್ನಾಟಕ ಬೆಳದಿಂಗಳ ಸಾಹಿತ್ಯ ಸಮ್ಮೇಳನ ಮಾರ್ಚ್ 23 ರಂದು ಕಾರ್ಕಳ ತಾಲೂಕಿನ ಸಾಣೂರು ಪ್ರಕೃತಿ ಗ್ರೂಫ್ ಆಫ್ ಇನ್ಸಿಟ್ಯುಶನ್‍ನಲ್ಲಿ ನಡೆಯಲಿದೆ ಎಂದು ಸಮ್ಮೇಳನ ಸಮಿತಿ ಅಧ್ಯಕ್ಷ ಶೇಖರ ಅಜೆಕಾರು ತಿಳಿಸಿದರು.
ಅವರು ಮಂಗಳೂರಿನ ಪತ್ರಿಕಾ ಭವನದಲ್ಲಿ ಪತ್ರಿಕಾ ಗೋಷ್ಠಿಯಲ್ಲಿ ಈ ವಿಷಯವನ್ನು ಪ್ರಕಟಿಸಿದರು. ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯ ಆರು ಕಡೆ ಬೆಳದಿಂಗಳ ಸಮ್ಮೇಳನವನ್ನು ಸರ್ವರ ಸಹಕಾರದಿಂದ ನಡೆಸಿಕೊಂಡು ಬರಲಾಗಿದೆ. ಸಮಿತಿಯ ಮನವಿಯನ್ನು ಮನ್ನಿಸಿದ ಪ್ರಕೃತಿ ಗ್ರೂಫ್ ಆಫ್  ಇನ್ಸಿಟ್ಯೂಶನ್‍ನ ಅಧ್ಯಕ್ಷರಾದ ಜೆರಾಲ್ಡ್ ಕ್ರಾಸ್ತಾ ಅವರು ತಮ್ಮ ಶಿಕ್ಷಣ ಸಂಸ್ಥೆಯ ಸುಂದರ ಪರಿಸರದಲ್ಲಿ ನಡೆಯಲು ಅವಕಾಶ ಮಾಡಿ ಕೊಟ್ಟಿದ್ದಾರೆ ಎಂದು ಅವರು ತಿಳಿಸಿದರು. ಆರು ವರ್ಷಗಳಲ್ಲಿ ವೈವಿಧ್ಯಮಯ ಪರಿಸರಗಳಲ್ಲಿ , ವಿಶಷ್ಠ ರೀತಿಯಲ್ಲಿ ಬೆಳದಿಂಗ¼ ಸಮ್ಮೇಳನ ನಡೆಯುತ್ತಾ ಬಂದಿದ್ದು ಸಾಹಿತ್ಯ ಲೋಕದ ಗಮನ ಸೆಳೆದಿದೆ. ಸಾಹಿತ್ಯಾಸಕ್ತರು ಮತ್ತು ಎಲ್ಲರೂ ಈ ಹೊಸ ಹಾದಿಯ ಕಾರ್ಯಕ್ರಮಕ್ಕೆ ಪ್ರೋತ್ಸಾಹ ನೀಡ ಬೇಕು. ನಾನಂತೂ ಕಳೆದ ಎಲ್ಲಾ ಸಮ್ಮೇಳನಗಳಲ್ಲಿ ಸ್ವತಃ ಭಾಗವಹಿಸಿ ಶೇಖರ ಅಜೆಕಾರು ಮತ್ತು ಅವರ ತಂಡದವರನ್ನು  ಪ್ರೋತ್ಸಾಹಿಸಿದ್ದೇನೆ ಎಂದು ಕನ್ನಡ ಸಾಹಿತ್ಯ ಪರಿಷತ್ ಮಾಜಿ ರಾಜ್ಯಾಧ್ಯಕ್ಷ, ಸಮಿತಿಯ ಗೌರವಾಧ್ಯಕ್ಷ ಹರಿಕೃಷ್ಣ ಪುನರೂರು ಅಭಿಪ್ರಾಯ ಪಟ್ಟರು. ಈ ಬಾರಿ ಶತ ಕವಿಗೋಷ್ಠಿ ಎಂಬ ವಿನೂತನ ಕಲ್ಪನೆಯೊಂದಿಗೆ ಬಹು ಭಾಷಾ ಕವಿಗೋಷ್ಠಿ ನೂರಕ್ಕೂ ಹೆಚ್ಚು ಹಿರಿಯ, ಕಿರಿಯ ಕವಿಗಳು ಒಂದೇ ವೇದಿಕೆಯಲ್ಲಿ ಕವನ ವಾಚನ ಮಾಡುವ ಅವಕಾಶ ಇದಾಗಿದೆ. ಸಾಹಿತ್ಯಾಸಕ್ತರಿಗೆ ಮುಕ್ತ ಅವಕಾಶ ಇಲ್ಲಿದೆ.
ಸಮ್ಮೇಳನ ನಡೆದು ಬಂದ ದಾರಿ:
ಕೇಂದ್ರ ಸರ್ಕಾರದ ಹೆಬ್ರಿ ನವೋದಯ ವಿದ್ಯಾಲಯದಲ್ಲಿ ಅಲ್ಲಿನ ಪ್ರಾಂಶುಪಾಲರಾದ ಮಳಯಾಳಂ ಮಾತೃ ಭಾಷಿಕ ಸುರೇಶ್ ಕೆ.ವಿ ಅವರ ಪ್ರೋತ್ಸಾಹದಿಂದ ಆಂಗ್ಲ ಮಾಧ್ಯಮ ಶಾಲೆಗಳಲ್ಲಿ ಆರಂಭವಾದ ಈ ಸಾಹಿತ್ಯ ಅಭಿಯಾನ ಈ ಬಾರಿ ಪ್ರಕೃತಿ ಶಿಕ್ಷಣ ಸಮೂಹ ಸಂಸ್ಥೆಗಳ ಆವರಣಕ್ಕೆ ಬಂದಿದೆ. ಆಂಗ್ಲ ಮಾಧ್ಯಮ ಶಾಲೆಗಳಲ್ಲಿ ಕನ್ನಡದ ಕಲರವದ ಕನಸು ಈ ಮೂಲಕ ಸಾಕಾರಗೊಳ್ಳುತ್ತಿದೆ.
ಅಜೆಕಾರಿನಿಂದ ಹೊರಟ ಬೆಳದಿಂಗಳ ಸಾಹಿತ್ಯ ಸಮ್ಮೇಳನದ ತೇರು ಜೈನ ಪದವಿಪೂರ್ವ ಕಾಲೇಜು-ಮೂಡುಬಿದಿರೆ, ನವೋದಯ ವಿದ್ಯಾಲಯ ಹೆಬ್ರಿ, ಗೋಮಟೇಶ್ವರ ಬೆಟ್ಟ ಕಾರ್ಕಳ, ಬೆಂಗ್ರೆ ವಿದ್ಯಾರ್ಥಿ ಸಂಘ ಯುವಕ ಮಂಡಲ ತೋಟ ಬೆಂಗ್ರೆ ಮಂಗಳೂರು, ಮಹಮ್ಮಾಯಿ ದೇವಾಲಯ ಹಂಚಿಕಟ್ಟೆ ಎಣ್ಣೆಹೊಳೆ ಇಲ್ಲಿ ಸಂಚರಿಸಿ ಸಾಣೂರಿಗೆ ಬಂದಿದೆ.
ಸಾಣೂರು ಪಂಚಾಯತ್ ಅತ್ಯುತ್ತಮ ಪಂಚಾಯತ್ ಪ್ರಶಸ್ತಿ ಪಡೆದಿದೆ. ಈ ಭಾಗದಲ್ಲಿ ನಾಲ್ಕಾರು ಯುವಕ ಮಂಡಲಗಳು ಹಲವು ದಶಕಗಳಿಂದ ಸೇವೆ ಸಲ್ಲಿಸುತ್ತಾ ಬಂದಿವೆ. ಈ ಭಾಗದಲ್ಲಿ ಸಾಹಿತ್ಯದ ಈ ಕಾಯಕ್ರಮ ನಡೆಯುತ್ತಿರುವುದು ಮೊದಲ ಸಲವಾಗಿದೆ.
ಹಿಂದಿನ ಸಮ್ಮೇಳನಗಳ ಅಧ್ಯಕ್ಷತೆಯನ್ನು ಅನುಕ್ರಮವಾಗಿ ಖ್ಯಾತ ಸಾಹಿತಿಗಳಾದ ಎಚ್.ಡುಂಡಿರಾಜ್, ಎಂ.ಎಸ್. ನರಸಿಂಹಮೂರ್ತಿ, ಡಾ. ದೊಡ್ಡರಂಗೇಗೌಡ, ಜಯಂತ ಕಾಯ್ಕಿಣಿ,  ಡಾ. ನಾ. ಮೊಗಸಾಲೆ, ಎ.ಎಸ್.ಎನ್ ಹೆಬ್ಬಾರ್ ವಹಿಸಿದ್ದರು.
ಮಕ್ಕಳ ಪ್ರತಿಭಾ ಪ್ರದರ್ಶನ- ಗೌರವಾರ್ಪಣೆ, ಯುವ ಸಾಧಕರ ಗೌರವ, ವಿವಿಧ ಕ್ಷೇತ್ರಗಳ ಸಾಧಕರನ್ನು ಗೌರವಿಸುವುದು, ಅವರ ಮಾತುಗಳನ್ನು ಕೇಳುವ ಅವಕಾಶ, ಗೋಷ್ಠಿಗಳು ಮತ್ತು ಈ ಬಾರಿ ಶತೋತ್ತರ ಕವಿಗಳ ಭಾಗವಹಿಸುವಿಕೆಯ ಕವಿಗೋಷ್ಠಿ ವಿಶೇಷತೆಯಾಗಿದೆ.

By suddi9

Leave a Reply

Your email address will not be published. Required fields are marked *