ಮಂಗಳೂರು:ಟ್ಯಾಕ್ಸಿ ಸೇವೆ ವೇಗವಾಗಿ ಬೆಳೆಯುತ್ತಿರುವ ಉದ್ಯಮಗಳಲ್ಲಿ ಒಂದು. ಇತ್ತೀಚೆಗೆ ಸಾಮಾನ್ಯವಾಗಿ ಜನರು ಟ್ಯಾಕ್ಸಿ ಸೇವೆಗಳ ಮಾಹಿತಿ ಮತ್ತು ಕಾಯ್ದಿರಿಸುವಿಕೆಗೆ ಇಂಟರ್ನೆಟ್ಟನ್ನು ಬಳಸುತ್ತಾರೆ. ಅದರಲ್ಲೂ ಆ್ಯಪ್ ಆಧಾರಿತ ಟ್ಯಾಕ್ಸಿ ಸೇವೆಗಳು ಮುಂಚೂಣಿಯಲ್ಲಿದ್ದು ಎಲ್ಲಾ ನಗರ ಮತ್ತು ಪ್ರದೇಶಗಳಿಗೆ ವಿಸ್ತರಿಸುತ್ತಿದೆ. ಈ ಸ್ಪರ್ಧಾತ್ಮಕ ಬದಲಾವಣೆಯಿಂದ ತತ್ತರಿಸಿರುವ ಸ್ವಾವಲಂಬಿ ಟ್ಯಾಕ್ಸಿ ಅಪರೇಟರ್ಗಳಿಗೆ ನೆರವಾಗಲು ಮತ್ತು ಜನರಿಗೆ ಅವರ ಬೇಡಿಕೆಗಳಿಗನುಸಾರ ಆಯ್ದ ಪ್ರದೇಶಗಳಲ್ಲಿ ಟ್ಯಾಕ್ಸಿ ಸೇವೆಯನ್ನು ಪಡೆಯಲು ಟ್ಯಾಕ್ಸಿಬುಕ್.ಇನ್( taxibook.in )ವೆಬ್ಸೈಟ್ ಬಹಳ ಉಪಯುಕ್ತವಾಗಿದೆ.

ಟ್ಯಾಕ್ಸಿಬುಕ್.ಇನ್( taxibook.in) ಒಂದು ವಿನೂತನ ವೆಬ್ಸೈಟ್ ಆಗಿದ್ದು, ಇದು ಟ್ಯಾಕ್ಸಿ ಅಪರೇಟರ್ಗಳಿಗೆ ಬಹುದೊಡ್ಡ ಸುವರ್ಣವಕಾಶವನ್ನು ತೆರೆದಿರಿಸಿದೆ. ಸುಲಭವಾಗಿ ಮತ್ತು ತ್ವರಿತವಾಗಿ ಈ ಜಾಲ ತಾಣದಲ್ಲಿ ಟ್ಯಾಕ್ಸಿ ಅಪರೇಟರ್ಗಳು ನೋಂದಾಯಿಸಿಕೊಳ್ಳಬಹುದು. ಈ ಜಾಲ ತಾಣದ ಮೂಲಕ ನೋಂದಾವಣೆಗೊಂಡ ಟ್ಯಾಕ್ಸಿಯು ಲಕ್ಷಾಂತರ ಬಳಕೆದಾರರನ್ನು ಮುಟ್ಟುತ್ತದೆ. ಈ ಜಾಲತಾಣದ ಮೂಲಕ ಬಳಕೆದಾರರು ಟ್ಯಾಕ್ಸಿ ಅಪರೇಟರ್ಗಳನ್ನು ನೇರವಾಗಿ ಸಂಪರ್ಕಿಸಿ ಉತ್ತಮದರದಲ್ಲಿ ಟ್ಯಾಕ್ಸಿ ಸೇವೆಯನ್ನು ಪಡೆಯಬಹುದು.
ಮೊಬೈಲ್ಗೆ ಬಹಳಷ್ಟು ಸೂಕ್ತವಾದ ಜಾಲತಾಣ ಇದಾಗಿದ್ದು, ಸುಲಭವಾಗಿ ಬಳಕೆದಾರರು ಇದನ್ನು ಬಳಸಬಹುದಾಗಿದೆ. ನಗರ, ಪ್ರವಾಸಿ ಸ್ಥಳಗಳು ಮತ್ತು ಸ್ಥಳೀಯವಾಗಿ ಎಲ್ಲಾ ಪ್ರದೇಶಗಳಲ್ಲಿ ಟ್ಯಾಕ್ಸಿ ಸೇವೆ ನೀಡುವವರ ಸಂಪೂರ್ಣ ವಿವರಗಳನ್ನು ದಾಖಲೀಕರಿಸಲು ಅಗತ್ಯವಾದ ಸೌಲಭ್ಯವನ್ನು ಈ ಜಾಲತಾಣ ಒದಗಿಸಿಕೊಡುತ್ತದೆ. ಇದು ಈ ಜಾಲತಾಣದ ವೈಶಿಷ್ಟ್ಯಗಳಲ್ಲಿ ಒಂದು.
ಟ್ಯಾಕ್ಸಿಬುಕ್.ಇನ್ ಜನಸ್ನೇಹಿ ವೆಬ್ಸೈಟ್ ಆಗಿದ್ದು, ಗ್ರಾಹಕರು ತ್ವರಿತವಾಗಿ ಟ್ಯಾಕ್ಸಿಗಳ ಮಾಹಿತಿ ಪಡೆದು, ನೇರವಾಗಿ ಸಂಪಕರ್ಿಸಿ, ತಮ್ಮ ತಮ್ಮ ಬೇಡಿಕೆಗಳಿಗನುಸಾರ ಉತ್ತಮ ದರದಲ್ಲಿ ಟ್ಯಾಕ್ಸಿ ಸೇವೆಯನ್ನು ಪಡೆಯಬಹುದಾಗಿದೆ. ಈ ಮೂಲಕ ಟ್ಯಾಕ್ಸಿಬುಕ್.ಇನ್ ಒಂದೇ ಸೂರಿನಡಿ ಗ್ರಾಹಕರನ್ನು ಮತ್ತು ಸಾರಿಗೆ ಸೌಲಭ್ಯ ಒದಗಿಸುವ ಟ್ಯಾಕ್ಸಿ ಅಪರೇಟರ್ಗಳನ್ನು ಸುಲಭವಾಗಿ ಸಂಪರ್ಕಿಸುವ ಉತ್ತಮ ವೇದಿಕೆಯಾಗಿ ಕಾರ್ಯನಿರ್ವಹಿಸುತ್ತಿದೆ. ಪ್ರವಾಸಿ ಕಾರು-ಬಸ್ಸುಗಳ ನೋಂದಾವಣೆಗಾಗಿ ಮತ್ತು ಹೆಚ್ಚಿನ ಮಾಹಿತಿಗಾಗಿ ಮೊ.9482788877 ನ್ನು ಸಂಪರ್ಕಿಸಬಹುದು.
ಧನ್ಯವಾದಗಳೊಂದಿಗೆ
ಸ್ಥಳ: ಮಂಗಳೂರು
ಭಗವಾನ್ ದಾಸ್.
9482063077
ಕನ್ಸಲ್ಟಂಟ್, ಟ್ಯಾಕ್ಸಿಬುಕ್.ಇನ್