ವಿಟ್ಲ: ಕಾರು ಚಾಲಕನ ಅತಿ ವೇಗ ಹಾಗೂ ಅಜಾರೂಕತೆಯ ಚಾಲನೆಯಿಂದ ಮೊಪೆಡ್ ಸವಾರರಿಬ್ಬರು ಸ್ಥಳದಲ್ಲಿ ಸಾವನ್ನಪ್ಪಿದ ಘಟನೆ ಕಲ್ಲಡ್ಕ ಕಾಂಞಂಗಾಡು ಅಂತರಾಜ್ಯ ಹೆದ್ದಾರಿಯ ಪಡಿಬಾಗಿಲು ಸಮೀಪದ ಮೈರತಿರುವಿನಲ್ಲಿಭಾನುವಾರ ನಡೆದಿದೆ.
ಬೈಕ್ ಸವಾರಕಾಟುಕುಕ್ಕೆಗ್ರಾಮದಪಾಂಡಿಗಾಯ ನಿವಾಸಿ ಉಮೇಶ್ ನಾಯ್ಕ (35), ಸಹಸವಾರಪುಣಚಗ್ರಾಮದಚೆಕ್ಕುತ್ತಿ ನಿವಾಸಿ ವಸಂತ ನಾಯ್ಕ(47) ಮೃತ ದುದೈವಿಗಳಾಗಿದ್ದಾರೆ.ಪುತ್ತೂರುಕೂರ್ನಡ್ಕ ನಿವಾಸಿ ತಲ್ಲತ್ (30) ಎಂಬರ ವಿರುದ್ದ ವಿಟ್ಲಠಾಣೆಯಲ್ಲಿಅತಿ ವೇಗ ಹಾಗೂ ಅಜಾಗರೂಕತೆಯ ಚಾಲನೆಯ ಬಗ್ಗೆ ಪ್ರಕರಣದಾಖಲಾಗಿದೆ.
ಘಟನೆ ವಿವರ:
ಉಮೇಶ್ ಹಾಗೂ ವಸಂತಅವರು ವಾಮಂಜೂರಿನ ಸಂಬಂಧಿಕರ ಮನೆಯಲ್ಲಿ ಸಮ್ಮಾನಕಾರ್ಯಕ್ರಮ ಮುಗಿಸಿಕೊಂಡು ಟಿವಿಎಸ್‍ಎಕ್ಸ್‍ಎಲ್ ಮೊಪೆಡ್‍ನಲ್ಲಿ ಸಾರಡ್ಕಕಡೆಗೆ ಹೋಗುತ್ತಿದ್ದರು.ಕಾಸರಗೋಡುಕಡೆಯಿಂದ 5 ಮಂದಿ ಮಹಿಳೆಯರು ಹಾಗೂ 3 ಮಕ್ಕಳೊಂದಿಗೆ ತಲ್ಲತ್ ಪುತ್ತೂರುಕಡೆಗೆ ಹೋಗುತ್ತಿದ್ದರು.ಮೈರಜಂಕ್ಷನ್ ಸಮೀಪದಕಿರಿದಾದತಿರುವಿನಲ್ಲಿಒಳಮುಖವಾಗಿ ಬಲ ಬದಿಯಲ್ಲಿ ಬಂದಕಾರು ಮೊಪೆಡ್‍ಗೆಡಿಕ್ಕಿಹೊಡೆದಿದೆ.ಸವಾರ ಸಹಿತವಾಗಿ ಮೊಪೆಡ್‍ಅನ್ನುಸುಮಾರು 20 ಅಡಿಯಷ್ಟುದೂರಕ್ಕೆ ಎಳೆದುಕೊಂಡು ಹೋಗಿದೆ.ಡಿಕ್ಕಿಯತೀವ್ರತೆಗೆ ಸಹ ಸವಾರಬೈಕ್ ನಿಂದಪಕ್ಕದಲ್ಲಿದ್ದ 10 ಅಡಿ ಆಳದ ಕಣಿವೆಗೆಎಸೆಯಲ್ಪಟ್ಟಿದ್ದಾರೆ. ಸವಾರನನ್ನುತಕ್ಷಣಆಸ್ಪತ್ರೆಗೆ ಸಾಗಿಸಲಾಯಿತಾದರೂಕುತ್ತಿಗೆ ಹಾಗೂ ತಲೆತ ಭಾಗಕ್ಕೆಗಂಬೀರವಾಗಿಗಾಯವಾದ್ದರಿಂದ ನಿಧನರಾದರು.ಸ್ಥಳದಲ್ಲಿ ಸಾರ್ವಜನಿಕರು ಸೇರಿದರಾದರೂ ಸಹ ಸವಾರಕಣಿವೆಯಲ್ಲಿ ಬಿದ್ದುಗಾಯಗೊಂಡದ್ದು ತಿಳಿಯುವಷ್ಟರಲ್ಲಿ ಸುಮಾರುಅರ್ಧತಾಸು ಕಳೆದಿದೆ ಎನ್ನಲಾಗಿದ್ದು, ತೀವ್ರವಾದರಕ್ತ ಸಾವ್ರದಿಂದಅವರೂಆಸ್ಪತ್ರೆಗೆ ಸಾಗಿಸುವ ದಾರಿ ಮದ್ಯೆ ಅಸು ನೀಗಿದ್ದಾರೆ.
ವಿವಾಹವಾಗಿ ನಾಲ್ಕು ವರ್ಷ:
ಪಾಂಡಿಗಾಯ ನಿವಾಸಿ ಉಮೇಶ್ ನಾಯ್ಕಅವರಿಗೆ ವಿವಾಹವಾಗಿ 4 ವರ್ಷಗಳಾಗಿದ್ದು, ಪತ್ನಿ ಹಾಗೂ ಇಬ್ಬರು ಪುತ್ರಿಯರಿದ್ದಾರೆನ್ನಲಾಗಿದೆ.ಚೆಕ್ಕುತ್ತಿ ನಿವಾಸಿ ವಸಂತ ನಾಯ್ಕಪತ್ನಿ, ಇಬ್ಬರುಪುತ್ರರುಹಾಗೂ ಓರ್ವ ಪುತ್ರಿಯನ್ನುಅಗಲಿದ್ದಾರೆ.
ತಿಂಗಳಲ್ಲಿ ಎರಡನೇಅಪಘಾತ:
ಮುಂಭಾಗದಿಂದಬಂದ ವಾಹನಗಳಿಗೆ ಸರಿಯಾಗಿ ಹೋಗಲು ಸ್ಥಳವಾಕಾಶದ ಕೊರತೆಇದ್ದು, ಫೆ.5ರಂದು ಓಮ್ನಿಯನ್ನು ಹಿಂದಿಕ್ಕುವ ಸಂದರ್ಭ ಮುಂಭಾಗದಿಂದ ಬಂದ ಖಾಸಗೀ ಬಸ್ಸು ಬಂದಿದ್ದು, ಬೈಕ್ ನಿಯಂತ್ರಣಕ್ಕೆ ಬಾರದೆ ಬಸ್ಸು ಹಾಗೂ ಓಮ್ನಿಯ ನಡುವೆ ಸಿಲುಕಿ ಹಾಕಿಕೊಂಡಘಟನೆಇದೇ ಸ್ಥಳದಲ್ಲಿ ನಡೆದಿದ್ದು, ಡಿಕ್ಕಿಯ ವೇಗಕ್ಕೆ ಶಿರಕವಚ ಚಿದ್ರವಾಗಿದ್ದು, ಬೈಕ್ ಮುಂಭಾಗ ಸಂಪೂರ್ಣಜಖಂಗೊಂಡಿತ್ತು.

