ಬಜಪೆ: ದಕ್ಷಿಣ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವ.ಬಿ.ರಮಾನಾಥ ರೈ ಅವರ ತುಲಾಭಾರ ಸೇವೆ ಮಂಗಳವಾರ ಅದ್ಯಪಾಡಿ ಶ್ರೀ ಆದಿನಾಥೇಶ್ವರ ದೇವರ ಸನ್ನಿಯಲ್ಲಿ ಜರಗಿತು. ಅದ್ಯಪಾಡಿ ಗ್ರಾಮದ ಕಾಂಗ್ರೆಸ್ ಕಾರ್ಯಕರ್ತರು ರಮಾನಾಥ ರೈ ಅವರ ಶ್ರೇಯಸ್ಸಿಗಾಗಿ 82 ಕೆ.ಜಿ ಎಳ್ಳೆಣ್ಣೆಯಿಂದ ತುಲಾಭಾರ ನಡೆಸಿ ಕ್ಷೇತ್ರಕ್ಕೆ ಸಮರ್ಪಿಸಿದರು.

16vm. Ramanatha Rai (1) 16vm. Ramanatha Rai
ಪ್ರಧಾನ ಅರ್ಚಕ ಸದಾಶಿವ ಭಟ್ ಪ್ರಸಾದ ವಿತರಿಸಿದರು. ದೇವಳದ ಆಡಳಿತಾಕಾರಿ ಹಾಗೂ ಧಾರ್ಮಿಕದತ್ತಿ ಇಲಾಖೆಯ ಪ್ರಭಾರ ಸಹಾಯಕ ಆಯುಕ್ತ ಎ.ಆರ್.ಪ್ರಭಾಕರ್, ಜಿ.ಪಂ ಸದಸ್ಯ, ಯು.ಪಿ.ಇಬ್ರಾಹಿಂ, ಅದ್ಯಪಾಡಿ ದೈವಂಗಳಗುಡ್ಡೆ ಶ್ರೀನಿಲಕಂಠ ಉಮಾಮಹೇಶ್ವರ ದೇವಳದ ಆಡಳಿತ ಮೊಕ್ತೇಸರ ಶೆಡ್ಡೆ ಮಂಜುನಾಥ ಭಂಡಾರಿ, ಮುಖಂಡರಾದ ಗಿರಿಯಪ್ಪ ಸಾಲ್ಯಾನ್, ಗಿರೀಶ್ ಆಳ್ವ, ಭಾಸ್ಕರ ಮಲ್ಲಿ ಮುಂತಾದವರು ಉಪಸ್ಥಿತರಿದ್ಧರು.

By suddi9

Leave a Reply

Your email address will not be published. Required fields are marked *