ಕೈಕಂಬ:ಪೊಳಲಿ ಶ್ರೀ ರಾಜರಾಜೇಶ್ವರೀ ದೇವಸ್ತಾನದ ವಾರ್ಷಿಕ ಜಾತ್ರೋತ್ಸವವು ಮಾ. 14 ರಂದು ದ್ವಜರೋಹಣಗೊಂಡು ಎ.11 ಸೋಮವಾರ ಅವಭೃತ ಸ್ನಾನ ಆರಾಟ ದೊಂದಿಗೆ 28 ದಿನಗಳಜಾತ್ರೋತ್ಸವವು ಸಂಪನ್ನಗೊಂಡಿತು. ಈ ಜಾತ್ರೋತ್ಸವಕ್ಕೆ ಈ ಮೊದಲಿನ ಜಾತ್ರೋತ್ಸವಕ್ಕಿಂತ ಅಧಿಕ ಸಂಖ್ಯೆಯಲ್ಲಿ ಭಕ್ತಾಧಿಗಳು ಶ್ರೀ ದೇವಿಯ ಜಾತ್ರೋತ್ಸವದಲ್ಲಿ ಪಾಲ್ಗೊಂಡಿದ್ದರು. 28 ದಿನದಲ್ಲಿ 778 ಸೀರೆಯನ್ನು ದೇವಿಗೆ ಭಕ್ತಾಧಿಗಳು ಅರ್ಪಿಸಿದರು, ತುಲಾಭಾರ ಸೇವೆ 559 ಸರ್ವಾಲಾಂಕಾರಪೂಜೆ 560 ಹೂವಿನಪೂಜೆ 36,000 ,ಕುಂಕುಮಾರ್ಚನೆ 25,000, ಖಡ್ಗಮಾಲಾಪೂಜೆ ಇತ್ಯಾದಿ ಸೇವೆಗಳನ್ನು ಶ್ರೀ ಕ್ಷೇತ್ರದಲ್ಲಿ ಭಕ್ತಾಧಿಗಳು ಪೂರೈಸಿದರು. ನೂರಾರು ಕಾರ್ಯಕರ್ತರು ದೇವಿ ಸನ್ನಿಧಿಯಲ್ಲಿ ಸ್ವಇಚ್ಚೆಯಿಂದ ಭಾಗವಹಿಸಿ ಶಿಸ್ತುಭದ್ಧವಾಗಿ ಭಕ್ತರಿಗೆ ಅನುಕೂಲವಾಗುವಂತೆ ಸಹಕರಿಸಿದರು.
12 vp polali

1

2

312 vp polali 1

ಭರ್ಜರಿ ಕಲ್ಲಂಗಡಿ ವ್ಯಾಪಾರ

ವರ್ಷಂಪ್ರತಿ 20ನೇ ದಂಡಮಾಲೆಗೆ ಕಲ್ಲಂಗಡಿ ದೇವರಿಗೆ ಇಟ್ಟು ಮಾರಟಮಾಡುವ ಪದ್ದತಿ ಆದರೆ ಭಕ್ತರ ಬೇಡಿಕೆಯಿಂದ ಈ ಭಾರಿ 15ನೇ ದಂಡಮಾಲೆಗೆ ಕಲ್ಲಂಗಡಿ ಮಾರಟಮಾಡಲಾಯಿತು ಕಡೆ ಚೆಂಡು ದಿವಸವೇ ಕಲ್ಲಂಗಡಿ ಮುಗಿದು. ಭಕ್ತಾದಿಗಳು ಕಲ್ಲಂಗಡಿ ಕೊಂಡುಕೊಳ್ಳಲು ಆಗದೇ ಎಷ್ಟು ಕ್ರಯ ಆದರು ಪರವಾಗಿಲ್ಲ ಒಂದಾದರು ಕೊಡಿ ಎಂದು ಅಂಗಡಿಯವರಲ್ಲಿ ವಿನಂತಿಸುತ್ತಿದ್ದರು. ಪೊಳಲಿಯಲ್ಲಿ ಎಲ್ಲಾ ವ್ಯಾಪರಸ್ತರಿಗೆ ಉತ್ತಮ ವ್ಯಾಪಾರವಗಿರುವುದು ಇಲ್ಲಿಯ ವಿಶೇಷ.

ದಿನಂಪ್ರತಿ ದೇವಳದಲ್ಲಿ ಸಾವಿರಾರು ಭಕ್ತರು ಅನ್ನದಾನ ಸ್ವೀಕರಿಸಿದರು. ಅನ್ನ ಚತ್ರದಲ್ಲಿ ಸಂಘ ಸಂಸ್ಥೆಗಳ ಯುವಕರು ಮಹಿಳಾ ಸಂಘಟನೆಗಳು ನಿರಂತರವಾಗಿ ಸಹಕರಿಸುವರು.

By suddi9

Leave a Reply

Your email address will not be published. Required fields are marked *