ಕೈಕಂಬ: ಶನಿವಾರ ಸತತ ಗಾಳಿ ಮಳೆಯ ಸಂದರ್ಭ ಬಂಟ್ವಾಳ ತಾಲೂಕಿನ ಅಮ್ಮುಂಜೆ ಗ್ರಾಮದ ವಿನಾಯಕಸದಾಶಿವ ದೇವಸ್ಥಾನದ ಹತ್ತಿರದ ಗದ್ದೆಗೆ ವಿದ್ಯುತ್ ತಂತಿ ಕಡಿದು ಬಿದ್ದ ಪರಿಣಾಮ ಗದ್ದೆಯಲ್ಲಿ ಮೇಯುತ್ತಿದ್ದ ಸ್ಥಳಿಯವರಾದ ವಿನಯ ಎಂಬವರಿಗೆ ಸೇರಿದ ದನ ಹಾಗೂ ಗದ್ದೆಯ ನೀರಿನಲ್ಲಿ ಮೇವನ್ನು ಹುಡುಕುತ್ತಾ ಬಂದ ನರಿ ಪ್ರಾಣ ಕಳೆದು ಕೊಂಡ ಘಟನೆ ಶನಿವಾರ ಮಧ್ಯಾಹ್ನ ನಡೆದಿದೆ.
ಸ್ಥಳೀಯರು ಮೆಸ್ಕಾಂ ಇಲಾಖೆಗೆ ಮಹಿತಿ ಮುಟ್ಟಿಸಿದ ಪರಿಣಾಮ ಮೆಸ್ಕಾಂ ಇಲಾಖೆಯವರು ಸ್ಥಳಕ್ಕೇ ಆಗಮಿಸಿ ತುರ್ತು ಕ್ರಮ ಕೈಗೊಂಡು ಹೆಚ್ಚಿನ ಅನಾಹುತ ಸಂಭವಿಸುವುದನ್ನು ತಪ್ಪಿಸಿದ್ದಾರೆ.
ಅಲ್ಲದೆ ಲಕ್ಷ್ಮಿ ಎಂಬವರ ದನವೊಂದಕ್ಕೆ ವಿದ್ಯುತ್ ವಯರ್ ತಾಗಿ ಪ್ರಾಣಾಪಯದಿಂದ ಪಾರಾಗಿದೆ . ಈ ಘಟನೆಯನ್ನು ನೋಡಲು ತೆರಲಿದ್ದ ಸ್ಥಳೀಯ ಮಹಿಳೆಯೊಬ್ಬರು ಅದೃಷ್ಟವಶಾತ್ ಪಾರಾಗಿದ್ದಾರೆ. ಬೆಂಜನಪದವಿನ ಪಶುವೈದ್ಯಾಧಿಕಾರಿ ಸ್ಥಳಕ್ಕೆ ಆಗಮಿಸಿ ಚಿಕಿತ್ಸೆ ನೀಡಿದ್ದಾರೆ.

