ಮಂಗಳೂರು: ಅಜೇಯ್ ಫ್ರೆಂಡ್ಸ್ ಸರ್ಕಲ್ ಗಣೇಶಪುರ- ಕಾಟಿಪಳ್ಳ ಇದರ ಆಶ್ರಯದಲ್ಲಿ ವಿಶೇಷ ಆರ್ಥಿಕ ವಲಯ ಮಂಗಳೂರು ಇದರ ಸಹಕಾರದೊಂದಿಗೆ ಬಡ ವಿದ್ಯಾರ್ಥಿಗಳಿಗೆ ಉಚಿತ ಪುಸ್ತಕ ವಿತರಣಾ ಕಾರ್ಯಕ್ರಮ ಶಾರದಾ ಭಜನಾ ಮಂಡಳಿ ಮಂಗಳಪೇಟೆ ಇಲ್ಲಿ ಇತ್ತೀಚೆಗೆ ಜರಗಿತು.ಸಮಾರಂಭದ ಅಧ್ಯಕ್ಷತೆಯನ್ನು ಸದಾಶಿವ ಐತಾಳ್, ವಕೀಲರು ಕೃಷ್ಣಾಪುರ ಇವರು ವಹಿಸಿದ್ದರು.


ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಗಣೇಶಪುರ ಪಂಚಮಿ ಸ್ಟುಡಿಯೋ ಮಾಲಕ ದೇವರಾಜ್ ಶೆಟ್ಟಿ, ಸಿವಿಲ್ ಕಂಟ್ರಾಕ್ಟರ್ ಪಿ.ಜಿ. ಶಂಕರ್ ದೇವಾಡಿಗ ಬೊಳ್ಳಾಜೆ, ಕಿರಣ್ ಕುಮಾರ್ ರೈ, ಉದ್ಯಮಿ ಸತೀಶ್ ಆಚಾರ್, ಮಂಗಳಪೇಟೆ ಶಾರದಾ ಭಜನಾ ಮಂಡಳಿಯ ಅಧ್ಯಕ್ಷ ಕೃಷ್ಣಕುಮಾರ್, ಮಂಗಳಪೇಟೆ ಶಾರದಾ ಭಜನಾ ಮಂಡಳಿಯ ಪ್ರಧಾನ ಕಾರ್ಯದರ್ಶಿ ನಾಗರಾಜ ಶೆಟ್ಟಿಗಾರ್, ಅಜೇಯ್ ಫ್ರೆಂಡ್ಸ್ ಸರ್ಕಲ್ನ ಗೌರವ ಸಲಹೆಗಾರ ವಾದಿರಾಜ ಭಟ್, ಅಜೇಯ್ ಫ್ರೆಂಡ್ಸ್ ಸರ್ಕಲ್ನ ಅಧ್ಯಕ್ಷ ನವೀನ್ ಶೆಟ್ಟಿ, ಉಪಸ್ಥಿತರಿದ್ದರು. 1ರಿಂದ 10ನೇ ತರಗತಿ ವರೆಗಿನ ಸುಮಾರು 90 ಮಕ್ಕಳಿಗೆ ಪುಸ್ತಕವನ್ನು ವಿತರಿಸಲಾಯಿತು. ಶ್ರೀ ಲೋಕನಾಥ ಭಂಡಾರಿ ಕಾರ್ಯಕ್ರಮ ನಿರೂಪಿಸಿದರು. ನಾಗೇಶ್ ದೇವಾಡಿಗ ವಂದಿಸಿದರು.