ಕೈಕಂಬ: ಮೊನ್ನೆಯಿಂದ ಸುರಿಯುತ್ತಿರುವ ಭಾರೀ ಮಳೆಗೆ ಗುರುಪುರ ಕೈಕಂಬ ದ್ವಾರದಿಂದ ಪೊಳಲಿ ಮುಖಾಂತರ ಬಿ.ಸಿ.ರೋಡ್ಗೆ ಸಂಪರ್ಕ ಕಲ್ಪಿಸುವ ವಿವೇಕಾನಂದ ರಸ್ತೆಯ ಕಾಜಿಲ ತಿರುವು ಬಳಿ ರಸ್ತೆಯಲ್ಲಿ ಭಾರೀ ಗಾತ್ರದ ಗುಂಡಿಯೊಂದು ಬಿದ್ದು ಕುಸಿಯುವ ಹಂತದಲ್ಲಿದೆ. ಗುರುಪುರ ಕೈಕಂಬ ರಾಷ್ಟ್ರೀಯ ಹೆದ್ದಾರಿಯಿಂದ ಬಿ.ಸಿ.ರೋಡ್, ಧರ್ಮಸ್ಥಳ, ಹಾಸನ, ಬೆಂಗಳೂರು ಮುಂತಾದ ಕಡೆ ವಾಹನಗಳು ಸಂಚರಿಸುವ ಪ್ರಧಾನ ರಸ್ತೆ ಇದಾಗಿದ್ದು ಒಂದು ವೇಳೆ ರಸ್ತೆ ಕುಸಿದಿದ್ದೇ ಆದರೆ ಸಂಪರ್ಕದ ಕೊಂಡಿಯೇ ಕಳಚಲಿದೆ. ಕೈಕಂಬದ ಪೊಳಲಿ ದ್ವಾರದಿಂದ ಚರಂಡಿ ಇಲ್ಲದೆ ಮೇಲಿನಿಂದಲೇ ಹರಿದುಬರುವ ನೀರು ಒಂದೇ ಸಮನೆ ಹರಿದ ಪರಿಣಾಮ ಕಾಜಿಲ ತಿರುವ ಬಳಿ ನೀರಿನ ರಭಸಕ್ಕೆ ಈ ಗುಂಡಿ ಮೂಡಿದೆ ಎಂದು ತಿಳಿದುಬಂದಿದೆ. ರಸ್ತೆಗೆ ಆವರಣಗೋಡೆ ಇಲ್ಲದೇ ಇರುವುದು ಕೂಡಾ ಈ ಸ್ಥಿತಿಗೆ ಕಾರಣ ಎಂದು ತಿಳಿದುಬಂದಿದೆ.
4

27 vpkaikamba bcroad raste

k 1 k 3

k2

ನೀರು ಹರಿಯುತ್ತಾ ಇರುವುದರಿಂದ ರಸ್ತೆಯ ಒಂದು ಅಂಚಿನಲ್ಲಿ ಬಿರುಕು ಬಿಟ್ಟಿರುವುದರಿಂದ ರಸ್ತೆ ಕುಸಿದು ಸಂಪರ್ಕವೇ ಕಳಚುವ ಸಾಧ್ಯತೆಯೂ ಇದೆ. ಈ ರಸ್ತೆಯಲ್ಲಿ ಬಸ್ ಸೇರಿ ಎಲ್ಲಾ ನಮೂನೆಯ ವಾಹನಗಳು ಸಂಚರಿಸುತ್ತಿದ್ದು, ವಾಹನಗಳ ಭಾರಕ್ಕೆ ರಸ್ತೆ ಬಿರುಕು ಬಿಟ್ಟಿದೆಯಲ್ಲದೆ ವಾಹನಗಳು ಕುಸಿದು ಅಪಾಯವಾಗುವ ಹಂತಕ್ಕೆ ಮುಂದುವರಿದಿದೆ. ರಸ್ತೆಯ ಬಗ್ಗೆ ಇದುವರೆಗೆ ಯಾವುದೇ ಅಧಿಕಾರಿಗಳಾಗಲೀ, ರಾಜಕೀಯ ಮುಖಂಡರಾಗಲೀ ಭೇಟಿಕೊಟ್ಟಿಲ್ಲ. ಸ್ಥಳೀಯರು ಬಜ್ಪೆ ಪೊಲೀಸರಿಗೆ ಮಾಹಿತಿ ನೀಡಿದ್ದು, ಅವರು ಸದ್ಯಕ್ಕೆ ಬ್ಯಾರಿಕೇಡ್ ಅಳವಡಿಸಿದ್ದಾರೆ. ಸಾರ್ವಜನಿಕರು ಮರದ ಎಲೆ, ಹಾಗೂ ಗೆಲ್ಲುಗಳನ್ನು ಅಳವಡಿಸಿ ಬಂದುಹೋಗುವ ವಾಹನಗಳಿಗೆ ಅಪಾಯದ ಮುನ್ಸೂಚನೆ ನೀಡಲಾಗುತ್ತಿದೆ.

ಕೈಕಂಬ ದ್ವಾರದಿಂದ ಬಿ.ಸಿ.ರೋಡ್ಗೆ ಸಣಪರ್ಕ ಕಲ್ಪಿಸುವ ರಸ್ತೆ ಇದಾಗಿದ್ದರೂ ಅತ್ಯಂತ ಕಿರಿದಾಗಿದೆ. ಕೆಲವರ್ಷಗಳ ಹಿಂದೆ ಈ ರಸ್ತೆಯನ್ನು ಅಗಲ ಮಾಡಬೇಕೆಂದು ಕಾಮಗಾರಿ ನಡೆಸಲಾಯಿತಾದರೂ ರಸ್ತೆಯನ್ನು ಮೊದಲಿನಷ್ಟೇ ಕಿರಿದಾಗಿ ನಿರ್ಮಿ ಸಲಾಗಿದೆ. ರಸ್ತೆ ನಿರ್ಮಿಸುವ ಮುಂಚೆ ಒಳಚರಂಡಿ, ಫುಟ್ಪಾತ್ ನಿರ್ಮಿಸುವುದು ಅನಿವಾರ್ಯವಾಗಿದ್ದರೂ ಇದರ ಗುತ್ತಿಗೆ ವಹಿಸಿದವರು ಇದನ್ನೆಲ್ಲಾ ನಿರ್ಮಿಸದೇ ಇರುವುದರಿಂದ ಇಂದು ಮಳೆಯ ರಭಸಕ್ಕೆ ರಸ್ತೆಗೆ ಈ ದುಸ್ಥಿತಿ ಬಂದೊದಗಿದೆ ಎಂದು ಸಾರ್ವಜನಿಕರು ಆರೋಪಿಸಿದ್ದಾರೆ.

By suddi9

Leave a Reply

Your email address will not be published. Required fields are marked *