ತುಳು ಭಾಷೆಯನ್ನು ಸಮೃದ್ಧವಾಗಿ ಬೆಳೆಸಲು ಅಂತಜರ್ಾಲ ಕೋಶದಲ್ಲಿ ಹೆಚ್ಚಿನ ಶ್ರಮವಹಿಸಬೇಕು, ಯುವ ಪೀಳಿಗೆಗೆ ತುಳು ಭಾಷೆಯ ಬೆಳವಣಿಗೆಗೆ ಶ್ರಮಿಸಲು ಸಾಕಷ್ಟು ಅವಕಾಶವಿದೆ. ತುಳು ಭಾಷೆಯ, ಸಂಸ್ಕೃತಿಯ ರಕ್ಷಣೆಗೆ ಶ್ರಮಿಸುವುದು ಮಾತೃಸೇವೆಗೆ ಸಮಾನ ಎಂದು ಉಡುಪಿ ಪಯರ್ಾಯ ಶ್ರೀ ಶ್ರೀ ವಿಶ್ವೇಶತೀರ್ಥ ಸ್ವಾಮೀಜಿ ಅಭಿಪ್ರಾಯಪಟ್ಟರು.

2

4 ಅವರು ಡಿ 9ರಿಂದ 13ರ ತನಕ ಬದಿಯಡ್ಕದಲ್ಲಿ ಜರಗಲಿರುವ ವಿಶ್ವ ತುಳುವೆರೆ ಆಯನೊದ ವೆಬ್ಸೈಟ್ ಬಿಡುಗಡೆಗೊಳಿಸಿ ಮಾತನಾಡಿದರು. ಉಡುಪಿ ಮಠದಲ್ಲಿ ಜರಗಿದ ಕಾರ್ಯಕ್ರಮದಲ್ಲಿ ಉಡುಪಿ ಮಠದ ವಿಷ್ಣು ಭಟ್ ಪೇಜಾವರ, ವಾಸುದೇವ ಭಟ್ ಶ್ರೀಕೃಷ್ಣ ಮಠ ಉಡುಪಿ, ಸಿರಿ ತುಳು ಛಾವಡಿ ಉಡುಪಿಯ ಗೌರವಾಧ್ಯಕ್ಷರಾದ ಈಶ್ವರ ಚಿಟ್ಪಾಡಿ, ವಿಶ್ವ ತುಳುವೆರೆ ಆಯನೊದ ಕಾಯರ್ಾಧ್ಯಕ್ಷರಾದ ಪ್ರೊ.ಎ.ಶ್ರೀನಾಥ್ ಕಾಸರಗೋಡು, ಅಖಿಲ ಭಾರತ ತುಳು ಒಕ್ಕೂಟದ ಪ್ರಧಾನ ಕಾರ್ಯದಶರ್ಿ ನಿಟ್ಟೆ ಶಶಿಧರ ಶೆಟ್ಟಿ, ವಿಶ್ವ ತುಳುವೆರೆ ಆಯನೊದ ಬಹುಭಾಷಾ ಸಂಗಮದ ಕಾಯರ್ಾಧ್ಯಕ್ಷರಾದ ಅರವಿಂದ ಅಲೆವೂರಾಯ, ಅಖಿಲ ಭಾತರ ತುಳು ಒಕ್ಕೂಟದ ಉಪಾಧ್ಯಕ್ಷರಾದ ಡಾ. ರಾಜೇಶ್ ಆಳ್ವ ಬದಿಯಡ್ಕ, ಮೊಗೇರ ಸವರ್ಿಸ್ ಸೊಸೈಟಿ ಕೇರಳ ರಾಜ್ಯಾಧ್ಯಕ್ಷರಾದ ಕೆ.ಕೆ.ಸ್ವಾಮಿಕೃಪ, ತುಳುವೆರೆ ಆಯನೊ ಕೂಟದ ಕಾರ್ಯದಶರ್ಿ ನಿರಂಜನ ರೈ ಪೆರಡಾಲ, ಯತೀಶ್ ಉಡುಪಿ, ಹರ್ಷ ರೈ ಪುತ್ರಕಳ ಮೊದಲಾದವರು ಉಪಸ್ಥಿತರಿದ್ದರು. ಈ ಸಂದರ್ಭದಲ್ಲಿ ವೆಬ್ಸೈಟ್ ಮತ್ತು ಮೊಬೈಲ್ ಆ್ಯಪ್ ತಯಾರಿಸಿ ಉಚಿತವಾಗಿ ನೀಡಿದ ಉಡುಪಿಯ ಇನ್ಫೋನಾ ಟೆಕ್ನೋಲಜಿಸ್ ಪ್ರೈವೇಟ್ ಲಿಮಿಟೆಡ್ ಸಂಸ್ಥೆಯ ಆಡಳಿತ ನಿದರ್ೇಶಕರಾದ ಉಮೇಶ್ ಎಂ ಕಕರ್ೇರ ಇವರನ್ನು ಪೂಜ್ಯ ಸ್ವಾಮೀಜಿಯವರು ಸನ್ಮಾನಿಸಿದರು. ಇನ್ನು ಮುಂದೆ ವಿಶ್ವ ತುಳುವೆರೆ ಆಯನೊದ ಮಾಹಿತಿಗಾಗಿ ಮತ್ತು ಸಂಪರ್ಕಕ್ಕಾಗಿ www.vishwatuluvereaayano.org ಎಂಬ ಅಂತಜರ್ಾಲವನ್ನು ಉಪಯೋಗಿಸಬಹುದು.

By suddi9

Leave a Reply

Your email address will not be published. Required fields are marked *