ಮುಂಬಯಿ (ಬದಿಯಡ್ಕ), ಜು.10: ಮಾನವೀಯತೆಗಿಂತ ಮಿಗಿಲಾದ ಕೃತಕೃತ್ಯತೆ ಬೇರೊಂದಿಲ್ಲ. ತಮ್ಮಲ್ಲಿ ಇರುವುದನ್ನು ಇಲ್ಲದವರಿಗೆ ಹಂಚಿದಾಗ ದೇವಾನುಗ್ರಹದಿಂದ ಮತ್ತೊಂದೆಡೆ ಮತ್ತಷ್ಟು ದಾನಗೈಯ್ಯಲು ಸಾಧ್ಯವಾಗುತ್ತದೆ. ಜಾತಿ, ಮತಗಳಾಚೆ ಮಾನವೀಯತೆಯ ಹೃದಯ ಮಿಡಿದಾಗ ಬದುಕು ಸಾರ್ಥಕ ಆಗುತ್ತದೆ ಎಂದು ಕನರ್ಾಟಕ ರಾಜ್ಯ ಭಾರಿ ಕೈಗಾರಿಕೆ ಮತ್ತು ಮೂಲಸೌಕರ್ಯ ಸಚಿವ ಆರ್ ವಿ ದೇಶಪಾಂಡೆ ಅಭಿಪ್ರಾಯ ವ್ಯಕ್ತಪಡಿಸಿದರು.

bdk_10 july_04(1)

bdk_10 july_04(2)

ಕಳೆದ ಶನಿವಾರ ನೀಚರ್ಾಲು ಸಮೀಪದ ಕಿಳಿಂಗಾರು ಸಾಯಿಮಂದಿರದಲಲಿ ನಡೆದ ಸಾಯಿರಾಂ ಗೋಪಾಲಕೃಷ್ಣ ಭಟ್ರವರು ಉಚಿತವಾಗಿ ಕೊಡಮಾಡಿದ 237ನೇ ಮನೆಯ ಕೀಲಿಕೈಯನ್ನು ಮಿಶ್ರಿಯಾ ಎಂಬವರಿಗೆ ಹಾಗೂ ಇತರರಿಗೆ ಹೊಲಿಗೆ ಯಂತ್ರ ಖರೀದಿ ಮೊತ್ತದ ಚೆಕ್ ವಿತರಿ ಹಸ್ತಾಂತರಿಸಿ ಅವರು ಮಾತನಾಡುತ್ತಿದ್ದರು.

ಕನರ್ಾಟಕ ಜಾನಪದ ಪ0ರಿಷತ್ತು ಕೇರಳ ಗಡಿನಾಡ ಘಟಕಾಧ್ಯಕ್ಷ ಕೇಶವ ಪ್ರಸಾದ ನಾಣಿತ್ತಿಲು ಅಧ್ಯಕ್ಷತೆ ವಹಿಸಿದ್ದರು.

ಕನರ್ಾಟಕ ಜಾನಪದ ಅಕಾಡೆಮಿ ಅಧ್ಯಕ್ಷ ಪಿಚ್ಚಳ್ಳಿ ಶ್ರೀನಿವಾಸ, ದ.ಕ.ಕನ್ನಡ ಸಾಹಿತ್ಯ ಪರಿಷತ್ತು ಅಧ್ಯಕ್ಷ ಪ್ರದೀಪ್ ಕುಮಾರ್ ಕಲ್ಕೂರ, ಮಂಗಳೂರು ಸಹ್ಯಾದ್ರಿ ಕಾಲೇಜ್ನ ಅಧ್ಯಕ್ಷ ಮಂಜುನಾಥ ಭಂಡಾರಿ, ಎ.ಆರ್ ಸುಬ್ಬಯ್ಯಕಟ್ಟೆ, ಬದಿಯಡ್ಕ ಗ್ರಾಮ ಪಂಚಾಯತ್ ಸ್ಥಾಯಿ ಸಮಿತಿ ಅಧ್ಯಕ್ಷ ಶ್ಯಾಮ್ ಪ್ರಸಾದ್ ಮಾನ್ಯ, ಖಾದರ್ ಮಾನ್ಯ, ಶೀಲಾ ಕೆ.ಎನ್ ಭಟ್, ಶ್ರುತಿ ಕೆ.ಭಟ್, ಸಾಯಿರಾಂ ಗೋಪಾಲಕೃಷ್ಣ ಭಟ್ ಉಪಸ್ಥಿತರಿದ್ದರು. ಸಾಯಿರಾಂ ಗೋಪಾಲಕೃಷ್ಣ ಭಟ್ ಅವರ ಸುಪುತ್ರ ಕೆ.ಎನ್ ಕೃಷ್ಣ ಭಟ್ ಅವರು ಉಚಿತವಾಗಿ ನೀಡಿದ 10 ಹೊಲಿಗೆ ಯಂತ್ರಗಳನ್ನು ಈ ಸಂದರ್ಭ ವಿತರಿಸಲಾಯಿತು. ಕೆ.ಎನ್ ಕೃಷ್ಣ ಭಟ್ ಸ್ವಾಗತಿಸಿ, ವಂದಿಸಿದರು.

By suddi9

Leave a Reply

Your email address will not be published. Required fields are marked *