ಬಂಟ್ವಾಳ : ಕರ್ನಾಟಕ ರಾಜ್ಯ ಅನುಮತಿ ಪಡೆದ ವಿದ್ಯುತ್ ಗುತ್ತಿಗೆದಾರರ ಸಂಘ ಜಿಲ್ಲಾ ಘಟಕ ಮಂಗಳೂರು ಬಂಟ್ವಾಳ ಉಪಸಮಿತಿಯ ವಾರ್ಷಿಕ ಮಹಾಸಭೆ ಮತ್ತು ನೂತನ ಪದಾಧಿಕಾರಿಗಳ ಆಯ್ಕೆ ಹೋಟೇಲ್ ಚಿಕೋರಿ ಸಭಾಂಗಣದಲ್ಲಿ ಗೌರವಾಧ್ಯಕ್ಷ ರಾಮಣ್ಣ ಬಂಗೇರಾ ರವರ ಅಧ್ಯಕ್ಷತೆಯಲ್ಲಿ ಜರಗಿತು. ಹಿರಿಯ ಗುತ್ತಿಗೆದಾರರಾದ ರುಕ್ಮಯ ಸಪಲ್ಯ, ದೇಜಪ್ಪ ಅಮ್ಮೆಂಬಳ ಹಾಗೂ ಅಧ್ಯಕ್ಷ ರಾಮಣ್ಣ ಬಂಗೇರ ರವರನ್ನು ಸನ್ಮಾನಿಸಲಾಯಿತು. ಉಳ್ಳಾಲ , ಮಂಗಳೂರು, ಸುರತ್ಕಲ್, ಕಡಬ, ಬೆಳ್ತಂಗಡಿ, ಪುತ್ತೂರು, ಮೂಡಬಿದ್ರೆ, ಸುಳ್ಯ ಉಪಸಮಿತಿಗಳ ಅಧ್ಯಕ್ಷರುಗಳನ್ನು ಸನ್ಮಾನಿಸಲಾಯಿತು. ವೇದಿಕೆಯಲ್ಲಿ ಜಿಲ್ಲಾಧ್ಯಕ್ಷ ಉರ್ಬಾನ್ ಪಿಂಟೋ , ಉಪಾಧ್ಯಕ್ಷ ಸುಂದರ ಗೌಡ , ಕಾರ್ಯದರ್ಶಿ ಚೇತನ್ ಮಲ್ಯ , ಕಾರ್ಯಕಾರಿ ಸಮಿತಿ ಸದಸ್ಯರಾದ ಸದಾಶಿವ ಬಂಗೇರಾ , ಎನ್.ಎ.ಯೂಸುಫ್, ಸಂಘಟನಾ ಕಾರ್ಯದರ್ಶಿ ದಿವಾಕರ ಅಬೆರೊಟ್ಟು ಉಪಸ್ಥಿತರಿದ್ದರು. ಬಂಟ್ವಾಳ ಉಪಸಮಿತಿಯ ಉಪಾಧ್ಯಕ್ಷ ಪದ್ಮನಾಭ ಮಯ್ಯ ಸ್ವಾಗತಿಸಿದರು. ಕಾರ್ಯದರ್ಶಿ ಸುಬ್ರಹ್ಮಣ್ಯ ರಾವ್ ವಾರ್ಷಿಕ ವರದಿ ವಾಚಿಸಿದರು. ಕೋಶಾಧಿಕಾರಿ ಪರಮೇಶ್ವರ್ ಲೆಕ್ಕಪತ್ರ ಮಂಡಿಸಿದರು. ಸಹಕಾರ್ಯದರ್ಶಿ ರವೀಂದ್ರ ವಂದಿಸಿ , ಕಾರ್ಯಕಾರಿ ಸಮಿತಿ ಸದಸ್ಯ ಇಬ್ರಾಹಿಂ ಕಾರ್ಯಕ್ರಮ ನಿರ್ವಹಿಸಿದರು.

