ಬಂಟ್ವಾಳ : ಸಜಿಪಮೂಡ ಗ್ರಾಮದ ಅನ್ನಪ್ಪಾಡಿ ಮಹಾಗಣಪತಿ ದೇವಸ್ಥಾನದ ಜೀರ್ಣೋದ್ಧಾರ ದ ಅಂಗವಾಗಿ ನೂತನವಾದ ಗರ್ಭಗುಡಿ , ತೀರ್ಥಮಂಟಪ, ಸುತ್ತುಪೌಳಿ, ತೀರ್ಥಬಾವಿ, ಅರ್ಚಕರ ಗೃಹವನ್ನು ಅಂದಾಜು ಒಂದುಕೋಟಿ ರೂಪಾಯಿ ವೆಚ್ಚದಲ್ಲಿ ನಿರ್ಮಿಸಲು ಉದ್ದೇಶಿಸಲಾಗಿದ್ದು ಈ ಬಗ್ಗೆ ವಿಜ್ಞಾಪನಾ ಪತ್ರವನ್ನು ಪ್ರಸಿದ್ಧ ವಾಸ್ತುಶಿಲ್ಪಿ ಬೆದ್ರಡ್ಕ ರಮೇಶ್ ಕಾರಂತ್ ಬಿಡುಗಡೆಗೊಳಿಸಿದರು. ಈ ಸಂದರ್ಭದಲ್ಲಿ ತಾ.ಪಂ.ಮಾಜಿ ಅಧ್ಯಕ್ಷ ಯಶವಂತ ದೇರಾಜೆ , ಸಜಿಪಮೂಡ ಮಾಜಿ ಗ್ರಾ.ಪಂ.ಅಧ್ಯಕ್ಷ ದೇವಿಪ್ರಸಾದ್ ಪೂಂಜ, ಪದಾಧಿಕಾರಿಗಳಾದ ಪ್ರೇಮಾ ಜಿ ಶೆಟ್ಟಿ, ಸುಬ್ರಹ್ಮಣ್ಯ ಭಟ್, ಲಿಂಗಪ್ಪ ದೋಟ, ಸುಬ್ರಾಯ ಜೋಷಿ, ವಾಸು ಗಟ್ಟಿ, ಕುಶಾಲಾಕ್ಷ, ಸುರೇಶ್ ಬಂಗೇರಾ, ಕುಶೇಷ, ನರೇಂದ್ರ ಆಳ್ವ, ವಿಶ್ವನಾಥ ಬೆಳ್ಚಡ, ಮೋನಪ್ಪ ಕುಲಾಲ್ ಮತ್ತಿತರರು ಉಪಸ್ಥಿತರಿದ್ದರು.
