ಬಂಟ್ವಾಳ : ನಾನು ನನ್ನಿಂದ ಎಂಬ ಅಹಂನ್ನು ಬಿಟ್ಟು ಭಕ್ತಿಯಿಂದ ಭಗವಂತನಿಗೆ ಶರಣಾದರೆ ಇಹದಲ್ಲೂ ಪರದಲ್ಲೂ ಒಳ್ಳೆಯದಾಗುತ್ತದೆ ಎಂದು ಪುತ್ತೂರು ನಗರಸಭೆಯ ಆಯುಕ್ತರಾದ ರೇಖಾ ಜೆ.ಶೆಟ್ಟಿ ನುಡಿದರು. ಅವರು ಮಂಚಿ ಗೋಪಾಲ್‍ಕೃಷ್ಣ ದೇವಸ್ಥಾನದ ಸಾರ್ನಜನಿಕ ಪ್ರಸಾದ ಭೋಜನದ ಉದ್ಘಾಟನೆಯನ್ನು ನೆರವೇರಿಸಿ ಮಾತನಾಡುತ್ತಿದ್ದರು. ಹಸಿದು ಬಂದವರಿಗೆ ಉಣಬಡಿಸುವ ನಮ್ಮ ಸಂಸ್ಕøತಿಯನ್ನು ಉಳಿಸಿಕೊಳ್ಳಬೇಕಾಗಿದೆ ಎಂದರು.

ಧಾರ್ಮಿಕ ಮುಖಂಡರಾದ ಕೈಯೂರು ನಾರಾಯಣ ಭಟ್ ಮಾತನಾಡಿ ಇನ್ನು ಮುಂದಕ್ಕೆ ಪ್ರತಿ ರವಿವಾರ ಮದ್ಯಾಹ್ನ ಸಾರ್ವಜನಿಕ ಅನ್ನಸಂತರ್ಪಣಾ ಸೇವೆಯು ಊರ ಪರವೂರ ಭಕ್ತ ಬಂಧುಗಳ ಸಹಕಾರದೊಂದಿಗೆ ಸಾಕಾರಗೊಳ್ಳಲಿದೆ ಎಂದು ಹೇಳುತ್ತಾ ಈ ಯೋಜನೆಯು ಶಾಶ್ವತವಾಗಿ ಮುಂದುವರಿಯಲು ಸರ್ವರೂ ಸಹಕರಿಸಬೇಕೆಂದು ವಿನಂತಿಸಿದರು. ಈಸಂದರ್ಭದಲ್ಲಿ ದೇವಸ್ಥಾನದ ಅರ್ಚಕ ಈಶ್ವರ ಭಟ್, ರಾಮ ಮೂಲ್ಯ ಕೈಯೂರು, ನಾರಾಯಣ ಮಂಚಿ, ಶ್ರೀದೇವಿ ಕೈಯೂರು, ಸೀತಾರಾಮ ಬಂಗೇರಾ , ವಾಣಿ ಭಟ್, ಲಕ್ಷ್ಮಣ ಮಂಚಿ ಉಪಸ್ಥಿತರಿದ್ದರು. ಹಿರಿಯ ಕಾರ್ಯಕರ್ತ ಶೇಖರ ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರು.