ಬಂಟ್ವಾಳ:ತಾಲ್ಲೂಕಿನ ಅರಳ ಗ್ರಾಮದ ಕುಟ್ಟಿಕಳ ನಿವಾಸಿ, ಇಲ್ಲಿನ ಮಾವಂತೂರು ಎಂಬಲ್ಲಿ ಕೃಷಿ ಕಾರ್ಮಿಕನಾಗಿ ದುಡಿಯುತ್ತಿದ್ದ ಅಮೃತ ಮೊಗೇರ ಎಂಬವರು ಕಳೆದ ಕೆಲವು ಸಮಯದಿಂದ ನಾಪತ್ತೆಯಾಗಿದ್ದಾರೆ ಎಂದು ಆರೋಪಿಸಿ ಅವರ ಪತ್ನಿ ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣೆಗೆ ಮಂಗಳವಾರ ದೂರಿಕೊಂಡ ಘಟನೆ ನಡೆದಿದೆ.

ಮೂಲತಃ ಮೂಡುಬಿದ್ರೆ ಸಮೀಪದ ಕೊಡ್ಯಡ್ಕ ನಿವಾಸಿಯಾಗಿರುವ ಅಮೃತ ಮೊಗೇರ ಈ ಹಿಂದೆ ವಿವಾಹವಾಗಿದ್ದ ಪತ್ನಿಯನ್ನು ಬಿಟ್ಟು ನನ್ನನ್ನು ವಿವಾಹವಾಗಿದ್ದರು. ಇದೀಗ ಮತ್ತೆ ಬೇರೆ ವಿವಾಹವಾಗಿರುವ ಸಾಧ್ಯತೆಯಿದ್ದು, ಅವರನ್ನು ಹುಡುಕಿಕೊಡುವಂತೆ ಆಗ್ರಹಿಸಿ ಪತ್ನಿ ಸರಸ್ವತಿ ದೂರು ಸಲ್ಲಿಸಿರುವುದಾಗಿ ಪೊಲೀಸರು ತಿಳಿಸಿದ್ದಾರೆ.

By suddi9

Leave a Reply

Your email address will not be published. Required fields are marked *