ಬಂಟ್ವಾಳ:ರಾಜ್ಯದಲ್ಲಿ ಅಂಗನವಾಡಿ ಕೇಂದ್ರಗಳನ್ನು ಶಶುಪಾಲನಾ ಕೇಂದ್ರವಾಗಿ ಪರಿವರ್ತಿಸಿ ಪ್ರತ್ಯೇಕ ನಿರ್ದೇಶನಾಲಯ ರಚಿಸಿ, ಐಸಿಡಿಎಸ್ ಯೋಜನೆ ಖಾಯಂಗೊಳಿಸುವ ಮೂಲಕ ಅಂಗನವಾಡಿ ನೌಕರರಿಗೆ ಜೀವನ ಭದ್ರತೆ ಒದಗಿಸಬೇಕು ಎಂದು ತಾಲ್ಲೂಕಿನ ಅಂಗನವಾಡಿ ನೌಕರರ ಸಂಘ ಆಗ್ರಹಿಸಿದೆ. ತಾಲ್ಲೂಕಿನ ಅಂಗನವಾಡಿ ನೌಕರರ ಸಂಘ (ಸಿಐಟಿಯು) ವತಿಯಿಂದ ಬಿ.ಸಿ.ರೋಡ್ನಲ್ಲಿ ಸೋಮವಾರ ನಡೆದ ದಿಢೀರ್ ಪ್ರತಿಭಟನೆಯಲ್ಲಿ ಪ್ರತಿಭಟನಾಕಾರರು ವಿವಿಧ ಬೇಡಿಕೆ ಈಡೇರಿಸುವಂತೆ ಆಗ್ರಹಿಸಿದರು.

12btl-Anganvady
ಪ್ರತಿಭಟನಾಕಾರರನ್ನು ಉದ್ದೇಶಿಸಿ ಸಿಐಟಿಯು ಜಿಲ್ಲಾಧ್ಯಕ್ಷ ಬಾಲಕೃಷ್ಣ, ತಾಲ್ಲೂಕು ಕಾರ್ಯದರ್ಶಿ  ಎ.ರಾಮಣ್ಣ ವಿಟ್ಲ ಮತ್ತಿತರರು ಮಾತನಾಡಿದರು. ದೇಶದ ಎಲ್ಲಿಯೂ ಇರದ ಮಿಷನ್ ಮೋಡ್ ಪದ್ಧತಿ ಜಾರಿಗೊಳಿಸಲು ರಾಜ್ಯ ಮುಂದಾಗಿದ್ದು, ಇದರಲ್ಲಿ ವಿವಿಧ ಸ್ವಯಂ ಸೇವಾ ಸಂಸ್ಥೆಗಳನ್ನು ಜೋಡಿಸಲು ತೀರ್ಮಾನಿಸಿದೆ. ಇದರಿಂದಾಗಿ ಈಗಾಗಲೇ ಅಂಗನವಾಡಿ ಕೇಂದ್ರದಲ್ಲಿ ದುಡಿಯುತ್ತಿರುವ ಕಾರ್ಯಕರ್ತೆ ಯರು ಮತ್ತು ಸಹಾಯಕಿಯರ ಕೆಲಸಕ್ಕೆ ಧಕ್ಕೆಯಾಗಲಿದೆ ಎಂದು ಪ್ರತಿಭಟನಾಕಾರರು ಟೀಕಿಸಿದರು.
ಬೇಡಿಕೆ:
ಅಂಗನವಾಡಿ ನೌಕರಿಗೆ ವೇತನ ಹೆಚ್ಚಳ ಸಹಿತ ವಿವಿಧ ಸೇವಾ ಸೌಲಭ್ಯ ವಿಸ್ತರಿಸಬೇಕು. ಸ್ವಯಂ ನಿವೃತ್ತಿ ಸಂದರ್ಭದಲ್ಲಿ ಗರಿಷ್ಟ ಮತ್ತದ ಇಡಗಂಟು, ಮೇಲ್ವಿಚಾರಕಿ ಹುದ್ದೆಗೆ ಪೀಕ್ಷೆ ನಡೆಸುವುದಕ್ಕೆ ಬದಲಾಗಿ ಸೇವಾ ಜೇಷ್ಠತೆಗೆ ಮಾನ್ಯತೆ ನೀಡಬೇಕು. ಅನಾರೋಗ್ಯ ಮತ್ತು ಶಸ್ತ್ರಚಿಕಿತ್ಸೆ ಸಂದರ್ಭದಲ್ಲಿ ವೇತನ ಸಹಿತ ರಜೆ ಸೌಲಭ್ಯ, ಅಂಗನವಾಡಿ ಖಾಸಗೀಕರಣಗೊಳಿಸಬಾರದು ಎಂದು ಪ್ರತಿಭಟನಾಕಾರರು ಆಗ್ರಹಿಸಿದರು.
ಸಂಘದ ಪ್ರಮುಖರಾದ ಹರಿಣಾಕ್ಷಿ ದೈವಸ್ಥಳ, ಆಶಾ ರಾಯಿ, ಪುಷ್ಪಾ ಮಾಡಮೆ, ಸುಜಾತ ಸಂಗಬೆಟ್ಟು ಮತ್ತಿತರರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.
ಇಲಾಖೆ ಮೇಲ್ವಿಚಾರಕಿ ಗಾಯತ್ರಿ ಕಂಬಳಿ, ನೀತಾ, ಪುಷ್ಪಲತಾ ಮತ್ತಿತರರು ಇದ್ದರು.

By suddi9

Leave a Reply

Your email address will not be published. Required fields are marked *