ಚಂದಳಿಕೆ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನಾಗಶ್ರೀ ಫ್ರೆಂಡ್ಸ್ ಅಬೀರಿ ಮತ್ತು ಯುವ ಕೇಸರಿ ಅತಿಕಾರಬೈಲು ಇದರ ಜಂಟಿ ಆಶ್ರಯದಲ್ಲಿ ಸಸಿ ವಿತರಣ ಮತ್ತು ವನಮಹೋತ್ಸವ ಕಾರ್ಯಕ್ರಮ 17-07-2016 ರಂದು ನಡೆಯಿತು. ಈ ಕಾರ್ಯಕ್ರಮವನ್ನು ವಿಟ್ಲ ಶ್ರವಣ ಜುವೆಲ್ಲರ್ಸ್ನ ಸದಾಶಿವ ಆಚಾರ್ಯ ಉದ್ಘಾಟಿಸಿದರು. ವನಮಹೋತ್ಸವದ ಮಹತ್ವ ತಿಳಿಸಿದ ಪುತ್ತೂರು ಉಪವಲಯ ಅರಣ್ಯಾಧಿಕಾರಿ ಲೋಕೇಶ್ ಎಸ್ ಎನ್ ಸಸಿಗಳನ್ನು ವಿತರಿಸಿದರು. ಸಭಾಧ್ಯಕ್ಷತೆ ನಾಗಶ್ರೀ ಫ್ರೆಂಡ್ಸ್ ಯುವ ಕೇಸರಿ ಅತಿಕಾರಬೈಲು ಇದರ ಗೌರವಾಧ್ಯಕ್ಷ ದಯಾನಂದ ಸೆಟ್ಟಿ ಉಜಿರೆಮಾರು ವಹಿಸಿದ್ದರು. ಮುಖ್ಯ ಅಥಿತಿಗಳಾಗಿ ಭಾರತ್ ಶಾಮಿಯಾನಾದ ಸಂಜೀವ ಪೂಜಾರಿ ಮತ್ತು ಭಾಸ್ಕರ ಶೆಟ್ಟಿ ಭಾಗವಹಿಸಿದ್ದರು. ಎಸ್ ಡಿ ಎಂ ಸಿ ಆದ್ಯಕ್ಷೆ ಹರಿಣಾಕ್ಷಿ ಕೊಪ್ಪಳ, ನಾಗಶ್ರೀ ಫ್ರೆಂಡ್ಸ್ ಮತ್ತು ಯುವ ಕೇಸರಿ ಅಧ್ಯಕ್ಷ ವಿಠಲ ಪೂಜಾರಿ ಅತಿಕಾರಬೈಲು ಹಾಗೂ ಗೌರವ ಸಲಹೆಗಾರ ಈಶ್ವರ ಬಂಗೇರ ಅಬೀರಿ ವೇದಿಕೆಯಲ್ಲಿದ್ದರು. ಇತರ ಪದಾಧಿಕಾರಿಗಳು ಮತ್ತು ಸದಸ್ಯರು ಉಪಸ್ಥಿತರಿದ್ದರು. ಸುಶಾಂತ್ ಸಾಲಿಯಾನ್ ಸ್ವಾಗತಿಸಿದರು. ದಿವಾಕರ ಶೆಟ್ಟಿ ಅಬೀರಿ ವಂದಿಸಿದರು. ಗಂಗಾಧರ ಸಿ ಹೆಚ್ ಕಾರ್ಯಕ್ರಮ ನಿರೂಪಿಸಿದರು.


