ಮುಂಬಯಿ, ಜು.15: ಜೀವನಪರ್ಯಾಂತ ಸುವರ್ಣ ಯುಗವನ್ನೇ ಬಯಸುವ ಮನಗಳಿಗೆ ವಿದ್ಯಾಥರ್ಿ ಜೀವನವು ಸುವರ್ಣಮಯ ಸಂಸ್ಮರಣೆಯ ಯುಗವಾಗಿರುತ್ತವೆ. ಶಿಕ್ಷಣ ಜ್ಞಾನದ ಇಂಧನವಾಗಿದ್ದು, ಇದು ಮಾನವ ಬದುಕನ್ನು ಸಧೃಡಗೊಳಿಸುವ ಶಕ್ತಿಹೊಂದಿದೆ. ಆದುದರಿಂದ ವಿದ್ಯಾಥರ್ಿ ಜೀವನಾಧಿಯನ್ನು ಮಹತ್ವದ್ದಾಗಿಸಿ ಕೊಳ್ಳುವ ಅಗತ್ಯ ಮಕ್ಕಳದ್ದಾಗಬೇಕು. ಭವಿಷ್ಯತ್ತಿನ ಸಂಪತ್ತು ಸಂಗ್ರಹಿಸುವ ಈ ಕಲಾಮಾನ ಸುಸಂಸ್ಕೃತ ಜೀವನಕ್ಕೆ ಬುನಾದಿಯಾಗ ಬಲ್ಲದು. ಶೈಕ್ಷಣಿಕ ಸಂಸ್ಥೆಗಳು ಮಾದರಿ ಜೀವನವನ್ನು ರೂಪಿಸುವ ಕೇಂದ್ರಗಳಾಗುವ ಅವಶ್ಯವಿದ್ದು, ಇದಕ್ಕೆ ವಿದ್ಯಾಥರ್ಿಗಳು ಹಾಗೂ ಪಾಲಕರ ಪಾಲೂ ಅಷ್ಟೇ ಅಗತ್ಯವಾಗಿದೆ. ಮಕ್ಕಳು ವಿದ್ಯಾಥರ್ಿ ಬದುಕನ್ನು ಭವಿಷ್ಯತ್ತಿನ ಕೈಗನ್ನಡಿ ಆಗಿ ಸ್ವೀಕರಿಸಿದಾಗ ಸಮಾಜದಲ್ಲಿ ಮಕ್ಕಳು ಉತ್ತಮ ನಾಗರೀಕರಾಗಿ ಬಾಳಲು ಸಾಧ್ಯ. ಸ್ವಾಸ್ಥ ್ಯ ಸಮಾಜದ ಅರಿವು ಮೈಗೂಡಿಸಿ ಸಾಮರಸ್ಯತ್ವದಲ್ಲಿ ಬಾಳುವುದನ್ನು ಮಕ್ಕಳು ಅಭ್ಯಾಸಿಸತಕ್ಕದ್ದು ಎಂದು ಮುಂಬಯಿ ರೋಮನ್ ಕಾಥೋಲಿಕ್ ಧರ್ಮಪ್ರಾಂತ್ಯದ ಬಿಷಪ್ ಅ| ವಂ| ಡಾ| ಫರ್ಸಿವಲ್  ಜೋಸೆಫ್ ಇ.ಫೆರ್ನಾಂಡಿಸ್ ಕರೆಯಿತ್ತರು.

Aldel St.John International School-1

Aldel St.John International School-2

Aldel St.John International School-4

Aldel St.John International School-6

Aldel St.John International School-7

Aldel St.John International School-11

ಮಹಾನಗರ ಮುಂಬಯಿ ಅಲ್ಲಿನ ಉಡುಪಿ ಶಂಕರಪುರ ಪಾಂಗ್ಳಾ ಮನೆತನದ ಆಲ್ಬಟರ್್ ಡಬ್ಲ್ಯು.ಡಿ’ಸೋಜಾ ಅವರ ಅಲ್ಡೇಲ್ ಎಜ್ಯುಕೇಶನ್ ಟ್ರಸ್ಟ್ ಸಮೂಹದ ಮಹಾರಾಷ್ಟ್ರ ರಾಜ್ಯದ ಥಾಣೆ ಜಿಲ್ಲೆಯ ಪಾಲ್ಘರ್ ಅಲ್ಲಿನ ವೆವೂರುನಲ್ಲಿನ ಸೈಂಟ್ ಜೋನ್ ಇಂಟರ್ನ್ಯಾಷನಲ್ ಸ್ಕೂಲ್ನ ನೂತನ ಕಟ್ಟಡಕ್ಕೆ ಪ್ರಾರ್ಥನೆ ನೆರವೇರಿಸಿ ಅನುಗ್ರಹಿಸುತ್ತಾ ಬಿಷಪ್ ಫರ್ಸಿವಲ್  ಫೆರ್ನಾಂಡಿಸ್ ನುಡಿದರು.

ಇಂದಿಲ್ಲಿ ಸೋಮವಾರ ಪೂವರ್ಾಹ್ನ ಅಲ್ಡೇಲ್ ಟ್ರಸ್ಟ್ನ ಕಾಯರ್ಾಧ್ಯಕ್ಷ ಆಲ್ಬಟರ್್ ಡಬ್ಲ್ಯು.ಡಿ’ಸೋಜಾ ಅಧ್ಯಕ್ಷತೆಯಲ್ಲಿ ಪಾಲ್ಘರ್ನಲ್ಲಿನ ಕ್ಯಾಂಪಸ್ನಲ್ಲಿ ಆಯೋಜಿಸಲಾಗಿದ್ದ ಭವ್ಯ ಸಮಾರಂಭದಲ್ಲಿ ಮಹಾರಾಷ್ಟ್ರ ರಾಜ್ಯ ಸವರ್ೊತ್ಕೃಷ್ಟ ಶಿಕ್ಷಕ ಪುರಸ್ಕಾರ ವಿಜೇತ ಸೈಂಟ್ ಮೇರಿ’ಸ್ ಹೈಸ್ಕೂಲು ಮಜ್ಗಾಂವ್ ಇದರ ಪ್ರಾಂಶುಪಾಲ ಡಾ| ರೆ| ಫಾ| ಫ್ರಾನ್ಸಿಸ್ ಸ್ವಾಮಿ ಅವರು ರಿಬ್ಬನ್ ಕತ್ತರಿಸಿ ನೂತನ ಕಟ್ಟಡವನ್ನು ವಿಧ್ಯುಕ್ತವಾಗಿ ಸೇವಾರ್ಪಣೆ ಗೊಳಿಸಿದರು.

Aldel St.John International School-31

Aldel St.John International School-38

Aldel St.John International School-40

Aldel St.John International School-A1

Aldel St.John International School-A2

Aldel St.John International School-A3

Aldel St.John International School-B1

Aldel St.John International School-B4

Aldel St.John International School-B5

ಮುಖ್ಯ ಅತಿಥಿಯಾಗಿ ರಾಯನ್ ಅಂತರಾಷ್ಟ್ರೀಯ ಶೈಕ್ಷಣಿಕ ಸಮೂಹ ಸಂಸ್ಥೆಗಳ ಪ್ರವರ್ತಕಿ, ಆಡಳಿತ ನಿದರ್ೆಶಕಿ ಮೇಡಂ ಗ್ರೇಸ್ ಪಿಂಟೋ ಉಪಸ್ಥಿತರಿದ್ದು ಸೈಂಟ್ ಜೋನ್ ಕಾಲೇಜ್ನ ಬಿ.ಫಾರ್ಮದ ತೃತೀಯ ಸಾಲಿನ ವಿದ್ಯಾಥರ್ಿಯಾಗಿದ್ದು ಮುಂಬಯಿ ಯುನಿವಸರ್ಿಟಿಯಲ್ಲೇ ಪ್ರಥಮ ರ್ಯಾಂಕ್ ಗಳಿಸಿದ ಕು| ಮುಗ್ಧ ರಾವುತ್ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು.

ಫಾ| ಫ್ರಾನ್ಸಿಸ್ ಮಾತನಾಡಿ ವಿದ್ಯಾಥರ್ಿ ಜೀವನ ಮೌಲ್ಯದಾಯಕವಾದದ್ದು. ಅಭ್ಯಾಸದ ಜೀವನಾವಧಿ ವಿದ್ಯಾಥರ್ಿಗಳ ಪಾಲಿಗೆ ಸಂವೇದನಾತ್ಮಕತೆ ಹೊಂದಿದ ಮಹತ್ವದ ಕಾಲಾವಧಿಯಾಗಿದೆ. ಇದು ಮನುಕುಲದ ಪ್ರಜ್ಞೆಯನ್ನು ರೂಪಿಸುವ ಪರಮಾವಧಿ ಆಗಿರುತ್ತದೆ. ಇದನ್ನು ಸಮಯೋಚಿತವಾಗಿ ಸದುಪಡಿಸಿ ಕೊಂಡಲ್ಲಿ ಮಕ್ಕಳ ಬದುಕು ಹಸನಾಗುವುದು ಎಂದರು.

ವಿದ್ಯಾಥರ್ಿ ಜೀವನವು ಜೀವನದ ಅತೀ ಪ್ರಮುಖ ಕಾಲಘಟ್ಟವಾಗಿದೆ. ಇದು ವಿದ್ಯಾಥರ್ಿ ಜೀವನ ಸಾಧನಾ ಮಾಪನವಾಗಿದ್ದು, ವಿದ್ಯಾಥರ್ಿಗಳು ಅಭ್ಯಾಸಶೀಲ ಸಮಯವನ್ನು ನೈತಿಕ ಮೌಲ್ಯಗಳೊಂದಿಗೆ ಸರಿಯಾಗಿ ವ್ಯಯಿಸಿದಾಗಲೇ ಬದುಕು ಹಸನಾಗುವುದು. ಪ್ರಸ್ತುತ ಕಾಲದಲ್ಲಿ ವಿದ್ಯಾಥರ್ಿಗಳಲ್ಲಿ ಜ್ಞಾನಭಕ್ತಿಯ ಗಳಿಕೆ ಅವಶ್ಯವಾಗಿದೆ. ಜ್ಞಾನದ ಪ್ರತಿಭೆಗಳನ್ನು ಪ್ರಕಾಶಿಸುವ ಸವರ್ೋನ್ನತ ಕಾಯಕ ಶಿಕ್ಷಕರದ್ದಾಗಿದ್ದು, ಇದಕ್ಕೆ ಪೋಷಕರ ಪಾಲೂ ಅಷ್ಟೇ ಅಗತ್ಯವಾಗಿದೆ. ಶಾಲಾಕಾಲೇಜುಗಳ ಜವಾಬ್ದಾರಿಕ್ಕಿಂತ ಮಿಗಿಲಾಗಿ ಮಕ್ಕಳ ಭವಿಷ್ಯತ್ತಿನ ಧನಾತ್ಮಕ ಚಿಂತನೆ-ವಿಷಯಗಳಿಗೆ ಹೆಚ್ಚು ಆದ್ಯತೆ ಕಲ್ಪಿಸಿ ಕೊಡುವ ಪ್ರಯತ್ನ ಹೆತ್ತವರು ಮಾಡಬೇಕು ಎಂದು ಮೇಡಂ ಗ್ರೇಸ್ ಪಿಂಟೋ ತಿಳಿಸಿದರು.

Aldel St.John International School-19

Aldel St.John International School-20

Aldel St.John International School-21
ಒಂದು ದಶಕದ ಹಿಂದೆ ಇಲ್ಲಿ ಶೈಕ್ಷಣಿಕ ಸಂಸ್ಥೆ ರೂಪಿಸಿದ ನಾವು ಅಂದು ಯೋಚಿಸಿದ ಭವ್ಯ ಕಲ್ಪನೆಯನ್ನು ನನಸಾಗಿಸಿದ ಅಭಿಮಾನ ನಮಗಿದೆ. ಸ್ಥಾನಿಯ ಜನತೆಯ ಅಗತ್ಯಕ್ಕೆ ತಕ್ಕಂತೆ ವಿದ್ಯಾಲಯವನ್ನು ರೂಪಿಸಿದ್ದೇವೆ. ಎಲ್ಲರೂ ಕೆಜಿಯಿಂದ ಪಿಜಿಯ ಮಾದರಿಯಲ್ಲಿ ಶಿಕ್ಷಣ ಸಂಸ್ಥೆಗಳನ್ನು ತೆರೆದರೆ ನಮ್ಮ ಟ್ರಸ್ಟ್ ಮಾತ್ರ ಪಿಜಿಯಿಂದ ಕಿಜಿಯ ಮಾದರಿಯಲ್ಲಿ ಶಿಕ್ಷಣ ಸಂಸ್ಥೆಗಳನ್ನು ತೆರೆದು ಹೊಸ ಇತಿಹಾಸಕ್ಕೆ ಪಾತ್ರವಾಗಿದೆ. ಸದ್ಯ ಪ್ರೌಢಶಾಲೆಯ ವರೇಗೆ ಸುಮಾರು 600 ವಿದ್ಯಾಥರ್ಿಗಳು ಅಭ್ಯಾಸಿಸುತ್ತಿದ್ದು ಇದು ಗ್ರಾಮೀಣ ಪ್ರದೇಶದ ಶಿಕ್ಷಣಾವಸ್ಥೆಯ ದಿಟ್ಟತನವಾಗಿದೆ.
ನೀತಿತತ್ವ ಮತ್ತು ಯೋಗ್ಯತಾನುಸಾರ ಮಕ್ಕಳ ಸರ್ವತ್ರ ಅಭಿವೃದ್ಧಿಗೆ ಈ ಸಂಸ್ಥೆಯನ್ನು ಮುಡುಪಾಗಿಸಿದ್ದೇವೆ ಎಂದು ಅಧ್ಯಕ್ಷೀಯ ಭಾಷಣದಲ್ಲಿ ಆಲ್ಬಟರ್್ ಡಿ’ಸೋಜಾ ತಿಳಿಸಿದರು.

ಕ್ಯಾಂಪಸ್ ನಿದರ್ೆಶಕ ಪ್ರೊ| ತೋಮಾಸ್ ಡಿ.ಲೋಬೊ, ಕ್ಯಾಂಪಸ್ ಸಲಹೆಗಾರ ಡಾ| ಎಸ್. ಕೃಷ್ಣಮೂತರ್ಿ, ಸೈಂಟ್ ಜೋನ್ ಇಂಟರ್ನ್ಯಾಷನಲ್ ಸ್ಕೂಲ್ನ ಪ್ರಾಂಶುಪಾಲೆ ಸಿ| ಲೀನಾ ಡಿ’ಸೋಜಾ, ಸಿ| ಐರಿನ್ ಮಥಾಯಸ್, ಸಿ| ಕ್ಲಾರಾ ಮಿನೇಜಸ್ ವೇದಿಕೆಯಲ್ಲಿ ಅಸೀನರಾಗಿದ್ದು, ಶಿಕ್ಷಣ ಸಂಸ್ಥೆಯ ಕಾರ್ಯ ನಿವರ್ಾಹಣೆ ಬಗ್ಗೆ ತಿಳಿಸಿದರು. ಟ್ರಸ್ಟ್ನ ಕಾರ್ಯದಶರ್ಿ ಎಲ್ವಿನಾ ಎ.ಡಿ’ಸೊಜಾ, ಕೋಶಾಧಿಕಾರಿ ಎಲೈಯ್ನಾ ಆರ್.ಬುಥೇಲ್ಲೋ, ಆಲ್ಡ್ರಿಡ್ಜ್ ಎ.ಡಿ’ಸೊಜಾ ಅತಿಥಿಗಳಿಗೆ ಪುಷ್ಫಗುಪ್ಚ, ಸ್ಮರಣಿಕೆಗಳನ್ನೀಡಿ ಗೌರವಿಸಿದರು.

ರೆ| ಫಾ| ಎಲ್ವೀಸ್ ರೋಡ್ರಿಗಸ್, ರುಬೇನ್ ಬುಥೇಲ್ಲೋ, ಜೋನ್ ಡಿ’ಸಿಲ್ವಾ, ವಿಲಿಯಂ ಸಿಕ್ವೇರಾ, ಹೆನ್ರಿ ಲೋಬೊ, ಫ್ರೆಡೀ ಮೆಂಡೋನ್ಸಾ, ಧರ್ಮ ಭಗೀನಿಯರುಗಳಾದ ಸಿ| ಸೆವ್ರಿನ್ ಕಾಡರ್ೊಜಾ, ಸಿ| ಜೆನಿವೀರಾ ನೊರೊನ್ಹಾ, ಸಿ| ಹಿಲ್ಡಾ ಅಲ್ಬುಕಕರ್್, ಜೋನ್ ಡಿ’ಸಿಲ್ವಾ, ಹೆನ್ರಿ ಲೋಬೊ, ತೋಮಾಸ್ ಡಿ.ಲೋಬೊ, ಪ್ರೆಡಿ ಮೆಂಡೊನ್ಸಾ, ಎಸ್ಜೆಐನ ಡಾ| ಸವಿತಾ ಜೆ.ತಾವ್ರೋ, ಡಾ| ಸತೀಶ್ ಎನ್.ತಾಕಲಿಕಾರ್ ಸೇರಿದಂತೆ ಬಹುತೇಕ ಅನೇಕ ಗಣ್ಯರು ಉಪಸ್ಥಿತರಿದ್ದು, ನೂತನವಾಗಿ ಸ್ಥಾಪಿಸಲಾದ ಅಂತರಾಷ್ಟ್ರೀಯ ವಿದ್ಯಾಲಯಕ್ಕೆ ಶುಭೇಚ್ಛ ಕೋರಿದರು.

ಸೈಂಟ್ ಫ್ರಾನ್ಸಿಸ್ ಆಫ್ ಆಸಿಸಿ ಅವರಿಗೆ ಭಕ್ತಿಗೀತೆಯನ್ನಾಡಿ ಹಾಗೂ ಸರಸ್ವತಿ ಮಂದನೆ ಮುಖೇನ ಸಮಾರಂಭ ಆದಿಗೊಂಡಿತು. ವಿದ್ಯಾಥರ್ಿಗಳು ಸ್ವಾಗತ ನೃತ್ಯ, ಸಂಗೀತ ಕಾರ್ಯಕ್ರಮ ಹಾಗೂ ಹಷರ್್ ಜೈನ್ ನೃತ್ಯ ಪ್ರಸ್ತುತ ಪಡಿಸಿದರು. ತಾನಿಯಾ ಪುಲ್ಲತ್ ಹಾಗೂ ಆಲ್ಫ್ರೇಡ್ ಕೆಲ್ಲೀ ಅತಿಥಿಗಳನ್ನು ಪರಿಚಯಿಸಿ ಕಾರ್ಯಕ್ರಮ ನಿರೂಪಿಸಿದರು. ಮೇರಿ ಡಿ’ಸೋಜಾ ವಂದನಾರ್ಪಣೆಗೈದರು. ರಾಷ್ಟ್ರ ಗೀತೆಯೊಂದಿಗೆ ಸಮಾರಂಭವು ಸಮಾಪನ ಕಂಡಿತು.

(ಚಿತ್ರ / ವರದಿ : ರೋನ್ಸ್ ಬಂಟ್ವಾಳ್)

By suddi9

Leave a Reply

Your email address will not be published. Required fields are marked *