ಕೈಕಂಬ: ಸುರತ್ಕಲ್ ಕಬಕ ಹೆದ್ದಾರಿಯ 101 ನ್ನು ಪೊಳಲಿ ಕಬಕ ನಡುವೆ ರಸ್ತೆಯ ಶಿಲಾನ್ಯಾಸವನ್ನು ಜಿಲ್ಲಾ ಉಸ್ತುವರಿ ಅರಣ್ಯ ಸಚಿವ ರಮಾನಾಥ ರೈ ಅವರು ಜು. 23ರಂದು ಶನಿವಾರ ಪುಂಚಮೆಯಲ್ಲಿ ಶಿಲಾನ್ಯಾಸ
ನೆರವೇರಿಸಿದರು.v 12

v 16

v 10

v 11

ಕೇಂದ್ರಕ್ಕೆ ಸಲ್ಲಿಸಿದ ಪ್ರಸ್ತಾವನೆಯಂತೆ ರಾಜ್ಯಕ್ಕೆ 3 ಸಾವಿರ ಕೋಟಿ ರೂಪಾಯಿ ಮಂಜೂರುಗೊಂಡಿರುವ ಅನುದಾನದ ಪೈಕಿ ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯ ವಿವಿಧ ರಸ್ತೆಗಳ ಅಭಿವೃದ್ಧಿಗೆ 205 ಕೋಟಿ ರೂಪಾಯಿ ಬಿಡುಗಡೆಗೊಂಡಿದೆರಾಜ್ಯ ಹೆದ್ದಾರಿ ಅಭಿವೃದ್ಧಿ ಯೋಜನೆಯಡಿ  ಎಂದು ದಕ್ಷಿಣ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವ ಬಿ.ರಮಾನಾಥ ರೈ ಹೇಳಿದರು.

ಅವರು ರಾಜ್ಯ ಹೆದ್ದಾರಿ ಅಭಿವೃದ್ಧಿ ಯೋಜನೆಯಡಿ 18.83 ಕೋಟಿ ರೂಪಾಯಿ ವೆಚ್ಚದಲ್ಲಿ ಸುರತ್ಕಲ್ – ಕಬಕ ವರೆಗಿನ ರಸ್ತೆ ಅಭಿವೃದ್ಧಿಗೆ ಪೊಳಲಿ ಸಮೀಪದ ಪುಂಚಮೆ ಎಂಬಲ್ಲಿ ಜು.23ರಂದು ಶನಿವಾರ ಶಿಲಾನ್ಯಾಸ ನೆರವೇರಿಸಿ ಬಳಿಕ ಮಾತನಾಡಿದ ಅವರು ದಕ್ಷಿಣ ಕನ್ನಡ ಜಿಲ್ಲೆಗೆ 125 ಮತ್ತು ಉಡುಪಿ ಜಿಲ್ಲೆಗೆ 80 ಕೋಟಿ ರೂಪಾಯಿಯನ್ನು ಬಿಡುಗಡೆಗೊಳಿಸಲಾಗಿದೆ ಎಂದರು.

2010ರಲ್ಲಿ ಇನ್ಫೋಸಿಸ್ ಸಂಸ್ಥೆಯ ಉಪಾಧ್ಯಕ್ಷರ ಸಲಹೆಯಂತೆ ತಾನು ಶಾಸಕನಾಗಿದ್ದಾಗ ಕೇಂದ್ರಕ್ಕೆ ಆರ್ಥಿಕ ಅಭಿವೃದ್ಧಿ ಯೋಜನೆಯಡಿ ಪ್ರಸ್ತಾವನೆಯೊಂದನ್ನು ಸಲ್ಲಿಸಿದ್ದೆ. ಅದರ ಫಲವಾಗಿ ಇಂದು ಈ ಅನುದಾನ ಬಿಡುಗಡೆಗೆ ಸಹಕಾರಿಯಾಗಿದೆ ಎಂದು ನೆನಪಿಸಿಕೊಂಡ ಸಚಿವರು, ಈ ಭಾಗದ ಯಾವುದೇ ಅಭಿವೃದ್ಧಿಯಲ್ಲಿ ತನ್ನ ಪಾತ್ರವಿರುವುದು ತನ್ನ ಹೆಗ್ಗಳಿಕೆಯಾಗಿದೆ ಎಂದು ಹೇಳಿದರು.

ಮಂಜೂರಾಗಿರುವ 18.83 ಕೋಟಿ ರೂಪಾಯಿಯ ಪೈಕಿ 4 ಕೋಟಿ ರೂಪಾಯಿ ವೆಚ್ಚದಲ್ಲಿ ಪುತ್ತೂರು ವಿಧಾನಸಭಾ ಕ್ಷೇತ್ರಕ್ಕೆ ಒಳಪಟ್ಟ ಸಾಲೆತ್ತೂರು – ವಿಟ್ಲ – ಕಬಕ ರಸ್ತೆಯನ್ನು ಅಭಿವೃದ್ಧಿಗೊಳಿಸಲಾಗುವುದು. ಈಗಿರುವ 5.5 ಮೀಟರ್ ಮಧ್ಯಮ ಪಥದ ರಸ್ತೆಯನ್ನು 7 ಮೀಟರ್ ಅಗಲೀಕರಣಗೊಳಿಸಿ ದ್ವಿಪಥವಾಗಿ ಅಭಿವೃದ್ಧಿಪಡಿಸಲಾಗುವುದು. ಕೆಲವು ಭಾಗದಲ್ಲಿ ರಸ್ತೆಯನ್ನು ಕಾಂಕ್ರಿಟ್ಕರಣಗೊಳಿಸಲಾಗುವುದು ಅಲ್ಲದೆ 23 ಮೋರಿಗಳನ್ನು ನಿರ್ಮಿಸಲಾಗುತ್ತಿದೆ. ಹಾಗೆಯೇ ರಸ್ತೆ ಸುರಕ್ಷಿತಾ ಸೂಚನಾ ಫಲಕ, ಎಚ್ಚರಿಕೆ ಫಲಕ, ಕ್ರಾಶ್ ಬ್ಯಾರಿಯಾರ್ಗಳನ್ನು ಅಳವಡಿಸಲಾಗುವುದು ಎಂದು ವಿವರಿಸಿದ ಸಚಿವರು ಮುಂದಿನ ದಿನಗಳಲ್ಲಿ ಪ್ರವಾಸೋದ್ಯಮ ಇಲಾಖೆಯ ಸಹಕಾರದೊಂದಿಗೆ ಶ್ರೀ ಕ್ಷೇತ್ರ ಪೊಳಲಿಯ ಚೆಂಡಿನ ಗದ್ದೆಯ ಅಭಿವೃದ್ಧಿಪಡಿಸಲು ಯೋಜನೆ ರೂಪಿಸಲಾಗುವುದು ಎಂದರು.
ಬೆಂಜನಪದವಿನಲ್ಲಿ 1 ಕೋಟಿ ರೂಪಾಯಿ ವೆಚ್ಚದ ಸಮುದಾಯ ಭವನ ಪ್ರಗತಿಯಲ್ಲಿದ್ದರೆ, ಬೆಂಜನ ಪದವಿನಲ್ಲಿ ಈಗಾಗಲೇ ತಾಲೂಕು ಕ್ರೀಡಾಂಗಣಕ್ಕೆ ಗುರುತಿಸಲಾದ ಜಮೀನಿಗ ಆವರಣ ಗೋಡೆ ನಿರ್ಮಿಸಲು 50 ಲಕ್ಷ  ರೂಪಾಯಿ ಮಂಜೂರುಗೊಂಡಿದೆ. ಬಂಟ್ವಾಳ ಸಮುದಾಯ ಆರೋಗ್ಯ ಕೇಂದ್ರದ ಬಳಿ ಪಂಜೆಮಂಗೇಶರಾಯ ಭವನ, ತಾ.ಪಂ ಬಳಿ ಅಂಬೇಡ್ಕರ್ ಭವನ ನಿರ್ಮಾಣದ ಕಾರ್ಯವನ್ನು ಶೀಘ್ರದಲ್ಲೇ ಕೈಗೆತ್ತಿಕೊಳ್ಳಲಾಗುವುದು ಎಂದರು.

v 5.

v 4
ಜಿ.ಪಂ ಸದಸ್ಯ ಚಂದ್ರಪ್ರಕಾಶ್ ಶೆಟ್ಟಿ ಮಾತನಾಡಿ, ಅಭಿವೃದ್ಧಿ ಕಾರ್ಯದಲ್ಲಿ ಬಂಟ್ವಾಳ ವಿಧಾನ ಸಭಾ ಕ್ಷೇತ್ರ ರಾಜ್ಯದಲ್ಲೇ 2ನೇ ಸ್ಥಾನದಲ್ಲಿದೆ. ಇದಕ್ಕೆ ಸಚಿವ ರಮಾನಾಥ ರೈ ಅವರ ಪರಿಶ್ರಮ, ಸಾಧನೆಯೇ ಕಾರಣ. ಜನಪ್ರತಿನಿಧಿಗಳಿಗೆ ಸಾರ್ವಜನಿಕರು ಸಹಕರಿಸಿದಾಗ ಸಮಗ್ರ ಅಭಿವೃದ್ಧಿ ಸಾಧ್ಯ ಎಂದರು.ಲೋಕೋಪಯೋಗಿ ಇಲಾಖೆಯ ಸಹಾಯಕ ಕಾರ್ಯ ನಿರ್ವಾಹಕ ಇಂಜಿನಿಯರ್ ಉಮೇಶ್ ಭಟ್ ತಾಂತ್ರಿಕ ವರದಿಯನ್ನು ಮಂಡಿಸಿದರು.

DSC_2912

 

v 9

 

 

 

 

v 6

v 7

v 8

v2

 

v 1

v 3ಸಭಾ ಕಾರ್ಯಕ್ರಮದಲ್ಲಿ  ಸಜಿಪ  ಜಿಲ್ಲಾ ಪಂ. ಸದಸ್ಯ ಚಂದ್ರಪ್ರಕಾಶ್ ಶೆಟ್ಟಿ ತುಂಬೆ, ಬೂಡಾ ಅಧ್ಯಕ್ಷ ಪಿಯೂಸ್ ರೋಡ್ರೀಗಸ್, ಕರಿಯಂಗಳ ತಾಲೂಕು ಪಂಚಾಯತ್ ಸದಸ್ಯ  ಯಶವಂತ ಪೂಜಾರಿ, ಅಮ್ಮುಂಜೆ ತಾಲೂಕು ಪಂ.ಸದಸ್ಯ ಶಿವಪ್ರಸಾದ್, ಕರಿಯಂಗಳ ಗ್ರಾ.ಪಂ ಸದಸ್ಯ ಯಶವಂತ ಪೂಜಾರಿ,  ಅಮ್ಟಾಡಿ ತಾ. ಪಂ. ಸದಸ್ಯೆ ಮಲ್ಲಿಕಾ ಶೆಟ್ಟಿ, ಕ ರಿಯಂಗಳ ಗ್ರಾ.ಪಂ ಅಧ್ಯಕ್ಷೆ ಚಂದ್ರಾವತಿ, ಮಾಜಿ ಕರಿಯಂಗಳ ಗ್ರಾ. ಪಂ. ಅಧ್ಯಕ್ಷ ಚಂದ್ರಶೇಖರ ಭಂಡಾರಿ,  ಮಾಜಿ ಕರಿಯಂಗಳ ಗ್ರಾ.ಪಂ. ಅಧ್ಯಕ್ಷೆ  ವೀಣಾ ಆಚಾರ್ಯ  ಬಡಗಬೆಳ್ಳೂರು  ಗ್ರಾ. ಪಂ. ಉಪಾಧ್ಯಕ್ಷ ಯೋಗಿಶ್ ಸೂರ್ಲ,   ಕರಿಯಂಗಳ ಬ್ಲಾಕ್ ಕಾಂಗ್ರೇಸ್ ಅಧ್ಯಕ್ಷ ಉಮೇಶ್ ಆಚಾರ್ಯ, ಕಾಂಗ್ರೆಸ್ ಮುಖಂಡ  ಬಿಎಸ್ ಖಾದರ್,  ಸಹಾಯಕ ಕಾರ್ಯ ನಿರ್ವಾಹಕ ಇಂಜಿನಿಯರ್ ಉಮೇಶ್ ಭಟ್,  ಕರಿಯಂಗಳ ಪಿಡಿಒ ನಯನ,  ಗುತ್ತಿಗೆದಾರ ಇಕ್ಬಾಲ್ ಅಹಮ್ಮದ್ ಉಪಸ್ಥಿತರಿದ್ದರು.  ಅವಿನಾಶ್ ಕಡೇಶ್ವಾಲ್ಯ  ಕಾರ್ಯಕ್ರಮ ನಿರೂಪಿಸಿದರು . ಚಂದ್ರಾಹಾಶ ಪಲ್ಲಿಪಾಡಿ ಸ್ವಾಗತಿಸಿ,  ವೀಣಾ ಆಚಾರ್ಯ ವಂದಿಸಿದರು.

By suddi9

Leave a Reply

Your email address will not be published. Required fields are marked *