ಬಂಟ್ವಾಳ : “ಕಡತ ವಿಲೇವಾರಿ ದಿನ” ಮತ್ತೆ ಜಾರಿಗೆ ತರುವಂತೆ ಮುಖ್ಯಮಂತ್ರಿಗೆ ಮನವಿ.ಮೇಲಿನ ವಿಷಯಕ್ಕೆ ಸಂಬಂಧಿಸಿದಂತೆ ರಾಜ್ಯದಲ್ಲಿಯೇ ಮೊದಲ ಬಾರಿಗೆ ಕಾರ್ಯಾಂಗಕ್ಕೆ ಚುರುಕು ಮುಟ್ಟಿಸುವ ನಿಟ್ಟಿನಲ್ಲಿ 2013-14ನೇ ಸಾಲಿನಲ್ಲಿ “ಕಡತ ವಿಲೇವಾರಿ ದಿನ” ಎಂದು ಜಾರಿಗೆ ತಂದ ಹಿನ್ನೆಲೆಯಲ್ಲಿ ರಾಜ್ಯದ ಎಲ್ಲಾ ಇಲಾಖೆಗಳಲ್ಲಿ ಅದೆಷ್ಟೋ ವರ್ಷಗಳಿಂದ ವಿಲೇವಾರಿಯಾಗದೆ ನೆನೆಗುದಿಗೆ ಬಿದ್ದಿರುವ ಕಡತಗಳು ವಿಲೇವಾರಿಯಾಗಿದ್ದು ನಾನಾ ಇಲಾಖೆಗಳಲ್ಲಿನ ಪ್ರಗತಿ ಭರದಿಂದ ಸಾಗಿತು.

ಇದರಿಂದಾಗಿ ಸಾರ್ವಜನಿಕ ಉದ್ದೇಶಕ್ಕೆ ಜಮೀನು ಕಾದಿರಿಸುವ ಕಡತಗಳು, ವಿವಿಧ ಕಛೇರಿ ಸಂಬಂಧ ಕಡತಗಳು ಅಂಗನವಾಡಿ, ಶಾಲಾ ಕಟ್ಟಡಕ್ಕೆ ಕಾದಿರಿಸುವ ಕಡತಗಳು ಶೀಘ್ರ ವಿಲೇವಾರಿಯಾಗಿದ್ದವು. ಜಿಲ್ಲಾಧಿಕಾರಿ, ಸಹಾಯಕ ಆಯುಕ್ತ ಕಛೇರಿ, ಜಿಲ್ಲಾ ಪಂಚಾಯತ್ ಕಛೇರಿ ವರ್ಷಾನುಗಟ್ಟಲೆಯಿಂದ ಬಾಕಿಯಾಗಿದ್ದ ಪ್ರಕರಣಗಳು ಒಂದೇ ವಾರದಲ್ಲಿ ವಿಲೇವಾರಿಯಾಗಿ ಸಾರ್ವಜನಿಕರಿಗೆ ತುಂಬಾ ಅನುಕೂಲವಾಗಿತ್ತು.
ಈಗ ಮತ್ತೊಮ್ಮೆ ಕಳೆದ ಎರಡು ವರ್ಷಗಳಿಂದ ವಿವಿಧ ಇಲಾಕೆಗಳಲ್ಲಿ ಎಷ್ಟೋ ಕಡತಗಳು ವಿಲೇವಾರಿಯಾಗದೇ ಇರುವುದು ತಿಳಿದುಬಂದಿರುತ್ತದೆ. ಇದರಿಂದ ಸಾರ್ವಜನಿಕರಿಗೆ ತೊಂದರೆಯಾಗಿದೆ.
ಆದುದರಿಂದ ತಮ್ಮ ಅಧಿಕಾರ ಅವಧಿಯಲ್ಲಿ ಜಾರಿಗೆ ತಂದ “ಕಡತ ವಿಲೇವಾರಿ ದಿನ”ವನ್ನು ಮತ್ತೊಮ್ಮೆ ಜಾರಿಗೆ ತಂದು ಬಾಕಿ ಇರುವ ಕಡತಗಳನ್ನು ಪೂರ್ತಿ ವಿಲೇವಾರಿಗೊಳಿಸುವಂತೆ ಕ್ರಮ ಕೈಗೊಳ್ಳಬೇಕಾಗಿ ವಿನಂತಿ.ಸಿದ್ದಕಟ್ಟೆ  ಪ್ರಭಾಕರ ಪ್ರಭು ತಾಲೂಕು ಪಂಚಾಯತ್ ಸದಸ್ಯ ಮನವಿ ಮಾಡಿದ್ದಾರೆ.

 

By suddi9

Leave a Reply

Your email address will not be published. Required fields are marked *