ಮಲ್ಪೆ: ಮಲ್ಪೆ ಕೊಡವೂರು ರೋಟರಿ ಕ್ಲಬ್ ಪ್ರಾಯೋಜಿತ ತೆಂಕನಿಡಿಯೂರು ಸರ್ಕಾರಿ ಪ.ಪೂ ಕಾಲೇಜು ಇದರ ಹೈಸ್ಕೂಲ್ ವಿಭಾಗದಲ್ಲಿ ಇಂಟರ್ಯಾಕ್ಟ್ ಕ್ಲಬ್ ನ ಪದಪ್ರಧಾನ ಸಮಾರಂಭ  ಅ.5 ರಂದು ಶುಕ್ರವಾರ ನಡೆಯಿತು. ಪದಪ್ರಧಾನವನ್ನು ಮಾಜಿ ಉಪರಾಜ್ಯಪಾಲ ಮಹೇಶ್ ಕುಮಾರ್ ನೆರವೇರಿಸಿ ಶುಭ ಹಾರೈಸಿದರು.  ಸದಸ್ಯ ರಾಘವೇಂದ್ರ ಪ್ರಭು ಕರ್ವಾಲು ಮಾಹಿತಿ ನೀಡಿದರು.
13892097_1140064206017136_664704811970542662_n
ಅದ್ಯಕ್ಷತೆಯನ್ನು ಪ್ರಭಾತ್ ಕೋಟ್ಯಾನ್ ವಹಿಸಿದ್ದರು. ವೇದಿಕೆಯಲ್ಲಿ ಅದ್ಯಾಪಕರಾದ ಸತೀಶ್, ಶೇಖರ, ಸದಸ್ಯರಾದ ಅನಿಲ್ ಶೆಟ್ಟಿ, ಚಂದ್ರಕಾಂತ್ ಶೆಟ್ಟಿಗಾರ್, ಸಚಿನ್ ಸುಧೀಶ್  ಮುಂತಾದವರು ಉಪಸ್ಥಿತರಿದ್ದರು. ವಿದ್ಯಾರ್ಥಿ ಪ್ರಮುಖರು ವೇದಿಕೆಯಲ್ಲಿದ್ದರು.

By suddi9

Leave a Reply

Your email address will not be published. Required fields are marked *