ಮಲ್ಪೆ: ಮಲ್ಪೆ ಕೊಡವೂರು ರೋಟರಿ ಕ್ಲಬ್ ಪ್ರಾಯೋಜಿತ ತೆಂಕನಿಡಿಯೂರು ಸರ್ಕಾರಿ ಪ.ಪೂ ಕಾಲೇಜು ಇದರ ಹೈಸ್ಕೂಲ್ ವಿಭಾಗದಲ್ಲಿ ಇಂಟರ್ಯಾಕ್ಟ್ ಕ್ಲಬ್ ನ ಪದಪ್ರಧಾನ ಸಮಾರಂಭ ಅ.5 ರಂದು ಶುಕ್ರವಾರ ನಡೆಯಿತು. ಪದಪ್ರಧಾನವನ್ನು ಮಾಜಿ ಉಪರಾಜ್ಯಪಾಲ ಮಹೇಶ್ ಕುಮಾರ್ ನೆರವೇರಿಸಿ ಶುಭ ಹಾರೈಸಿದರು. ಸದಸ್ಯ ರಾಘವೇಂದ್ರ ಪ್ರಭು ಕರ್ವಾಲು ಮಾಹಿತಿ ನೀಡಿದರು.

ಅದ್ಯಕ್ಷತೆಯನ್ನು ಪ್ರಭಾತ್ ಕೋಟ್ಯಾನ್ ವಹಿಸಿದ್ದರು. ವೇದಿಕೆಯಲ್ಲಿ ಅದ್ಯಾಪಕರಾದ ಸತೀಶ್, ಶೇಖರ, ಸದಸ್ಯರಾದ ಅನಿಲ್ ಶೆಟ್ಟಿ, ಚಂದ್ರಕಾಂತ್ ಶೆಟ್ಟಿಗಾರ್, ಸಚಿನ್ ಸುಧೀಶ್ ಮುಂತಾದವರು ಉಪಸ್ಥಿತರಿದ್ದರು. ವಿದ್ಯಾರ್ಥಿ ಪ್ರಮುಖರು ವೇದಿಕೆಯಲ್ಲಿದ್ದರು.