ಮೂಡುಬಿದಿರೆ: ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಆಶ್ರಯದಲ್ಲಿ ಸಂಸ್ಥೆಯ 24 ಸಾವಿರ ವಿದ್ಯಾರ್ಥಿಗಳು ಸಹಿತ ಒಟ್ಟು 30 ಸಾವಿರ ಮಂದಿಯ ಸಮ್ಮುಖದಲ್ಲಿ ಸ್ವಾತಂತ್ರ್ಯ ದಿನಾಚರಣೆ ಸಂಭ್ರಮವನ್ನು ಸೋಮವಾರ ಪುತ್ತಿಗೆಯ ಶ್ರೀಮತಿ ವನಜಾಕ್ಷಿ ಕೆ.ಶ್ರೀಪತಿ ಭಟ್ ಬಯಲು ರಂಗಮಂಟಪದಲ್ಲಿ ಆಚರಿಸಲಾಯಿತು.
ಮಂಗಳೂರು ಧರ್ಮಾಧ್ಯಕ್ಷರಾದ ಡಾ.ಅಲೋಶಿಯಸ್ ಪೌಲ್ ಡಿ’ಸೋಜ ದ್ವಜಾರೋಹಣಗೈದರು. ಬಳಿಕ ಮಾತನಾಡಿದ ಅವರು, ದೇವಾಲಯಗಳಿಗಿಂತ ಶಿಕ್ಷಣಾಲಯಗಳು ಶ್ರೇಷ್ಠ.ಏಕತೆಯಿಂದ ಬದುಕುವುದನ್ನು ಶಿಕ್ಷಣ ಸಂಸ್ಥೆಗಳು ಕಲಿಸುತ್ತದೆ. ನಮ್ಮ ಜವಾಬ್ದಾರಿಯನ್ನು ಸರಿಯಾಗಿ ನಿಭಾಯಿಸುವುದರಿಂದ ದೇಶಾಭಿಮಾನವನ್ನು ಮೆರೆಯಬಹುದು. ಸ್ವಚ್ಛತೆ, ಶುದ್ಧ ನೀರು, ಸಾರ್ವಜನಿಕ ಸೊತ್ತುಗಳನ್ನು ಜತನದಿಂದ ಕಾಪಾಡಿಕೊಳ್ಳುವುದು, ಕಾನೂನು ಪರಿಪಾಲನೆ, ಭ್ರಷ್ಟಚಾರಮುಕ್ತ ಸಮಾಜ ಕಟ್ಟುವುದರಿಂದ ಭಾರತದಲ್ಲಿ ಹೂಡಿಕೆ ಮಾಡಿ, ಆರ್ಥಿಕ ಪ್ರಗತಿಯಲ್ಲೂ ಸಹಕಾರಿಯಾಗುವ ಮೂಲಕ ದೇಶಭಿಮಾನವನ್ನು ವ್ಯಕ್ತಪಡಿಸಬಹುದು. ಯುವಕರನ್ನು ಬಲಿಷ್ಠರಾಗಿಸುವುದರಿಂದ ದೇಶಕಟ್ಟುಲು ಸಾಧ್ಯ. ಭಾರತೀಯರ ತ್ಯಾಗ ಬಲಿದಾನದಿಂದ ಪಡೆದ ಅಮೂಲ್ಯವಾದ ಈ ಸ್ವಾತಂತ್ರ್ಯವನ್ನು ಉಳಿಸಿಕೊಳ್ಳಬೇಕು ಎಂದರು.

Alvas  (2)

Alvas  (1)
Alvas  (4)

Alvas  (5)

Alvas  (6)

Alvas  (7)

Alvas  (9)

Alvas  (10)

Alvas  (11)
ಆಳ್ವಾಸ್ ಸಂಸ್ಥೆಯ ಸಾಂಸ್ಕøತಿಕ ತಂಡದ ವಿದ್ಯಾರ್ಥಿಗಳು ವಂದೇ ಮಾತರಂ…ಕೋಟಿ ಕಂಠೋಸೆ…ಜನಗಣಮನ ಹಾಡಿದರು. ವೇದಿಕೆಯ ಮುಭಾಗದಲ್ಲಿದ್ದ 24 ಸಾವಿರ ವಿದ್ಯಾರ್ಥಿಗಳು ತಮ್ಮ ಕೈಯಲ್ಲಿ ತ್ರಿವರ್ಣ ಧ್ವಜವನ್ನು ಹಿಡಿದು ಬೀಸಿದರು. ತ್ರಿವರ್ಣದ ಬಲೂನುಗಳನ್ನು ಆಕಾಶದಲ್ಲಿ ತೇಲಿ ಬಿಡಲಾಯಿತು. ವಿಶೇಷ ಆಕರ್ಷಣೆಯಾಗಿ ತ್ರಿವರ್ಣ ಧಿರಿಸುಗಳನ್ನು ಧರಿಸಿದ ವಿದ್ಯಾರ್ಥಿಗಳು ಮಲ್ಲಕಂಬ, ಹುಲಿವೇಷ ಮಾದರಿಯಲ್ಲಿ ಪಿರಾಮೆಡ್ ಪ್ರದರ್ಶನ ನೀಡಿದರು.
ಸಿಇಟಿ ವೈದ್ಯಕೀಯ ವಿಭಾಗದಲ್ಲಿ ಮೊದಲ ರ್ಯಾಂಕ್ ಗಳಿಸಿದ ಅನಂತ್ ಜಿ., ಪಿಯುಸಿ ವಾಣಿಜ್ಯ ವಿಭಾಗದಲ್ಲಿ ರಾಜ್ಯಕ್ಕೆ ದ್ವೀತಿಯ ರ್ಯಾಂಕ್ ಪಡೆದ ದಕ್ಷಾ ಜೈನ್ ಹಾಗೂ ಆಶಿಕ್ ನಾರಾಯಣ್ ಹಾಗೂ ಯುಪಿಎಸ್‍ಸಿ ಪರೀಕ್ಷೆಯಲ್ಲಿ 387ನೇ ರ್ಯಾಂಕ್ ಗಳಿಸಿದ ಮಿಶನ್ ಕ್ವೀನಿ ಡಿ’ಕಾಸ್ಟ ಅವರನ್ನು ಸನ್ಮಾನಿಸಲಾಯಿತು.
ಮೂಡುಬಿದಿರೆ ಶಾಸಕ ಕೆ.ಅಭಯಚಂದ್ರ ಜೈನ್, ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧಕ್ಷ ಡಾ.ಎಂ ಮೋಹನ ಆಳ್ವ, ಟ್ರಸ್ಟಿಗಳಾದ ವಿವೇಕ್ ಆಳ್ವ, ವಿನಯ್ ಆಳ್ವ, ಉದ್ಯಮಿ ಶ್ರೀಪತಿ ಭಟ್ ಸಹಿತ ಗಣ್ಯರು, ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರು ಪಾಲ್ಗೊಂಡರು.
—

By suddi9

Leave a Reply

Your email address will not be published. Required fields are marked *