ಮೂಡುಬಿದಿರೆ: ಭಾರತೀಯ ಸ್ವಾತಂತ್ರ ಸಂಪಾದನೆಯಲ್ಲಿ ಗಾಂಧೀ ಮತ್ತು ನೆಹರೂ ಅವರನ್ನು ವೈಭವೀಕರಿಸಿ ಸ್ವಾತಂತ್ರ್ಯ ಹೋರಾಟದ ಇತಿಹಾಸದ ದಿಕ್ಕು ತಪ್ಪಿಸುವ ಕೆಲಸ ನಡೆದಿದೆ. ಭಾರತೀಯ ಕ್ರಾಂತಿಕಾರಿಗಳ ಪ್ರತಿರೋಧದ ಪರಿಣಾಮವಾಗಿ ಅದರಲ್ಲೂ ಆರು ಲಕ್ಷ ಮೂವತ್ತೈದು ಸಾವಿರ ಕ್ರಾಂತಿಕಾರಿಗಳ ಬಲಿದಾನ, ಸಂಘರ್ಷದ ಕಾರಣಕ್ಕಾಗಿ ನಮಗೆ ಸ್ವಾತಂತ್ರ್ಯ ದೊರೆತಿದೆ. ಇಂದು ದೇಶದ ವಿರುದ್ಧ ಮಾತನಾಡುವ ಕನಯ್ಯನಂಥವರು, ಸೈನಿಕರ ವಿರುದ್ಧವಾಗಿಯೇ ಮಾತನಾಡುವವರು, ನಮ್ಮ ನೆಲವನ್ನು ಆಕ್ರಮಿಸಬಯಸುತ್ತಿರುವ ದೇಶವಿರೋಧಿ ಶಕ್ತಿಗಳ ಸವಾಲಿಗೆ ಇನ್ನು ಪರಾಕ್ರಮ ಪ್ರದರ್ಶನವೇ ಹೊರತು ಪಲಾಯನವಿಲ್ಲ ಎಂದು ಪ್ರಾಂತ ಗೋರಕ್ಷಾ ಪ್ರಮುಖ್ ರಘು ಸಕಲೇಶಪುರ ಹೇಳಿದರು.
mbd_aug15_1 (2)

mbd_aug15_1 (1)
ಅವರು ವಿಶ್ವ ಹಿಂದೂ ಪರಿಷತ್ ಹಾಗೂ ಭಜರಂಗದಳ, ದುರ್ಗಾವಾಹಿನಿ ಮೂಡುಬಿದಿರೆ ಪ್ರಖಂಡದ ವತಿಯಿಂದ ಸಮಾಜ ಮಂದಿರದಲ್ಲಿ ನಡೆದ ಅಖಂಡ ಭಾರತ ಸಂಕಲ್ಪ ದಿನಾಚರಣೆಯಲ್ಲಿ ಪ್ರಮುಖ ಭಾಷಣ ಮಾಡಿದರು.
ನಕಲೀ ಗೋರಕ್ಷಕರ ಬಗ್ಗೆ ಪ್ರಧಾನಿಯವರು ನೀಡಿದ ಹೇಳಿಕೆಯಿಂದ ಗೋಕಳ್ಳರು ಸಂತಸಪಡಬೇಕಾಗಿಲ್ಲ. ಗೋವಿನ ರಕ್ಷಣೆಯನ್ನು ಸವಾಲಾಗಿ ಸ್ವೀಕರಿಸುವವರಿದ್ದೇವೆ ಎಂದ ಅವರು ವಿಶ್ವದ ಎರಡು ಮಹಾಯದ್ದಗಳಲ್ಲಿ ನಡೆದ ಜೀವಹಾನಿಗೂ ಮೀರಿ ಕೇವಲ ಭಾರತದ ಸ್ವಾತಂತ್ರ್ಯ ಹೋರಾಟದ ಹಿನ್ನೆಲೆಯಲ್ಲಿ ನಡೆದಿರುವ ಬಲಿದಾನವನ್ನು ವ್ಯರ್ಥವಾಗಿಸಬಾರದು ಎಂದರು. ಬಜರಂಗದಳದ ಕಾರ್ಯಚಟುವಟಿಕೆಗಳನ್ನು ಹತ್ತಿಕ್ಕಲು ರಾಜ್ಯ ಸರ್ಕಾರವು ಅನುಸರಿಸುತ್ತಿರುವ ಧೋರಣೆಯನ್ನೂ ಸವಾಲಾಗಿ ಸ್ವೀಕರಿಸಬೇಕಾಗಿದೆ ಎಂದವರು ಅಭಿಪ್ರಾಯಪಟ್ಟರು.
ಶ್ರೀ ವೆಂಕಟರಮಣ ಮತ್ತು ಶ್ರೀ ಹನುಮಂತ ದೇವಳದ ಮೊಕ್ತೇಸರ ಶಿವಾನಂದ ಪ್ರಭು ಅಧ್ಯಕ್ಷತೆ ವಹಿಸಿದ್ದರು. ಆರೆಸ್ಸೆಸ್ ಸಂಘ ಚಾಲಕ ವಾಸುದೇವ ಭಟ್ ಅಖಂಡ ಭಾರತ ಸಂಕಲ್ಪ ಬೊಧಿಸಿದರು.
ವಿಶ್ವಹಿಂದೂ ಪರಿಷತ್ ಅಧ್ಯಕ್ಷ ಕೆ. ವಿಶ್ವನಾಥ ಪ್ರಭು, ಭಜರಂಗದಳ ಜಿಲ್ಲಾ ಸಂಚಾಲಕ ಭುಜಂಗ ನಾಯಕ್, ದುರ್ಗಾವಾಹಿನಿ ಜಿಲ್ಲಾ ಸಂಚಾಲಕಿ ವಿದ್ಯಾ, ಪ್ರಖಂಡ ಸಂಚಾಲಕಿ ವಿಜೇತಾ ಸನತ್ ಉಪಸ್ಥಿತರಿದ್ದರು. ಪ್ರಖಂಡ ಬಜರಂಗದಳ ಸಂಯೋಜಕ ಸೋಮನಾಥ ಕೋಟ್ಯಾನ್ ಪ್ರಾಸ್ತಾವಿಕ ಮಾತುಗಳನ್ನಾಡಿ ಓಟಿಗಾಗಿ ಅಲ್ಪಸಂಖ್ಯಾತರನ್ನು ಓಲೈಸಿ ಭಾರತ ಮಾತೆಗೇ ದ್ರೋಹ ಬಗೆಯುವವರನ್ನು ಬೆಳೆಸಿದ್ದು ಕಾಂಗ್ರೆಸ್ ಸಾಧನೆ ಎಂದು ಟೀಕಿಸಿದರು.
ವಿಹಿಂಪ ಪ್ರಧಾನ ಕಾರ್ಯದರ್ಶಿ ಎಂ.ಶಾಂತಾರಾಮ ಕುಡ್ವಾ ಸ್ವಾಗತಿಸಿದರು. ಭಜರಂಗದಳ ಸಹ ಸಂಯೋಜಕ ಭರತ್ ವಂದಿಸಿದರು. ಆರೆಸ್ಸೆಸ್ ಕಾಲೇಜು ವಿದ್ಯಾರ್ಥಿ ಪ್ರಮುಖ್ ಡಾ. ಕೇಶವ ಹೆಗ್ಡೆ ಕಾರ್ಯಕ್ರಮ ನಿರ್ವಹಿಸಿದರು. ಸಂಜೆ ಆಲಂಗಾರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ವಠಾರದಿಂದ ಹೊರಟು ಪೇಟೆಯ ಮುಖ್ಯ ಬೀದಿಯ ಮೂಲಕ ಸಮಾಜಮಂದಿರದವರೆಗೆ ಪಂಜಿನ ಮೆರವಣಿಗೆ ನಡೆಯಿತು.

ಎಂಬಿಡಿ_ಆಗಸ್ಟ್15_1
ಮೂಡುಬಿದಿರೆಯಲ್ಲಿ ಅಖಂಡ ಭಾರತ ಸಂಕಲ್ಪ ದಿನಾಚರಣೆ ಹಮ್ಮಿಕೊಳ್ಳಲಾಗಿತ್ತು.
* ಮೂಡುಬಿದಿರೆ ಪೇಟೆಯಲ್ಲಿ ಪಂಜಿನ ಮೆರವಣಿಗೆ ನಡೆಯಿತು.
—

By suddi9

Leave a Reply

Your email address will not be published. Required fields are marked *