ಮೂಡುಬಿದಿರೆ: ಬಡತನ ದೇಶದ ಪ್ರಗತಿಗೆ ಅಡ್ಡಿಯಾಗಿದ್ದು ಅದನ್ನು ಶಿಕ್ಷಣದ ಮೂಲಕ ನಿವಾರಿಸಬಹುದಾಗಿದೆ. ರಾಜ್ಯದಲ್ಲಿ ಇಂದು ಕನ್ನಡ ಮಾಧ್ಯಮ ಶಾಲೆಗಳಲ್ಲಿಯೂ ಆಂಗ್ಲ ಭಾಷೆಯನ್ನು ಪ್ರಾಥಮಿಕ ಹಂತದಲ್ಲಿ ಬೋಧಿಸಿಕೊಂಡು ಎಳೆಯ ಮಕ್ಕಳ ಭವಿಷ್ಯ ಹಸನಾಗಿಸುವ ಯತ್ನ ನಡೆದಿದೆ. ನೆಮ್ಮದಿ, ಪ್ರೀತಿ ವಿಶ್ವಾಸ ಸಹಿತ ಸ್ವಾಭಿಮಾನದ ಬದುಕು ನಮ್ಮದಾಗಲಿ, ತಾಯ್ನಾಡಿನ ಒಳಿತಿಗಾಗಿ ದುಡಿಯೋಣ ಎಂದು ಶಾಸಕ ಕೆ. ಅಭಯಚಂದ್ರ ಹೇಳಿದರು.
ಪುರಸಭಾ ಕಾರ್ಯಾಲಯದ ಆವರಣದಲ್ಲಿ ಸೊಮವಾರ ಮುಂಜಾನೆ ಧ್ವಜಾರೋಹಣ ನೆರವೇರಿಸಿ ಮಾತನಾಡಿದ ಅವರು ಕಾರ್ನಾಡು ಸದಾಶಿವರಾಯರಂತಹ ದೇಶ ಪ್ರೇಮಿಗಳು ತಮ್ಮ ಸರ್ವಸ್ವವನ್ನೂ ತ್ಯಾಗ ಮಾಡಿರುವುದನ್ನು ಮರೆಯಬಾರದು ಎಂದ ಅವರು ಮೂಲ ಭೂತ ಸೌಕರ್ಯಗಳ ಅಭಿವೃದ್ಧಿ, ಕುಡಿಯುವ ನೀರು, ರಸ್ತೆ ಅಭಿವೃದ್ಧಿಗೆ ಗಮನ ಹರಿಸಿ ಮೂಡುಬಿದಿರೆಯ ಪುರಸಭೆಯನ್ನು ಮಾದರಿ ಪುರಸಭೆಯನ್ನಾಗಿಸಬೇಕು ಎಂದು ಕರೆ ನೀಡಿದರು.
ಪುರಸಭಾಧ್ಯಕ್ಷೆ ರೂಪಾ ಸಂತೋಷ್ ಶೆಟ್ಟಿ, ಉಪಾಧ್ಯಕ್ಷೆ ಶಕುಂತಲಾ ಹರೀಶ್, ಸ್ಥಾಯೀ ಸಮಿತಿ ಅಧ್ಯಕ್ಷ ಕೊರಗಪ್ಪ,ಸದಸ್ಯರಾದ ಎಂ. ಬಾಹುಬಲಿ ಪ್ರಸಾದ್, ರತ್ನಾಕರ ದೇವಾಡಿಗ, ಪ್ರಸಾದ್ ಕುಮಾರ್, ಮೂಡಾ ಅಧ್ಯಕ್ಷ ಸುರೇಶ್ ಕೊಟ್ಯಾನ್, ಶಿಕ್ಷಣ ಇಲಾಖೆಯ ಬಿ.ರಾಜಶ್ರೀ, ಮೂಡುಬಿದಿರೆ ಥರ್ಡ್ ಶಾಲಾ ಮಕ್ಕಳು, ಪುರಸಭಾ ಮುಖ್ಯಾಧಿಕಾರಿ ಶೀನ ನಾಯ್ಕ, ಅಧಿಕಾರಿಗಳು ಉಪಸ್ಥಿತರಿದ್ದರು.
ತಹಸೀಲ್ದಾರ್ ಕಛೇರಿ:
ತಾಲೂಕು ದಂಡಾಧಿಕಾರಿ ತಹಸೀಲ್ದಾರ್ ಮಹಮ್ಮದ್ ಇಸಾಕ್ ತಹಸೀಲ್ದಾರ್ ಕಛೇರಿಯಲ್ಲಿ ಧ್ವಜಾರೋಹಣ ನೆರವೇರಿಸಿದರು. ಪ್ರೆಸ್ ಕ್ಲಬ್ ಅಧ್ಯಕ್ಷ ಧನಂಜಯ ಮೂಡುಬಿದಿರೆ, ಅತಿಥಿಗಳಾಗಿದ್ದರು. ಉಪತಹಸೀಲ್ದಾರ್ ಅಬ್ದುಲ್ ರಹಮಾನ್, ಸಹಿತ ಕಂದಾಯ ಅಧಿಕಾರಿಗಳು, ಸಿಬಂದಿಗಳು ಮತ್ತಿತರರು ಉಪಸ್ಥಿತರಿದ್ದರು.
ಸಮಾಜ ಮಂದಿರ:
ಸಮಾಜ ಮಂದಿರ ಸಭಾದ ವತಿಯಿಂದ ಸಮಾಜ ಮಂದಿರದ ಆವರಣದಲ್ಲಿ ಆಡಳಿತ ಮಂಡಳಿ ಉಪಾಧ್ಯಕ್ಷರಾದ ಎಸ್.ಡಿ.ಸಂಪತ್ ಸಾಮ್ರಾಜ್ಯ ಧ್ವಜಾರೋಹಣ ನೆರವೇರಿಸಿದರು. ಪದಾಧಿಕಾರಿಗಳಾದ ಪಿ.ಎಸ್. ಭಟ್, ಗಣೇಶ್ ಕಾಮತ್, ಕೆ. ಆರ್. ಪಂಡಿತ್, ವಾಸುದೇವ ರಾವ್, ದಯಾನಂದ ಪಂಡಿತ್, ಪ್ರತಾಪ್ ಎಂ, ಸಿ.ಎಚ್. ಅಬ್ದುಲ್ ಗಫೂರ್ ಮತ್ತಿತರರು ಉಪಸ್ಥಿತರಿದ್ದರು.
ಅರಣ್ಯ ಇಲಾಖೆ:
ಇಲ್ಲಿನ ಅರಣ್ಯ ಇಲಾಖಾ ಕಚೇರಿಯ ಆವರಣದಲ್ಲಿ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಹೆಚ್. ಆರ್. ಸುಬ್ರಹ್ಮಣ್ಯ ಧ್ವಜಾರೋಹಣ ನೆರವೇರಿಸಿದರು. ವಲಯ ಅರಣ್ಯಾಧಿಕಾರಿ ದಿನೇಶ್ ಜಿ.ಡಿ, ಹಾಗೂ ಸಿಬಂದಿಗಳು ಉಪಸ್ಥಿತರಿದ್ದರು.
ಕಲ್ಲಬೆಟ್ಟು ಶಾಲೆ:
ಇಲ್ಲಿನ ಜಿ.ಪಂ. ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಹಳೆ ವಿದ್ಯಾರ್ಥಿ, ಉದ್ಯಮಿ ಪದ್ಮಯ್ಯ ಬಿ, ಸುವರ್ಣ ಧ್ವಜಾರೋಹಣ ನೆರವೇರಿಸಿದರು. ಎಸ್.ಡಿ.ಎಂ.ಸಿ ಅಧ್ಯಕ್ಷ ಕೆ. ಹಾಲಿದ್ ಸಹಿತ ಪದಾಧಿಕಾರಿಗಳು, ಕಲ್ಲಬೆಟ್ಟು ಸಿ.ಎ.ಬ್ಯಾಂಕ್ ಅಧ್ಯಕ್ಷ ಕೆ. ಕೃಷ್ಣರಾಜ ಹೆಗ್ಡೆ, ರೋಟರಿ ಟೆಂಪಲ್ ಟೌನ್ ಅಧ್ಯಕ್ಷ ರಾಜೇಶ್ ಬಂಗೇರ, ಶಾಲಾ ಮುಖ್ಯೋಪಾಧ್ಯಾಯ ವಿನಯ ಕುಮಾರ್ ಮತ್ತಿತರರು ಉಪಸ್ಥಿತರಿದ್ದರು.
ಪೋಲೀಸ್ ಠಾಣೆ:
ಇಲ್ಲಿನ ಪೋಲೀಸ್ ಠಾಣೆಯಲ್ಲಿ ಪೋಲೀಸ್ ನಿರೀಕ್ಷಕ ರಾಮಚಂದ್ರ ನಾಯಕ್ ಧ್ವಜಾರೋಹಣ ನೆರವೇರಿಸಿದರು. ಉಪ ನಿರೀಕ್ಷಕರಾದ ದೇಜಪ್ಪ ಹಾಗೂ ಸಿಬಂದಿವರ್ಗದವರು ಉಪಸ್ಥಿತರಿದ್ದರು.