ಬಂಟ್ವಾಳ : ಸೌತ್ ಕೆನರಾ ಫೋಟೋಗ್ರಾಫರ್ಸಅಸೋಶಿಯೇಶನ್ ದ.ಕ.ಮತ್ತು ಉಡುಪಿ ಜಿಲ್ಲೆಯ ಬಂಟ್ವಾಳ ವಲಯದ ವತಿಯಿಂದ 177ನೇ ವಿಶ್ವ ಛಾಯಾಚಿತ್ರಗ್ರಹಣ ದಿನಾಚರಣೆಯ ಅಂಗವಾಗಿ 39ವರ್ಷ ಕಾಲ ಛಾಯಾಗ್ರಹಣದಲ್ಲಿ ಸೇವೆ ಸಲ್ಲಿಸಿದ ಹಿರಿಯ ಛಾಯಾಗ್ರಾಹಕ ಪಾಣೆಮಂಗಳೂರಿನ ಶ್ರೀಧರ ನಾಯಕ್ ರವರನ್ನು ಅವರ ಸ್ವಗೃಹದಲ್ಲಿ ಸನ್ಮಾನಿಸಲಾಯಿತು. ವಲಯಾಧ್ಯಕ್ಷ ಸುಕುಮಾರ್ ಬಂಟ್ವಾಳ , ಪ್ರಧಾನ ಕಾರ್ಯದರ್ಶಿ ಹರೀಶ್ ಕುಂದರ್, ಜಿಲ್ಲಾ ಕೋಶಾಧಿಕಾರಿ ದಯಾನಂದ ಬಂಟ್ವಾಳ, ಕೋಶಾಧಿಕಾರಿ ರವಿ ಕಲ್ಪನೆ, ಉಪಾಧ್ಯಕ್ಷ ರಾಜೇಂದ್ರ ಕೆ., ಸದಸ್ಯರುಗಳಾದ ನಾಗೇಶ್ ಪೂಜಾರಿ , ರಾಜರತ್ನ, ಮಹೇಶ್ ಶೆಟ್ಟಿ ತಾರೇಶ್, ರಾಜೇಶ್ ಕಿರಣ್, ಚಂದ್ರಶೇಖರ ಅಲ್ಲಿಪಾದೆ ಉಪಸ್ಥಿತರಿದ್ದರು.
