ಬಂಟ್ವಾಳ: ಮಾನವೀಯ ಮೌಲ್ಯದ ಕೊಂಡಿ ಕೃಷ್ಣ ತತ್ವದಲ್ಲಿ ದ್ದು ಅದುವೇ ಜೀವನ ತತ್ವವೂ ಆಗಬೇಕಾಗಿದೆ.ಯುವ ಜನಾಂಗ ಕೃಷ್ಣ ತತ್ವದ ಉತ್ತಮ ವಿಚಾರವನ್ನು ಅಧ್ಯಯನ ಮಾಡಿ ತಪ್ಪು ನಡೆಯಲ್ಲಿ ನಡೆಯದೆ ಸುಸಂಸ್ಕೃತ ಸಮಾಜ ಕಟ್ಟಲು ಮುಂದಾಗಬೇಕು.ಉತ್ಸವ ,ಆಚರಣೆಗಳು ಸದೃಢ ರಾಷ್ಟ್ರ ನಿರ್ಮಾಣಕ್ಕೆ ನಾಂದಿಯಾಗಲಿ ಎಂದು ಒಡಿಯೂರು ಶ್ರೀ ಗುರು ದೇವಾನಂದ ಸ್ವಾಮೀಜಿ ಅವರು ಹೇಳಿದರು.2608pkt4

ಬಂಟ್ವಾಳ ತಾಲೂಕು ನಾವೂರು ಅಗ್ರಹಾರ ಬೀದಿ ಶ್ರೀ ಕೃಷ್ಣ ಜನ್ಮಾಷ್ಟಮಿ ಆಚರಣಾ ಸಮಿತಿ ವತಿಯಿಂದ ಶ್ರೀ ಕೃಷ್ಣ ಜನ್ಮಾಷ್ಟಮಿ ಪ್ರಯುಕ್ತ ಶ್ರೀ ಗೋಪಾಲಕೃಷ್ಣ ದೇವಸ್ಥಾನದ ವಠಾರದಲ್ಲಿ ಜರಗಿದ 12ನೇ ವರ್ಷದ ಮೊಸರು ಕುಡಿಕೆ ಉತ್ಸವ ಕಾರ್ಯಕ್ರಮದಲ್ಲಿ ಆಶೀರ್ವಚನ ನೀಡಿದರು.
ಶ್ರೀ ಕೃಷ್ಣ ಪರಿಸರ ಪ್ರೇಮಿಯಾಗಿದ್ದು ಪ್ರಕೃತಿಯೊಂದಿಗೆ ಅವಿನಾಭಾವ ಸಂಬಂಧ ಹೊಂದಿದ್ದ.ಆಕಾಶ ತತ್ವದ ನೀಲಿ ಬಣ್ಣದ ಕೃಷ್ಣ ನಲ್ಲಿ ಗೋಪಾಲಕನಾಗಿ ಕೃಷಿ ತತ್ವವೂ ಅಡಕಗೊಂಡಿತ್ತು.ಇಂತಹ ಉತ್ತಮ ವಿಚಾರಗಳನ್ನು ಅಳವಡಿಸಿಕೊಂಡಾಗ ಜೀವನದಲ್ಲಿ ಬೆಳಗು ಸಾಧ್ಯ ಎಂದವರು ನುಡಿದರು.
ರಾಜ್ಯ ಅರಣ್ಯ ಸಚಿವ ಬಿ.ರಮಾನಾಥ ರೈ ಅವರು ಅಧ್ಯಕ್ಷತೆ ವಹಿಸಿ ಮಾತನಾಡಿ ಜಾತಿ ಮತ ಬೇಧವಿಲ್ಲದ ಮಗುವಿನ ಮನಸ್ಸಿನ ನಿಷ್ಕಲ್ಮಶತೆಯಿಂದ ನಾವು ದೈವತ್ವಕ್ಕೇರಬಹುದು.ಜಾತಿ ಮತ ಧರ್ಮವೆಂಬುವುದು ದೇವರ ಸೃಷ್ಟಿಯಲ್ಲ.ದೇವರ ಪ್ರೀತಿ ಎಲ್ಲರಿಗೂ ಲಭ್ಯ.ಒಳ್ಳೆಯ ಮನಸ್ಸಿನಿಂದ ಉತ್ತಮ ಕಾರ್ಯದ ಮೂಲಕ ಶಾಂತಿ,ಸಮಾಧಾನ ತುಂಬಿದ ಉತ್ತಮ ಸಮಾಜದ ನಿರ್ಮಾಣ ಸಾಧ್ಯ ಎಂದು ಹೇಳಿದರು.
ಜಿ.ಪಂ.ಸದಸ್ಯರಾದ ಚಂದ್ರಪ್ರಕಾಶ್ ಶೆಟ್ಟಿ ತುಂಬೆ,ಬಿ.ಪದ್ಮಶೇಖರ ಜೈನ್, ಬಂಟ್ವಾಳ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕೆ. ಮಾಯಿಲಪ್ಪ ಸಾಲಿಯಾನ್, ಬೂಡಾ ಅಧ್ಯಕ್ಷ ಪಿಯೂಸ್ ಎಲ್.ರೋಡ್ರಿಗಸ್,ಗುರುಪುರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಪೃಥ್ವಿರಾಜ್ ಕೆ., ಅಗ್ರಹಾರಬೀದಿ ಶ್ರೀ ಗೋಪಾಲಕೃಷ್ಣ ದೇವಸ್ಥಾನದ ಪ್ರಧಾನ ಅರ್ಚಕ ವೇ|ಮೂ| ಸುದರ್ಶನ್ ಬಲ್ಲಾಳ್, ಪದ್ಮಶೇಖರ ಜೈನ್ ನಾವೂರು ಬೀದಿ,ಬಂಟ್ವಾಳ ವರ್ತಕರ ಬ್ಯಾಂಕ್ ಅಧ್ಯಕ್ಷ ಸುಭಾಶ್ಚಂದ್ರ ಜೈನ್,ಉದ್ಯಮಿ ಹಿಲಾರಿ ಕ್ರಾಸ್ತಾ ಅತಿಥಿಗಳಾಗಿ ಭಾಗವಹಿಸಿದ್ದರು.
ಸಮಿತಿ ಪ್ರಮುಖರಾದ ಗಣರಾಜ್ ಬೀದಿ, ಚಂದು ಬೀದಿ,ಚಂದ್ರಕಾಂತ್,ರಮೇಶ್ ಪೂಜಾರಿ,ಹರೀಶ್ ಪೂಜಾರಿ,ಸತ್ಯ,ವೈಶಾಖ್,ಸತೀಶ್ ಪೂಜಾರಿ,ಧನರಾಜ್,ಚೈತ್ರೇಶ್, ರಾಘವ ಸಫಲ್ಯ,ಕಾರ್ತಿಕ್ ಉಪಸ್ಥಿತರಿದ್ದರು.
ಈ ಸಂದರ್ಭದಲ್ಲಿ ಬಿ.ಪದ್ಮ ಶೇಖರ ಜೈನ್ ಮತ್ತು ಚಂದ್ರಪ್ರಕಾಶ್ ಶೆಟ್ಟಿ ಅವರನ್ನು ಸಮ್ಮಾನಿಸಲಾಯಿತು.ನಿವೃತ್ತ ಯೋಧ ಪುಷ್ಪರಾಜ ಅವರನ್ನು ಗೌರವಿಸಲಾಯಿತು.ವಿವಿಧ ಸ್ಪರ್ಧಾ ವಿಜೇತರಿಗೆ ಬಹುಮಾನ ವಿತರಿಸಲಾಯಿತು.
ನೀರೇಶ್ ಕುಮಾರ್ ಸ್ವಾಗತಿಸಿ,ವಂದಿಸಿದರು. ಚಂದ್ರಹಾಸ್ ನಾವೂರು ಬೀದಿ ಬಹುಮಾನಿತರ ವಿವರ ನೀಡಿದರು.ಸಂತೋಷ್ ಸಿದ್ದಕಟ್ಟೆ ಕಾರ್ಯಕ್ರಮ ನಿರೂಪಿಸಿದರು.
ಬೆಳಗ್ಗೆ ಮಂಗಳೂರು ಉಮಾ ಎಸ್.ರಾವ್ ಅವರು ಕಾರ್ಯಕ್ರಮ ಉದ್ಘಾಟಿಸಿದರು. ನಾವೂರು ಗ್ರಾ.ಪಂ.ಅಧ್ಯಕ್ಷೆ ಗುಲಾಬಿ ಚಂದಪ್ಪ ನಾಯ್ಕ ಅಧ್ಯಕ್ಷತೆ ವಹಿಸಿದ್ದರು.ಸೀತಾರಾಮ ಸಾಲ್ಯಾನ್,ಶಕುಂತಲಾ ಕಾರಂತ್,ಸುಂದರ ಕುಲಾಲ್,ಗಣೇಶ್ ಕುಲಾಲ್ ಅತಿಥಿಗಳಾಗಿದ್ದರು. ಸಂಜೆ ಶ್ರೀ ಗೋಪಾಲಕೃಷ್ಣ ದೇವಸ್ಥಾನದಿಂದ ಮಣಿಹಳ್ಳದ ವರೆಗೆ ಶೋಭಾಯಾತ್ರೆ ನಡೆಯಿತು.

By suddi9

Leave a Reply

Your email address will not be published. Required fields are marked *