ಕೈಕಂಬ: ಕರಿಯಂಗಳ ಗ್ರಾಮದ ಪೂಳಲಿ ಕಲ್ಕುಡದ ಯಶೋಧರ ಪ್ರಸ್ತುತ ಸಿವಿಲ್ ಗುತ್ತಿಗೆದಾರರಾಗಿ ಉದ್ಯೋಗದ ಜೊತೆಗೆ ಹಲವಾರು ಸಮಾಜಮುಖಿ ಸಂಘಟನೆಗಳಲ್ಲಿ ಸಕ್ರಿಯರಾಗಿದ್ದು. ಯುವಕರನ್ನು ಸಂಘಟಿಸಿ ಅನೇಕ ಸಮಾಜಸೇವಾ ಕಾರ್ಯಾಗಳ ಪ್ರೇರಕರಾಗಿದ್ದು ಸೇವೆಯಲ್ಲೇ ಸಂತೃಪ್ತಿ ಕಾಣುವ ಮೃದು ಮಾತಿನ ಹೃದಯವಂತವರಾಗಿದ್ದು ಇವರ ಸೇವೆಯನ್ನು ಮನಗೊಂಡು ನಾಗಶ್ರೀ ಮಿತ್ರ ವೃಂದ (ರಿ,) ಕಮ್ಮಾಜೆ, ತೆಂಕಬೆಳ್ಳೂರು ಸಂಘದ ವತಿಯಿಂದ 15ನೇ ವರ್ಷದ ಮೋಸರು ಕುಡಿಕೆ ಉತ್ಸವದ ಸಮರೋಪ ಸಮಾರಂಭದಲ್ಲಿ ಇವರನ್ನು ಸನ್ಯಾನಿಸಲಾಯಿತು . ಈ ಸಂದರ್ಭದಲ್ಲಿ ರೋಟರಿ ಕ್ಲಬ್ ನ ಅಧ್ಯಕ್ಷರು ರೀತೇಶ್ ಬಾಳಿಗ ತಾ.ಪಂ ಸದಸ್ಯ ಯಶವಂತ ಕಾಟ್ಯಾನ್ , ಉಧ್ಯಮಿಗಳಾದ ಉಮೇಶ್ ಬೆಂಜನಪದವು, ಉದ್ಯಮಿ ಬಾಲಕೃಷ್ಣ ಪೊಳಲಿ, ರವೀಂದ್ರ ಕಮ್ಮಾಜೆ, ದೀನೆಶ್ ಕಮ್ಮಾಜೆ, ಸಂಧೀಪ್ ಕಮ್ಮಾಜೆ ಮತ್ತಿತರರು ಉಪಸ್ಥಿತರಿದ್ದರು.

