ಬಂಟ್ವಾಳ: ತಾಲ್ಲೂಕಿನ ಪಂಜಿಕಲ್ಲು ಗ್ರಾಮದ ಪ್ರಸಿದ್ಧ ಬಾಲೇಶ್ವರ ಶ್ರೀ ಕೊಡಮಣಿತ್ತಾಯ ಬ್ರಹ್ಮಬೈದರ್ಕಳ ಗರಡಿಯಲ್ಲಿ ಕೊಡಮಣಿತ್ತಾಯ ದೈವಕ್ಕೆ ಭಾನುವಾರ ಮಧ್ಯಾಹ್ನ ವಾರ್ಷಿಕ ‘ಸೋಣ ನೇಮ’ ಉತ್ಸವ ನಡೆಯಿತು. ಇದೇ ವೇಳೆ ದೈವದ ಬಲಿ ಉತ್ಸವ ಸಹಿತ ಸಾಂಕೇತಿಕ ಮಾದರಿಯಲ್ಲಿ ಪಲ್ಲಕಿ ಮತ್ತು ಹುಲಿ ವಾಹನ ಅಲಂಕಾರ ನಡೆಯಿತು. ಮಧ್ಯಾಹ್ನ ನಡೆದ ಸಾರ್ವಜನಿಕ ಅನ್ನಸಂತರ್ಪಣೆಯಲ್ಲಿ ಸಾವಿರಾರು ಮಂದಿ ಭಕ್ತರು ಪಾಲ್ಗೊಂಡಿದ್ದರು. ಜಿಲ್ಲಾ ಪಂಚಾಯಿತಿ ಸದಸ್ಯ ಬಿ. ಪದ್ಮಶೇಖರ ಜೈನ್, ಅಕ್ರಮ ಸಕ್ರಮ ಸಮಿತಿ ಅಧ್ಯಕ್ಷ ಕೆ.ಮಾಯಿಲಪ್ಪ ಸಾಲ್ಯಾನ್, ಭೂ ಅಭಿವೃದ್ಧಿ ಬ್ಯಾಂಕಿನ ಅಧ್ಯಕ್ಷ ಸುದರ್ಶನ್ ಜೈನ್ ಮತ್ತಿತರರು ಭೇಟಿ ನೀಡಿದರು.

ಜೀರ್ಣೋದ್ಧಾರ ಸಮಿತಿ ಗೌರವಾಧ್ಯಕ್ಷ ಶ್ರೀಪತಿ ಭಟ್, ಕಾರ್ಯಾಧ್ಯಕ್ಷ ಪ್ರಕಾಶ ಕುಮಾರ್ ಪೀರ್ದಬೆಟ್ಟು, ಅಧ್ಯಕ್ಷ ಕೆ.ಎನ್.ಶೇಖರ್, ಪ್ರಮುಖರಾದ ಬಿ.ಕೃಷ್ಣರಾಜ ಜೈನ್ ಪಂಜಿಕಲ್ಲು ಗುತ್ತು, ಜಯ ಕುಂದರ್ ಬಾಲೇಶ್ವರ, ರವಿ ಆರ್.ಪೂಜಾರಿ, ಗಣೇಶ ಪ್ರಭು ಭಾವಂತಬೆಟ್ಟು, ದೇಜಪ್ಪ ಸಾಲ್ಯಾನ್ ಮತ್ತಿತರರು ಉಪಸ್ಥಿತರಿದ್ದರು.
