ಬಂಟ್ವಾಳ: ಪಾಣೆಮಂಗಳೂರಿನ ಮೆಲ್ಕಾರ್‍ನಲ್ಲಿ ಕೇಂದ್ರ ಕಚೇರಿ ಮಂಗಳಪದವು ಹಾಗೂ ಪುತ್ತೂರಿನಲ್ಲಿ ಶಾಖಾ ಕಚೇರಿ ಹೊಂದಿರುವ ಗಾಯತ್ರಿ ಕ್ರೆಡಿಟ್ ಕೋ-ಅಪರೇಟಿವ್ ಸೊಸೈಟಿ ಪ್ರಸಕ್ತ ವರ್ಷದ ಸಾಲಿನಲ್ಲಿ 12ಕೋಟಿಗೂ ಅಧಿಕ ವ್ಯವಹಾರ ನಡೆಸಿ, ವರ್ಷಾಂತ್ಯಕ್ಕೆ 9ಲಕ್ಷದ 25ಸಾವಿರದ 731ರೂಪಾಯಿ ನಿವ್ವಳ ಲಾಭ ಗಳಿಸಿದೆ. ಸೊಸೈಟಿಯ ಅಧ್ಯಕ್ಷ ವಿಷ್ಣುಭಟ್ ಅಡ್ಯೇಯಿ ಅವರ ಅಧ್ಯಕ್ಷತೆಯಲ್ಲಿ ಮೆಲ್ಕಾರಿನ ರಾಮದೇವ ಕಲ್ಯಾಣ ಮಂಟಪದಲ್ಲಿ ಸೊಸೈಟಿಯ ಪ್ರಸಕ್ತ ವರ್ಷದ ಸಾಲಿನ ಮಹಾಸಭೆಯು ನಡೆದಿದ್ದು, ಸಭೆಯಲ್ಲಿ ಸದಸ್ಯರಿಗೆ ಲಾಭಾಂಶದ ಶೇಕಡಾ 8ರ ಡಿವಿಡೆಂಡ್ ಘೋಷಿಸಲಾಯಿತು. ಸಂಸ್ಥೆ ‘ಎ’ ಹಾಗೂ’ಬಿ’ ಕ್ಲಾಸ್ ಸೇರಿ ಒಟ್ಟು 2ಸಾವಿರ ಸದಸ್ಯರನ್ನು ಹೊಂದಿದ್ದು, ಪ್ರಗತಿಯತ್ತ ಮುಂದುವರಿಯುತ್ತಿದೆ.

gayathri-bank-mahasbhe

ಕಳೆದ ಎಪ್ರಿಲ್ 27ರಂದು ಪುತ್ತೂರಿನಲ್ಲಿ ನೂತನವಾಗಿ ಆರಂಭಗೊಂಡ ಶಾಖೆಯಲ್ಲಿ ಎಲ್ಲಾ ಬ್ಯಾಂಕಿಂಗ್ ವ್ಯವಹಾರಗಳೊಂದಿಗೆ ಸೇಫ್ ಡಿಪಾಸಿಟ್ ಲಾಕರ್ ಸೌಲಭ್ಯದ ವ್ಯವಸ್ಥೆ ಹೊಂದಲಾಗಿದೆ. ಸಂಸ್ಥೆಯ ಹೆಸರಿನಲ್ಲಿ ಇನ್ಸ್ಶೂರೆನ್ಸ್ ಕಾರ್ಪೋರೇಟ್ ಏಜನ್ಸಿಯನ್ನು ಹೊಂದಲು ಸಂಬಂಧಪಟ್ಟವರೊಂದಿಗೆ ಅಧಿಕೃತ ಮಾತುಕತೆಗಳು ಪ್ರಗತಿಯಲ್ಲಿವೆ ಎಂದು ವಿಷ್ಣುಭಟ್ ತಿಳಿಸಿದರು.

ಸಭೆಯಲ್ಲಿ ಉಪಾಧ್ಯಕ್ಷೆ ಶಾರದಾ ಎಸ್. ರಾವ್, ನಿರ್ದೇಶಕರುಗಳಾದ ಕೈಯ್ಯೂರು ನಾರಾಯಣಭಟ್, ಪರಮೇಶ್ವರ ಐತಾಳ್ ಕಂದೂರು, ಜಯಶಂಕರಬಾಸ್ರಿತ್ತಾಯ, ಲಕ್ಷ್ಮೀನಾರಾಯಣ ಉಡುಪ, ಪ್ರಭಾಕರರಾವ್ ಶಂಭೂರು, ಸೂರ್ಯನಾರಾಯಣ ಪೂವಳ, ಮೋಹನಾಚಾರ್ಯ, ರಾಜಾರಾಮ ಐತಾಳ್ ಕಂದೂರು, ವಿಶಾಲಾಕ್ಷಿ ಆರ್.ಭಟ್ ಬಳ್ಳಮಜಲು, ಪ್ರಭಾರ ಕಾರ್ಯನಿರ್ವಹಣಾಧಿಕಾರಿ ರಾಜೇಶ್ವರಿ ಕೆ. ಉಪಸ್ಥಿತರಿದ್ದರು. ಸಭೆಯಲ್ಲಿ ಸಾಂದಿಪನಿ ವಿಷ್ಣುಭಟ್, ಮಜಿರಾಮಭಟ್,ಅರ್ಬಿ ಆನಂದಸೋಮಯಾಜಿ ಸಲಹೆಸೂಚನೆಗಳನ್ನು ನೀಡಿದರು.

By suddi9

Leave a Reply

Your email address will not be published. Required fields are marked *