ಮುಂಬಯಿ: ಚೆಂಬೂರು ಕರ್ನಾಟಕ ಸಂಘ ಸಂಚಾಲಿತ್ವದ ಲೋ (ಕಾನೂನು)ಕಾಲೇಜಿನ ನಿರ್ಮಾಣದ ಎಲ್ಲಾ ಕೆಲಸಗಳು ಮುಂದುವರಿದ್ದು, ಮುಂದಿನ ಶೈಕ್ಷಣಿಕ ಸಾಲಿನಲ್ಲಿ ಪ್ರಾರಂಭವಾಗಲಿದೆ. ಜೂನಿಯರ್ ಕಾಲೇಜಿನಲ್ಲಿ ಸಯನ್ಸ್ ಕಾಮರ್ಸ್ ವಿಭಾಗ ಪ್ರಸ್ತುತವಿದ್ದು ಮುಂದಿನ ಶೈಕ್ಷಣಿಕ ವರ್ಗದಲ್ಲಿ ಆರ್ಟ್ಸ್ ವಿಭಾಗವನ್ನು ಪ್ರಾರಂಭಿಸಲಿದ್ದೇವೆ. ಫ್ರಿ ಪ್ರೈಮರಿ, ನರ್ಸರಿ ಶಾಲಾ ಮಕ್ಕಳಿಗೆ ಪುಸ್ತಕ ಓದುವ ಸೌಕರ್ಯವುಳ್ಳ ಮಕ್ಕಳ ಲೈಬೆರಿಯನ್ನು ತೆರೆಯಲಿದ್ದು, ಸಣ್ಣ ಪ್ರಾಯದಿಂದಲೇ ಮಕ್ಕಳು ಓದುವ ಹವ್ಯಾಸವನ್ನು ರೂಪಿಸಿಕೊಳ್ಳಲಿ. ಸುಶಿಕ್ಷಿತ ಸಮಾಜ ನಿರ್ಮಾಣ ಸಂಘದ ಉದ್ದೇಶವಾಗಿದೆ ಎಂದು ಚೆಂಬೂರು ಕರ್ನಾಟಕ ಸಂಘ ಇದರ ಅಧ್ಯಕ್ಷ ನ್ಯಾಯವಾದಿ ಹೆಚ್.ಕೆ ಸುಧಾಕರ ನುಡಿದರು.

chembur-kar-sangh-61st-agm-a2

ಬೃಹನ್ಮುಂಬಯಿಯಲ್ಲಿ ಶೈಕ್ಷಣಿಕ-ಸಾಮಾಜಿಕ, ಸಾಂಸ್ಕೃತಿಕ ಸೇವೆಗಳ ಮುಖೇನ ಸುಮಾರು ಆರು ದಶಕಗಳಿಂದ ಸೇವಾ ನಿರತ ಚೆಂಬೂರು ಕರ್ನಾಟಕ ಸಂಘ ತನ್ನ 61ನೇ ವಾರ್ಷಿಕ ಮಹಾಸಭೆಯನ್ನು ಇಂದಿಲ್ಲಿ ಭಾನುವಾರ ಪೂರ್ವಾಹ್ನ ಚೆಂಬೂರು ವಿದ್ಯಾಸಾಗರ ಸಂಕೀರ್ಣದ ವಿದ್ಯಾಸಾಗರ ಸಂಕೀರ್ಣದ ಸಭಾಗೃಹದಲ್ಲಿ ಜರುಗಿಸಿದ್ದು ಸಭೆಯ ಅಧ್ಯಕ್ಷತೆಯನ್ನುದ್ದೇಶಿಸಿ ಹೆಚ್.ಕೆ ಸುಧಾಕರ ಮಾತನಾಡಿದರು.

chembur-kar-sangh-61st-agm-1

ಉಪಾಧ್ಯಕ್ಷ ಪ್ರಭಾಕರ ಬಿ.ಬೋಳಾರ್, ಜೊತೆ ಕೋಶಾಧಿಕಾರಿ ಸುಂದರ್ ಎನ್.ಕೋಟ್ಯಾನ್ ವೇದಿಕೆಯಲ್ಲಿ ಆಸೀನರಾಗಿದ್ದು, ಮಾಜಿ ಅಧ್ಯಕ್ಷ ಜಯ ಎನ್.ಶೆಟ್ಟಿ ದೀಪ ಬೆಳಗಿಸಿ ಮಹಾಸಭೆಗೆ ಚಾಲನೆಯನ್ನೀಡಿದರು.

chembur-kar-sangh-61st-agm-3

ಸಭೆಯ ಆದಿಯಲ್ಲಿ ಸರಸ್ವತಿ ದೇವಿಯನ್ನು ಆರಾಧಿಸಲಾಯಿತು. ಶಾಲಾ ವಿದ್ಯಾಥಿರ್üನಿಯರು ಪ್ರಾರ್ಥನೆಯನ್ನಾಡಿ ದರು. ಗೌರವ ಪ್ರಧಾನ ಕಾರ್ಯದರ್ಶಿ ರಂಜನ್‍ಕುಮಾರ್ ಆರ್.ಅಮೀನ್ ಸ್ವಾಗತಿಸಿ ಗತವಾರ್ಷಿಕ ಮಹಾಸಭೆಯ ವರದಿ ವಾಚಿಸಿದರು. ಗೌರವ ಖಜಾಂಚಿ ಟಿ.ಆರ್ ಶೆಟ್ಟಿ ಗತ ವಾರ್ಷಿಕ ಲೆಕ್ಕಪತ್ರಗಳನ್ನು ಮಂಡಿಸಿದರು. ನಂತರ 2016-2017ರ ಸಾಲಿನ ಅವಧಿಗೆ ಕಾರ್ಯಕಾರಿ ಸಮಿತಿಗೆ ಆರು ಸದಸ್ಯರನ್ನು ಆಯ್ಕೆಗೊಳಿಸಲಾಗಿದ್ದು, ಹೆಚ್.ಕೆ ಸುಧಾಕರ, ರಂಜನ್‍ಕುಮಾರ್ ಆರ್.ಅಮೀನ್, ಟಿ.ಆರ್ ಶೆಟ್ಟಿ, ದಯಾಸಾಗರ್ ಚೌಟ, ರಾಮ ಪೂಜಾರಿ ಮತ್ತು ಯೋಗೇಶ್ ವಿ.ಗುಜರನ್ ಅವರನ್ನು ಸಭೆಯು ಆಯ್ಕೆ ಗೊಳಿಸಿತು.

chembur-kar-sangh-61st-agm-2

ಸಭೆಯಲ್ಲಿ ಕಾರ್ಯಕಾರಿ ಸಮಿತಿ ಸದಸ್ಯರುಗಳಾದ ವಿಶ್ವನಾಥ ಎಸ್.ಶೇಣವ, ಗುಣಾಕರ್ ಹೆಚ್.ಹೆಗ್ಡೆ, ಮಧುಕರ್ ಜಿ.ಬೈಲೂರು, ಸುಧಾಕರ್ ಅಂಚನ್, ಮೋಹನ್ ಎಸ್.ಕಾಂಚನ್, ಅಶೋಕ್ ಸಾಲ್ಯಾನ್, ಜಯ ಎಂ.ಶೆಟ್ಟಿ, ಸುಧೀರ್ ಪುತ್ರನ್ ಮತ್ತು ಸಂಜೀವ ಎಸ್.ಶೆಟ್ಟಿ ಸೇರಿದಂತೆ ಅನೇಕ ಸದಸ್ಯರು ಹಾಜರಿದ್ದು, ಸಭಿಕರ ಪರವಾಗಿ ಜಯಲಕ್ಷ್ಮೀ ಹೊಳ್ಳಾ, ಮಿಲಿಂದ್ ನಾಡ ಗೌಡ, ಹಿಲ್ಡಾ ಲೋಬೊ, ಟಿ.ಆರ್ ಶೆಟ್ಟಿ, ದಯಾಸಾಗರ್ ಚೌಟ ಮತ್ತಿತರರು ಮಾತನಾಡಿ ತಮ್ಮ ಅಭಿಪ್ರಾಯಗಳನ್ನು ವ್ಯಕ್ತ ಪಡಿಸಿದರು. ಜೊತೆ ಕಾರ್ಯದರ್ಶಿ ದೇವದಾಸ ಕೆ.ಶೆಟ್ಟಿಗಾರ್ ಧನ್ಯವಾದ ಸಮರ್ಪಿಸಿದರು.

By suddi9

Leave a Reply

Your email address will not be published. Required fields are marked *