ಬಂಟ್ವಾಳ : ಪುರಸಭಾ ವ್ಯಾಪ್ತಿಯ ಪಾಣೆಮಂಗಳೂರು-ಮೆಲ್ಕಾರಿನ ಡಾ.ಸರಸ್ವತಿ ಮಹಾಬಲ ರಾವ್ ರಸ್ತೆಯ 21ನೇ ವಾರ್ಡು ನ ಮುಂದುವರಿದ ಕಾಮಗಾರಿ ಕಾಂಕ್ರೀಟ್ ರಸ್ತೆ ಮತ್ತು ಕಾಂಕ್ರೀಟ್ ಚರಂಡಿಯ ಕಾಮಗಾರಿಯನ್ನು ಪುರಸಭಾ ಅಧ್ಯಕ್ಷ ಪಿ.ರಾಮಕೃಷ್ಣ ಆಳ್ವ ರವರು ವೀಕ್ಷಿಸಿದರು.
ಪುರಸಭಾ ಸದಸ್ಯೆ ಸಂಜೀವಿನಿ, ಮಾಜಿ ಸದಸ್ಯ ದಾಮೋದರ ಮೆಲ್ಕಾರ್, ಮನೋಹರ್ ಮೆಲ್ಕಾರ್, ಗುತ್ತಿಗೆದಾರ ಇಕ್ಬಾಲ್ ಜೈನರಪೇಟೆ ಮತ್ತಿತರರು ಉಪಸ್ಥಿತರಿದ್ದರು.
