ಬಂಟ್ವಾಳ: ದ.ಕ. ಜಿಲ್ಲೆಯಲ್ಲಿ ಕೃಷಿ ಕುಂಠಿತ ಆಗುತ್ತಿದೆ. ಒಂದೆಡೆ ತೊಟಗಾರಿಕೆ ಇನೊಂದೆಡೆ ಉದ್ಯಮದ ಪ್ರವೇಶದಿಂದಾಗಿ ಬೇಸಾಯ ಅಳವಿನಂಚಿಗೆ ಬಂದಿದೆ ಎಂದು ಸಂಸದ ನಳೀನ್ ಕುಮಾರ್ ಕಟೀಲು ಹೇಳಿದರು.

btw_oct9_5

ಮುತ್ತೂರು ಅಮರಜ್ಯೋತಿ ಫ್ರೆಂಡ್ಸ್ ಸರ್ಕಲ್ ಇದರ ಆಶ್ರಯದಲ್ಲಿ ತೃತೀಯ ವರ್ಷದ ಅಮರಜ್ಯೋತಿ ಕ್ರೀಡಾಕೂಟ ಪ್ರಯುಕ್ತ ಕೆಸರ್‍ಡೊಂಜಿ ದಿನ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಅವರು ಮಾತನಾಡಿದರು. ತುಳುನಾಡಿನ ನಾಗಾರಾಧನೆ, ದೈವಾರಾಧನೆಗಳು ಕೃಷಿ ಮಿಳಿತವಾಗಿದೆ. ಇಂತಹ ಆರಾಧನೆಗಳಿಗೆ ಬೇಕಾದ ಭತ್ತದ ತೆನೆಯನ್ನು ಪಡೆಯಲು ಬೇರೆಯವರ ಗದ್ದೆಗೆ ಹೋಗುವ ಪರಿಸ್ಥಿತಿ ಸೃಷ್ಟಿಯಾಗಿದೆ. ಇಂತಹ ಕಾಲಘಟ್ಟದಲ್ಲಿ ವರ್ಷಕ್ಕೊಮ್ಮೆಯಾದರೂ ಗದ್ದೆಗಿಳಿದು ಕೆಸರಾಟ ಆಡುವ ಅವಶ್ಯಕತೆ ಇದ್ದು ಅಮರಜ್ಯೋತಿ ಫ್ರೆಂಡ್ಸ್ ಸರ್ಕಲ್ ಆಯೋಜಿಸಿದ ಕಾರ್ಯ ಶ್ಲಾಘನೀಯ ಎಂದರು.

ಪ್ರಗತಿಪರ ಕೃಷಿಕ ರಾಜೇಶ್ ನಾೈಕ್ ಉಳಿಪಾಡಿಗುತ್ತು ಮಾತನಾಡಿ ಕೆಸರುಗದೆಯಲ್ಲಿ ಕ್ರೀಡಾ ಕೂಟ ನಡೆಸುವುದು ಮಾತ್ರವಲ್ಲದೆ ಬತ್ತ ನಾಟಿಗೆ ಆದ್ಯತೆ ನೀಡುರುವುದು ಖುಷಿ ನೀಡಿದೆ. ಇದರ ಜೊತೆಗೆ ಸಾಧಕರನ್ನು ಗುರುತಿಸಿ ಸನ್ಮಾನಿಸುತ್ತಿರುವುದು ಅಭಿನಂದನೀಯ ಎಂದರು.

ವೇದಿಕೆಯಲ್ಲಿ ದ.ಕ.ಜಿ.ಪಂ. ಉಪಾದ್ಯಕ್ಷೆ ಕಸ್ತೂರಿ ಪಂಜ, ಮಾಜಿ ಸಚಿವ ಕೃಷ್ಣ ಜೆ ಪಾಲೆಮಾರ್, ಬಿಜೆಪಿ ಮಂಗಳೂರು ಉತ್ತರ ವಿಧಾನಸಭಾ ಕ್ಷೇತ್ರ ಅಧ್ಯಕ್ಷ ಡಾ. ಭರತ್ ಶೆಟ್ಟಿ, ಶುಭಲಕ್ಷ್ಮೀ ಟ್ರಾವೆಲ್ಸ್ ಮಾಲಕ ಭುವನೇಶ್ ಪಚ್ಚಿನಡ್ಕ, ಮುತ್ತೂರು ಗ್ರಾ.ಪಂ.ಅಧ್ಯಕ್ಷೆ ನಾಗಮ್ಮ, ಮಂಗಳೂರು ತಾ.ಪಂ.ಸದಸ್ಯ ನಾಗೇಶ್ ಶೆಟ್ಟಿ, ಕೃಷ್ಣರಾಜ ಮಾರ್ಲ ಮುತ್ತೂರು, ಪುರಸಭಾ ಸದಸ್ಯರಾದ ಗೋವಿಂದ ಪ್ರಭು, ದೇವದಾಸ ಶೆಟ್ಟಿ, ಉದಯ ಕುಮಾರ್ ರಾವ್, ಜಿ.ಆನಂದ, ಮತ್ತಿತರರು ಹಾಜರಿದ್ದರು. ಅಮರ ಜ್ಯೋತಿ ಫ್ರೆಂಡ್ ಕ್ಲಬ್‍ನ ಸಂಚಾಲಕ ಪವನ್‍ಕುಮಾರ್ ಶೆಟ್ಟಿ, ಪದಾಧಿಕಾರಿಗಳಾದ ನಿತ್ಯಾನಂದ ಕೆ, ಸುಧೀರ್ ಕುಲಾಲ್, ಪುಷ್ಪರಾಜ ಶೆಟ್ಟಿ ದೋಣಿಕರಿಯ ಮತ್ತಿತರರು ಸಹಕರಿಸಿದರು. ಕೆಸರುಗದ್ದೆಯಲ್ಲಿ ವಿವಿಧ ಕ್ರೀಡಾಕೂಟಗಳು ನಡೆದವು. ಮಕ್ಕಳು, ಮಹಿಳೆಯರು ಆಟೋಟಗಳಲ್ಲಿ ಉತ್ಸಹದಿಂದ ಪಾಲ್ಗೊಂಡರು. ವಿವಿಧ ಕ್ಷೇತ್ರಗಳ ಸಾಧಕರನ್ನು ಗೌರವಿಸಲಾಯಿತು.

By suddi9

Leave a Reply

Your email address will not be published. Required fields are marked *