ಬಂಟ್ವಾಳ: ಸಾಮಾಜಿಕ ಜಾಲತಾಣಗಳಲ್ಲಿ ಹಿಂದೂಗಳ ಪವಿತ್ರ ಕಟೀಲು ಕ್ಷೇತ್ರ ಸಹಿತ ವಿವಿಧ ದೇವರನ್ನು ಅವಹೇಳನಕಾರಿಯಾಗಿ ಚಿತ್ರಿಸಿ ವಿಡಂಬಣೆಗೊಳಿಸಿದ ಆರೋಪಿಗಳನ್ನು ಶೀಘ್ರವೇ ಬಂಧಿಸಬೇಕು ಎಂದು ಆಗ್ರಹಿಸಿ ಇಲ್ಲಿನ ಕೊಯಿಲ ಶ್ರೀ ಮಹಾಗಣಪತಿ ದೇವಸ್ಥಾನ ಬಳಿಯಿಂದ ಸಂಗಬೆಟ್ಟು ಶ್ರೀ ವೀರಭದ್ರ ದೇವಸ್ಥಾನ ತನಕ ವಿವಿಧ ಭಜನಾ ತಂಡಗಳು ಭಾನುವಾರ ಧರ್ಮಜಾಗೃತಿಗೆ ಕಾಲ್ನಡಿಗೆ ಭಜನಾ ಜಾಥಾ ನಡೆಸಿ ಗಮನ ಸೆಳೆದರು.17btl-bhajane

ಮಹಾಗಣಪತಿ ದೇವಸ್ಥಾನ ಆಡಳಿತ ಮೊಕ್ತೇಸರ ಎಂ.ಪದ್ಮರಾಜ ಬಲ್ಲಾಳ್ ಅವರು ಭಜನಾ ತಂಡಗಳ ಕಾಲ್ನಡಿಗೆ ಜಾಥಾಕ್ಕೆ ಚಾಲನೆ ನೀಡಿದರು. ಒಟ್ಟು 8 ಕಿ.ಮಿ ಉದ್ದದ ರಸ್ತೆಯುದ್ದಕ್ಕೂ ತಾಲ್ಲೂಕಿನ ಒಟ್ಟು 17 ಸಮವಸ್ತ್ರಧಾರಿ ಭಜನಾ ತಂಡಗಳು ಮತ್ತು ಸುಮಾರು 400ಕ್ಕೂ ಮಂದಿ ಭಕ್ತರು ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದರು.

ಸಂಗಬೆಟ್ಟುವಿನಲ್ಲಿ ನಡೆದ ಧಾರ್ಮಿಕ ಸಭೆಯಲ್ಲಿ ಕರಿಂಜೆ ಕ್ಷೇತ್ರದ ಮುಕ್ತಾನಂದ ಸ್ವಾಮೀಜಿ ಆಶೀರ್ವಚನ ನೀಡಿದರು.  ಎಬಿವಿಪಿ ಕಾರ್ಯಕರ್ತ ಚೈತ್ರಾ ಕುಂದಾಪುರ ಧಾರ್ಮಿಕ ಉಪನ್ಯಾಸ ನೀಡಿ, ಪ್ರಸಕ್ತ ಭಜನಾ ಮಂಡಳಿಗಳು ಬಾಲ್ಯದಲ್ಲಿ ನಮಗೆ ಅತ್ಯುತ್ತಮ ವಿಶ್ವವಿದ್ಯಾನಿಲಯವಾಗಿದೆ ಎಂದು.

ಪ್ರಮುಖರಾದ ಜಗದೀಶ  ಕೊಯಿಲ , ಸಂತೋಷ್ ಕುಮಾರ್ ಬೆಟ್ಟು ಮತ್ತಿತರರು ಇದ್ದರು. ಸುಂದರ ಶೆಟ್ಟಿಗಾರ್ ಸಂಗಬೆಟ್ಟು ಸ್ವಾಗತಿಸಿ, ಗಣೇಶ್ ರಾಯಿ ಪ್ರಾಸ್ತಾವಿಕ ಮಾತನಾಡಿದರು. ದಯಾನಂದ ಉಪ್ಪಿರ ವಂದಿಸಿದರು. ದಿನೇಶ್ ಸುವರ್ಣ ರಾಯಿ ಕಾರ್ಯಕ್ರಮ ನಿರೂಪಿಸಿದರು.

By suddi9

Leave a Reply

Your email address will not be published. Required fields are marked *