ಬಂಟ್ವಾಳ: ಪರ್ಯಾಯ ಪೇಜಾವರ ಮಠಾಧೀಶ ಶ್ರೀ ವಿಶ್ವೇಶ್ವರ ತೀರ್ಥ ಸ್ವಾಮೀಜಿ ಕಳೆದ 1967ರಲ್ಲಿ ಅಸ್ಪೃಶ್ಯತೆ ನಿವಾರಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ. ಸ್ವತಃ ಪರಿಶಿಷ್ಟ ಕೇರಿಗೆ ತೆರಳಿ ಅವರಿಗೆ ಮಂತ್ರ ದೀಕ್ಷೆ ನೀಡುವ ಕ್ರಾಂತಿಕಾರಿ ಹೆಜ್ಜೆ ಇಟ್ಟಿದ್ದಾರೆ.

17btl-sulochana-bhat

ಇದೀಗ ಪ್ರಗತಿಪರರು ಎಂದು ಕರೆಸಿಕೊಳ್ಳುವವರು ಎಲ್ಲಾ ಧರ್ಮೀಯರಿಂದಲೂ ಅಭಿಮಾನಿಗಳನ್ನು ಹೊಂದಿರುವ ಹಿರಿಯ ಮಠಾಧೀಶ ಪೇಜಾವರಶ್ರೀ ವಿರುದ್ಧ ಹೇಳಿಕೆ ನೀಡಿರುವುದನ್ನು ರಾಜ್ಯ ಬಿಜೆಪಿ ವಕ್ತಾರೆ ಸುಲೋಚನ ಜಿ.ಕೆ.ಭಟ್ ತೀವ್ರವಾಗಿ ಖಂಡಿಸಿದ್ದಾರೆ. ಇನ್ನೊಂದೆಡೆ ರಾಮ-ಕೃಷ್ಣರು ಮಾಂಸಹಾರಿಗಳು ಹೇಳಿಕೆ ನೀಡುವುದರ ಜೊತೆಗೆ ಉಡುಪಿ ಮಠಕ್ಕೆ ಮುತ್ತಿಗೆ ಹಾಕುವುದಾಗಿ ಬೆದರಿಸುವ ಮೂಲಕ ಹಿಂದೂಗಳ ಧಾರ್ಮಿಕತೆಗೆ ಘಾಸಿಗೊಳಿಸುತ್ತಿರುವವರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಅವರು ಆಗ್ರಹಿಸಿದ್ದಾರೆ.

By suddi9

Leave a Reply

Your email address will not be published. Required fields are marked *