ಪೊಳಲಿ: ರಾಮಕೃಷ್ಣ ತಪೋವನ ಆಶ್ರಮದಲ್ಲಿ ಶ್ರೀ ಪತಂಜಲಿ ಯೋಗ ಶಿಕ್ಷಣ ಸಮಿತಿ ವತಿಯಿಂದ ಜರಗುವ ಉಚಿತ ಯೋಗ ಶಿಕ್ಷಣ ತರಬೇತಿ ಕಾರ್ಯಕ್ರಮದಲ್ಲಿ ನ.11ರಂದು ತರಬೇತುದಾರರಾಗಿ ಆಗಮಿಸಿದ ಜ್ಞಾನೇಶ್ವರ್ ನಾಯಕ್ ಶಿಬಿರಾರ್ಥಿಗಳಿಗೆ ನಿತ್ಯ ಜೀವನ ಪದ್ದತಿ ಹಾಗೂ ಆಯುರ್ವೇದಿಕ ಶಾಸ್ತ್ರದ ಬಗ್ಗೆ ಮಾಹಿತಿ ನೀಡಿದರು.
ಯೋಗ ಶಿಕ್ಷಣವು ಮಾನಸಿಕ ಹಾಗೂ ದೈಹಿಕ ಆರೋಗ್ಯವನ್ನು ಅತ್ಯಂತ ಸಮಂಜಸವಾದ ಕ್ರಮದಲ್ಲಿ ಇಡುವಲ್ಲಿ ಸೂಕ್ತ ಮಾರ್ಗದರ್ಶಿಯಾಗಿದೆ. ಇದರಿಂದ ನಮ್ಮ ಅಮೂಲ್ಯ ವೇಳೆ, ಹಣ, ಹಾಗೂ ಆರೋಗ್ಯವನ್ನು ಕಾಪಾಡಿಕೊಳ್ಳಲು ಯೋಗಾಭ್ಯಾಸ ಒಂದೇ ಸಾಧನವಾಗಿದೆ ಎಂದು ಹೇಳಿದರು.

ಈ ಸಂದರ್ಭ ಯೋಗ ಶಿಕ್ಷಕ ಕೇಶವ್ ಯೋಗ ಶಿಕ್ಷಣ ತರಬೇತಿಯಲ್ಲಿ ಪಾಲ್ಗೊಂಡ 130 ಯೋಗ ಬಂಧುಗಳಿಗೆ ಯೋಗಾಸನ ಮಾಡಿ ತಿಳಿಸಿದರು.

