ಮಂಡ್ಯ: ಮಾಜಿ ಸಂಸದೆ ಹಾಗೂ ನಟಿ ರಮ್ಯಾ ಮಂಡ್ಯಕ್ಕೆ ಭೇಟಿ ನಿಡಿದ್ದು, ಈ ವೇಳೆ ಯುವಕನೊಬ್ಬನು ಆಕ್ರೋಶ ವ್ಯಕ್ತಪಡಿಸಿದ್ದಾನೆ. ಆಟೋ ಮೂಲಕ ಮಂಡ್ಯದ ಮಾರುಕಟ್ಟೆಗೆ ಭೇಟಿ ನೀಡಿ ಪರೀಶೀಲನೆ ನಡೆಸಿದ್ರು. ಈ ವೇಳೆ ಅಲ್ಲಿನ ಕೆಲ ವರ್ತಕರು ರಮ್ಯಾ ಆಗಮಿಸಿದ್ದಕ್ಕೆ ಆಕ್ಷೇಪ ವ್ಯಕ್ತಪಡಿಸಿ ಮೋದಿ ಪರ ಜೈಕಾರ ಕೂಗೋ ಮೂಲಕ ಕೆರಳಿಸಿದ್ರು.

ramya

ಅಲ್ಲದೆ ಕಾವೇರಿ ಹೋರಾಟದಲ್ಲಿ ಮಂಡ್ಯಕ್ಕೆ ಬರದ ರಮ್ಯಾ ಬಗ್ಗೆ ಆಕ್ರೋಶ ಮಾತನಾಡಿದ್ರು. ಈ ವೇಳೆ ಕೆರಳಿದ ರಮ್ಯಾ ಅಲ್ಲಿದ್ದವರಿಗೆ ಸುಪ್ರೀಂಕೋರ್ಟ್ ನಲ್ಲಿ ನಿಮ್ಮ ತಾತ ನಿಂತಿದ್ದನಾ ಅಂತೇಳಿ ಮತ್ತೆ ಜನರ ಆಕ್ರೋಶ ಕೆರಳಿಸಿದ್ರು. ಇದಕ್ಕೆ ಯುವಕ ಹೌದು, ನಮ್ಮ ತಾತ ಮಾದೇ ಗೌಡ್ರು ನಿಂತಿದ್ರು ಎಂದು ರಮ್ಯಾ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದು ಮಾತಿನ ವಾಗ್ವಾದಕ್ಕೆ ಕಾರಣವಾಯ್ತು. ನಂತ್ರ ರಮ್ಯ ಆಟೋದಲ್ಲಿ ಹೊರಡುತ್ತಿದ್ದಂತೆ ರಮ್ಯಾ ಗೆ ಧಿಕ್ಕಾರ ಕೂಗಿ ಜನರು ಆಕ್ರೋಶ ವ್ಯಕ್ತಪಡಿಸಿದರು.ಕಾವೇರಿ ಹೋರಾಟದ ಸಂದರ್ಭದಲ್ಲಿ ಯಾಕೆ ಬರಲಿಲ್ಲ ಎಂದಿಲ್ಲ ಪ್ರಶ್ನೆಗಳನ್ನು ಹಾಕುವ ಮೂಲಕ ಮಂಡ್ಯ ಜನತೆ ರಮ್ಯಾ ವಿರುದ್ಧ ಕಿಡಿಕಾರಿದ್ದಾರೆ.

By suddi9

Leave a Reply

Your email address will not be published. Required fields are marked *