ಸುದ್ದಿ9 ಕೈಕಂಬ: ಅಡ್ಡೂರು 2ನೇ ವಾರ್ಡ್ ನ ನಾಗರೀಕರ ವಾರ್ಡ್  ಸಭೆಗಳ ಮಹತ್ವದ ಕಾರ್ಯಗಾರವು  ಅಡ್ಡೂರು ಹಿರಿಯ ಪ್ರಾಥಮಿಕ ಶಾಲಾ ಸಭಾಭವನದಲ್ಲಿ ಇತ್ತಿಚೇಗೆ ನಡಯಿತು. ಸಭೆಯ ಅಧ್ಯಕ್ಷತೆಯನ್ನು ದಿಶಾ ಸಂಸ್ಥೆಯ ನಿರ್ಧೇಶಕರಾದ ಸಿಲ್ವಿಸ್ಟರ್ ಡಿ ಸೋಜಾ ವಹಿಸಿದ್ದರು.ಗುರುಪುರ ಪಂಚಾಯತ್ ಅಧ್ಯಕ್ಷೆ  ಪದ್ಮಿನಿ ಎಸ್ ಅಂಚನ್ ದೀಪ ಬೆಳಗಿಸಿ ಉದ್ಗಾಟಿಸಿದರು.   ಗ್ರಾಮ ಪಂಚಾಯತ್ ಆಡಳಿತದಲ್ಲಿ ವಾರ್ಡ್  ಸಭೆಗಳ ಮಹತ್ವವನ್ನು ವಿವರಿಸಿದ ಅವರು ಸಮಸ್ಯೆಗಳೊಂದಿಗೆ ಜನರ ಜವಾಬ್ದಾರಿಗಳನ್ನು  ತಿಳಿದುಕೊಂಡು ಕಾರ್ಯ ನಿರ್ವಹಿಸಬೇಕು
ಮುಖ್ಯವಾಗಿ ಗ್ರಾಮದ ಸ್ವಚ್ಚತೆ , ಮಳೆ ನೀರು ಹರಿಯುವ ತೋಡುಗಳ ಸಮಸ್ಯೆ , ಸಾರ್ವಜನಿಕ ದೀಪದ ಸಮಸ್ಯೆ ಬಗ್ಗೆ ವಿಚಾರ ವಿನಿಮಯ ನಡೆದು , ದೀಪದ ವ್ಯವಸ್ಥೆಯ ಜವಾಬ್ದಾರಿಯನ್ನು ನಿರ್ವಹಿಸುತ್ತಿರುವವರಿಗೆ  ಅಧ್ಯಕ್ಷರು  ತಿಳಿಸಿದರು.ಪಂಚಾಯತ್ ಸದಸ್ಯರಾದ ಯಶವಂತ್ .ವಿ.ಶೆಟ್ಟಿಯವರು ಮಾತನಾಡಿ ಜನರೊಂದಿಗೆ ಸ್ಪಂದಿಸಿ  ಸೂಕ್ತ ರೀತಿಯಲ್ಲಿ ನಿರ್ವಹಣೆ ಮಾಡಲು ಸೂಚಿಸಿದರು. ಗೇಟ್ ಹೌಸ್ನಿಂದ ಕೆಳಗಿನಕೆರೆ ರಸ್ತೆ ಕಾಂಕ್ರಿಟೀಕರಣ ಮಾಡಲು 5 ಲಕ್ಷ ರೂಪಾಯಿ ಮಂಜೂರಾದ ಬಗ್ಗೆ ತಿಳಿಸಿ ಆದಷ್ಟು ಬೇಗ ಈ ಕಾಮಗಾರಿ ನಡೆಯುವ ಬಗ್ಗೆ ತಿಳಿಸಿದರು. ಮನೆ ನಿವೇಶನ ಇಲ್ಲದವರು ಸಭೆಯಲ್ಲಿ ಹಾಜರಿದ್ದು ಅವರ ವಿನಂತಿ ಮೇರೆಗೆ ಪಂಚಾಯತ್ ವ್ಯಾಪ್ತಿಯಲ್ಲಿ ನಿವೇಶನ ಇದ್ದರೆ ಕೊಡುವ ಪ್ರಯತ್ನ ಪಂಚಾಯತ್ ವತಿಯಿಂದ ಮಾಡುವುದಾಗಿ ತಿಳಿಸಿದರು.

1 vp   karyagara sabe

IMG_8452
ಅಧ್ಯಕ್ಷತೆ ವಹಿಸಿದ ದಿಶಾ ಸಂಸ್ಥೆಯ ನಿದರ್ೇಶಕರಾದ ಸಿಲ್ವಿಸ್ಟರ್ ಡಿ ಸೋಜಾರವರರು ಇಂತಹ ಸಭೆಗಳು ನಾಗರೀಕರನ್ನು ವಾಡರ್್ ಸಭೆಗಳಲ್ಲಿ ಮತ್ತು ಗ್ರಾಮ ಸಭೆಗಳಲ್ಲಿ ಸಕ್ರೀಯವಾಗಿ ಭಾಗವಹಿಸಲು ಪ್ರೇರಣೆ ಆಗಬೇಕು. ಇಂದಿನ ಸಭೆಯಲ್ಲಿ ಹಾಜರಿದ್ದ ಎಲ್ಲರೂ ಅವರ ಸಮಸ್ಯೆಗಳನ್ನು ಹೇಳಿ ಪಂಚಾಯತ್ ನೊಂದಿಗೆ ತೊಡಗಿಸಿಕೊಂಡು ಮುಂದಿನ ದಿನಗಳಲ್ಲಿ ಈ ವಾಡರ್ಿನ ಎಲ್ಲಾ ಸಮಸ್ಯೆಗಳು ಗುರುಪುರ ಗ್ರಾಮ ಪಂಚಾಯತ್ ಗ್ರಾಮ ಸಭೆಗೆ ಬಂದು ಹಂತ ಹಂತವಾಗಿ ಹಣ ಕ್ರೋಢಿಕರಿಸಿ ಜಿಲ್ಲಾ ಪಂಚಾಯತ್ ನಿಂದ , ಶಾಸಕ ಹಾಗೂ ಸಂಸದರಿಂದ  ಬರುವ   ಹಣವನ್ನು    ಉಪಯೋಗ ಪಡೆದುಕೊಂಡು ಗುರುಪುರ ಪಂಚಾಯತ್ನ 2ನೇ ವಾರ್ಡ್  ಒಂದು ಮಾದರಿ ವಾರ್ಡ್ ಆಗಲಿ  ಆ ನಿಟ್ಟಿನಲ್ಲಿ ದಿಶಾ ಸಂಸ್ಥೆ ಮಾಡುವ ಜನಜಾಗ್ರತಿ ಕಾರ್ಯಕ್ರಮದಲ್ಲಿ ನಾಗರಿಕರು ಸಕ್ರೀಯವಾಗಿ ಭಾಗವಹಿಸಬೇಕಾಗಿ ವಿನಂತಿಸಿದರು. ಈ ಸಭೆಯಲ್ಲಿ ಪಂಚಾಯತ್ ಅಧ್ಯಕ್ಷರು ಮತ್ತು ಸದಸ್ಯರು ಭಾಗವಹಿಸಿ ಜನರಿಗೆ ಸೂಕ್ತ ಮಾರ್ಗದರ್ಶನ ನೀಡಿದ ಬಗ್ಗೆ ಸಿಲ್ವಿಸ್ಟರ್ ಡಿ ಸೋಜಾರವರು  ಅವರಿಗೆ ಅಭಿನಂದನೆ ಸಲ್ಲಿಸಿದರು .ನಂತರ 2 ನೇ ವಾರ್ಡ್  ಅಧ್ಯಯನದ ವರದಿಯನ್ನು ಅಡ್ಡೂರು ನೇಸರ ಗ್ರಾಮ ಕಮಿಟಿಯ ಸದಸ್ಯರಾದ ಸಾಹೀರಬಾನು ಸಭೆಯಲ್ಲಿ ಮಂಡಿಸಿದರು. ವರದಿಯಲ್ಲಿ ತಿಳಿಸಿದ ಸಾರ್ವಜನಿಕ ಹಾಗೂ ವೈಯಕ್ತಿಕ ಸಮಸ್ಯೆಗಳ ಬಗ್ಗೆ ಸಭೆಯಲ್ಲಿ ಸುದೀಘ ಚರ್ಚೆ ನಡೆಯಿತು. ವೇದಿಕೆಯಲ್ಲಿ ಮುಖ್ಯ ಅತಿಥಿಯಾಗಿ ಗುರುಪುರ ಗ್ರಾಮ ಪಂಚಾಯತ್ನ ಸದಸ್ಯರಾದ ಯಶವಂತ್ .ವಿ.ಶೆಟ್ಟಿ ಉಪಸ್ಥಿತರಿದ್ದರು  .ಅಡ್ಡೂರು ನೇಸರ ಗ್ರಾಮ ಸಮಿತಿಯ ಕಾರ್ಯದರ್ಶಿ ಜಯಲಕ್ಷ್ಮಿ ಹಾಗೂ ಆಳ್ವಾಸ್ ಕಾಲೇಜಿನ ಎಮ್ ಎಸ್ ಡಬ್ಲ್ಯೊ  ವಿದ್ಯಾರ್ಥಿನಿಗಳಾದ ರೇಷ್ಮ, ಸುರಥ ಉಪಸ್ಥಿತರಿದ್ದರು., ಸುಮನ ಸ್ವಾಗತಿಸಿ, ದಿಶಾ ಸಂಸ್ಥೆಯ ಕಾರ್ಯಕರ್ತೆ  ಹರಿಣಿ  ಕಾರ್ಯಕ್ರಮ ನಿರೂಪಿಸಿದರು.

 

By suddi9

Leave a Reply

Your email address will not be published. Required fields are marked *