ಮೂಡುಬಿದಿರೆ: ಕಡಂದಲೆ ಶ್ರೀ ಸುಬ್ರಹ್ಮಣ್ಯ ಸ್ವಾಮಿ ಪ್ರೌಢ ಶಾಲೆ ಹಾಗು ಹಳೆ ವಿದ್ಯಾರ್ಥೀ ಸಂಘದ ವಾರ್ಷಿಕೋತ್ಸವ ಕಾರ್ಯಕ್ರಮವು ಶಾಲಾ ಸಭಾಂಗಣದಲ್ಲಿ ನಡೆಯಿತು.
ಶಾಲಾ ಸಂಚಾಲಕ ಸುದರ್ಶನ ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು. ಮುಂಡ್ಕೂರು ವಿದ್ಯಾವರ್ದಕ ಪದವಿಪೂರ್ವ ಕಾಲೇಜಿನ ಉಪನ್ಯಾಸಕ ಪ್ರಕಾಶ್ ನಾಯ್ಕ್ ಮಾತನಾಡಿ ಶಕ್ಷಕರು ಮತ್ತು ಪೋಷಕರು ಮಕ್ಕಳಿಗೆ ಸಂಸ್ಕಾರ ಮತ್ತು ಸಂಸ್ಕøತಿಯನ್ನು ಕಲಿಸಿ ಕೊಡುವ ಮೂಲಕ ಅವರನ್ನು ಉತ್ತಮ ಪ್ರಜೆಯನ್ನಾಗಿ ರೂಪಿಸಿದರೆ ಒಂದು ಸದೃಡ ಸಮಾಜ ನಿಮಾರ್ಣವಾಗಲು ಸಾದ್ಯ ಎಂದರು.

ಈ ಸಂದರ್ಭದಲ್ಲಿ ಹಳೆ ವಿದ್ಯಾರ್ಥಿಗಳಿಂದ ನಡೆದ ಗುರು ವಂದನ ಕಾರ್ಯಕ್ರಮದಲ್ಲಿ ಶಾಲೆಯ ನಿವೃತ್ತ ಶಿಕ್ಷಕರಾದ ಗಾಯತ್ರಿ ಉಡುಪ, ಸದಾಶಿವ ರೈ, ವಾದಿರಾಜ ಮಡ್ಮ್ಣಾಯ, ನಿವೃತ್ತ ಗುಮಾಸ್ತ ನಾರಾಯಣ ಮಡಿವಾಳ, ಇಲ್ಲಿ ಶಿಕ್ಷಕರಾಗಿ ಸೇವೆ ಸಲ್ಲಿಸಿ ವರ್ಗಾವಣೆಗೊಂಡ ರಾಮಕೃಷ್ಣ ಭಟ್ ಇವರುಗಳನ್ನು ಗೌರವಿಸಿ ಸನ್ಮಾನಿಸಲಾಯಿತು, ಗಿರೀಶ್ ಸನ್ಮಾನಿತರನ್ನು ಪರಿಚಯಿಸಿದರು.
ದ.ಕ ಜಿಲ್ಲಾ ಪಂಚಾಯಿತಿ ಸದಸ್ಯ ಸುಚರಿತ ಶೆಟ್ಟಿ, ಉದ್ಯಮಿ ಸತೀಶ್ ಪ್ರಭು ಮಿತ್ತಬೈಲು, ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷ ಸುರೇಂದ್ರ ಭಟ್, ನಿವೃತ್ತ ಹಿರಿಯ ಶಿಕ್ಷಕ ಜಯಶೀಲ ಭಟ್, ನಾರಾಯಣ ಭಟ್, ಶಾಲಾ ನಾಯಕ ಸುಕೇಶ್,ಶಾಲಾ ಶಿಕ್ಷಕರು ಶಿಕ್ಷಕಿಯರು ಶಿಕ್ಷೇತರರು ಮತ್ತಿತರರು ಉಪಸ್ಥಿತರಿದ್ದರು
ಶಾಲಾ ಮುಖ್ಯ ಶಿಕ್ಷಕ ಸುಧಾಕರ್ ಬಿ ಸ್ವಾಗತಿಸಿದರು,ಶಿಕ್ಷಕ ದಿನಕರ ಕುಂಭಾಸಿ ಮತ್ತು