ಬಂಟ್ವಾಳ:ಇಲ್ಲಿನ ಸಿದ್ಧಕಟ್ಟೆ ಗುಣಶ್ರೀ ವಿದ್ಯಾಲಯ ವತಿಯಿಂದ ವಾರ್ಷಿಕ ಕ್ರೀಡಾಕೂಟವು ಸ್ಥಳೀಯ ಮಂಚಕಲ್ಲು ಸಮೀಪದ ಎಣ್ಮಾಜೆ ಮೈದಾನದಲ್ಲಿ ಇದೇ 22ರಂದು ಬೆಳಿಗ್ಗೆ 9 ಗಂಟೆ ಯಿಂದ ನಡೆಯಲಿದೆ.
ಮಂಗಳೂರು ಮನ್ದೇವ್ ಎಜ್ಯುಕೇಶನಲ್ ಮತ್ತು ಚಾರಿಟೇಬಲ್ ಟ್ರಸ್ಟಿನ ಅಧ್ಯಕ್ಷ , ಮಾಜಿ ಸಚಿವ ಬಿ.ನಾಗರಾಜ ಶೆಟ್ಟಿ ಅಧ್ಯಕ್ಷತೆಯಲ್ಲಿ ನಡೆಯುವ ಕೀಡಾಕೂಟವನ್ನು ಸಿದ್ಧಕಟ್ಟೆ ವಲಯ ಬಂಟರ ಸಂಘದ ಅಧ್ಯಕ್ಷ ಗೋಪಿನಾಥ ರೈ ರಾಯಿ ಇವರು ಉದ್ಘಾಟಿಸುವರು. ಕುಕ್ಕಿಪಾಡಿ ಗ್ರಾಮ ಪಂಚಾಯಿತಿ ಅಧ್ಯಕ್ಷ ದಿನೇಶ ಸುಂದರ ಶಾಂತಿ, ಸಮೂಹ ಸಂಪನ್ಮೂಲ ವ್ಯಕ್ತಿ ಚಿನ್ನಸ್ವಾಮಿ ಶೆಟ್ಟಿ, ಎಂಜಿನಿಯರ್ ಎಸ್.ವಿ.ನಾಯಕ್ ಮತ್ತಿತರ ಗಣ್ಯರು ಭಾಗವಹಿಸುವರು ಎಂದು ಶಾಲೆ ಸಂಚಾಲಕ ವಿಜಯ ಕುಮಾರ್ ಚೌಟ ತಿಳಿಸಿದ್ದಾರೆ.