ಬಂಟ್ವಾಳ; ಸಜಿಪಮೂಡ ಗ್ರಾಮಸಭೆಯಲ್ಲಿ ಅಯ್ಯಪ್ಪ ವೃತಧಾರಿ ಯನ್ನು ಅವಾಚ್ಯವಾಗಿ ನಿಂದಿಸಿದ ತಾ.ಪಂ.ಸದಸ್ಯ ಸಂಜೀವ ಪೂಜಾರಿ ವಿರುದ್ದ ಗ್ರಾಮಸ್ಥರು ಗ್ರಾ.ಪಂ. ಕಛೇರಿ ಮುಂದೆಯೇ ಪ್ರತಿಭಟನೆ ನಡೆಸಿದ ಘಟನೆ ಮಂಗಳವಾರ ಸಂಜೆ ನಡೆಯಿತು.
ಮಂಗಳವಾರ ಸಜಿಪಮೂಡ ಗ್ರಾಮದ ಗ್ರಾಮಸಭೆ ನಡೆದಿದ್ದು ಸ್ಥಳೀಯ ಸ್ಮಶಾನದ ವಿಚಾರಕ್ಕೆ ಸಂಬಂಧಿಸಿ, ಸ್ಥಳೀಯ ನಿವಾಸಿ ಅಯ್ಯಪ್ಪ ವೃತಧಾರಿ ಸತೀಶ್ ಪೂಜಾರಿಯವರು ಪ್ರಸ್ತಾವಿಸಿದಾಗ ತಾ.ಪಂ. ಸದಸ್ಯ ಸಂಜೀವ ಪೂಜಾರಿಯವರು ವೇದಿಕೆಯಲ್ಲಿ ಎದ್ದುನಿಂತು ಆಕ್ಷೇಪ ವ್ಯಕ್ತಪಡಿಸಿದಾಗ ಇವರೊಳಗೆ ಮಾತಿನ ಚಕಮಕಿ ನಡೆಯಿತೆನ್ನಲಾಗಿದೆ. ಈ ಹಂತದಲ್ಲಿ ಅವರು ಅಯ್ಯಪ್ಪ ವೃತಧಾರಿ ಸತೀಶ್ ಪೂಜಾರಿಯವರನ್ನು ಅವಾಚ್ಯವಾಗಿ ನಿಂದಿಸಿ, ಸಭೆಯಿಂದ ಹೊರನಡೆಯುವಂತೆ ಸೂಚಿಸಿದ್ದಾರೆ ಎಂದು ಸತೀಶ್ ಪೂಜಾರಿಯವರು ಬಂಟ್ವಾಳ ನಗರ ಠಾಣೆಗೆ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ.

2

3
ಸಂಜೀವ ಪೂಜಾರಿಯವರ ಈ ನಡವಳಿಕೆ ತನ್ನ ವಾಕ್ ಸ್ವಾತಂತ್ರ್ಯದ ಹಕ್ಕನ್ನು ಮೊಟಕುಗೊಳಿಸಿದೆ ಮಾತ್ರವಲ್ಲದೆ, ಸಭೆಯಿಂದ ಹೊರ ಹೋಗುವ ವೇಳೆ ಜೀವಬೆದರಿಕೆ ಒಡ್ಡಿದ್ದಾರೆ ಎಂದು ಅವರು ದೂರಿನಲ್ಲಿ ವಿವರಿಸಿದ್ದಾರೆ.
ತಕ್ಷಣ ಗ್ರಾಮಸ್ಥರು ಗ್ರಾಮಸಭೆಯಲ್ಲಿ ಪ್ರತಿಭಟನೆ ಆರಂಭಿಸಿದ ಹಿನ್ನೆಲೆಯಲ್ಲಿ ಗ್ರಾಮಸಭೆ ಮೊಟಕುಗೊಂಡಿದ್ದು, ಪ್ರತಿಭಟನಾಕಾರರು ಅವಾಚ್ಯವಾಗಿ ನಿಂದಿಸಿದ ಸಂಜೀವ ಪೂಜಾರಿಯವರು ಕ್ಷಮೆಕೋರಬೇಕು, ಇಲ್ಲವೇ ರಾಜೀನಾಮೆ ನೀಡಬೇಕು ಎಂದು ಪಟ್ಟು ಹಿಡಿದು ಕುಳಿತರು.ಮಾಜಿ ತಾ.ಪಂ. ಅಧ್ಯಕ್ಷ ಯಶವಂತ ಡಿ, ಯುವಮೋರ್ಚಾ ಅಧ್ಯಕ್ಷ ವಜ್ರನಾಥ ಕಲ್ಲಡ್ಕ, ಬಿಜೆಪಿ ಕ್ಷೇತ್ರ ಸಮಿತಿ ಪ್ರಧಾನ ಕಾರ್ಯದರ್ಶಿ ರಾಮದಾಸ್ ಬಂಟ್ವಾಳ ಪ್ರತಿಭಟನೆಗೆ ಸಾಥ್ ನೀಡಿದರು. ಪ್ರತಿಭಟನೆಯ ಸುದ್ದಿ ತಿಳಿದ ಬಂಟ್ವಾಳ ನಗರ ಪೊಲೀಸರು ಪ್ರತಿಭಟನಾಕಾರರ ಮನವೊಲಿಸಲು ಯತ್ನಿಸಿದ್ದು, ಸಂಜೀವ ಪೂಜಾರಿಯವರನ್ನು ಸಂಪರ್ಕಿಸಲು ಪ್ರಯತ್ನಿಸಿದರೂ ಅವರು ಕರೆಗೆ ಸ್ಪಂದಿಸಲಿಲ್ಲ ಎಂದು ತಿಳಿದು ಬಂದಿದೆ. ಕೊನೆಗೆ ಪ್ರತಿಭಟನಾಕಾರರು ಗ್ರಾ,ಪಂ.ಅಧ್ಯಕ್ಷ ಗಣಪತಿ ಭಟ್ ಹಾಗೂ ಪಿಡಿಓ ರವರಿಗೂ ಈ ಬಗ್ಗೆ ದೂರು ನೀಡಿದ್ದು, ಬಂಟ್ವಾಳ ನಗರ ಠಾಣೆಯ ಮೆಟ್ಟಿಲೇರಿದ್ದಾರೆ.

By suddi9

Leave a Reply

Your email address will not be published. Required fields are marked *