ಬಂಟ್ವಾಳ: ಇಲ್ಲಿನ ಜೆಸಿಐಯ ನೂತನ ಅಧ್ಯಕ್ಷರಾಗಿ ಡಾ. ಬಾಲಕೃಷ್ಣ ಆಯ್ಕೆಯಾಗಿದ್ದಾರೆ. ಇತ್ತೀಚೆಗೆ ನಡೆದ ಸಭೆಯಲ್ಲಿ ಈ ಆಯ್ಕೆ ನಡೆದಿದೆ. ಕಾರ್ಯದರ್ಶಿಯಾಗಿ ಉದ್ಯಮಿ ಸದಾನಂದ ಬಂಗೇರ, ಕೋಶಾಧೀಕಾರಿಯಾಗಿ ಉಪನ್ಯಾಸಕ ಚೇತನ್ ಮುಂಡಾಜೆ ಆಯ್ಕೆಯಾದರು. ವಿವಿಧ ವಿಭಾಗಗಳ ಉಪಾಧ್ಯಕ್ಷರಾಗಿ ರಾಜೇಂದ್ರ, ದಯಾನಂದ ರೈ, ಕೀತೀರಾಜ್, ಯತೀಶ್ ಕರ್ಕೆರಾ, ಉಮೇಶ್‍ಮೂಲ್ಯ ಆಯ್ಕೆಯಾಗಿದ್ದಾರೆ.

balakrushna

ಪದಗ್ರಹಣ ಸಮಾರಂಭ: ನೂತನ ಅಧ್ಯಕ್ಷ ಹಾಗೂ ಪದಾಧಿಕಾರಿಗಳ ಪದಗ್ರಹಣ ಸಮಾರಂಭ ಜ.7ರಂದು ಬಿ.ಸಿ.ರೋಡಿನಲ್ಲಿ ನಡೆಯಲಿದೆ. ಮುಖ್ಯ ಅತಿಥಿಗಳಾಗಿ ಪುರಸಭೆ ಅಧ್ಯಕ್ಷ ಪಿ.ರಾಮಕೃಷ್ಣ ಆಳ್ವ, ನ್ಯಾಯವಾದಿ ಅಶ್ವನಿ ಕುಮಾರ್ ರೈ, ಜೆಸಿಐನ ವಲಯಾಧ್ಯಕ್ಷ ಸಂತೋಷ್ ಜಿ. ಭಾಗವಹಿಸುವರು. ಉಪಾಧ್ಯಕ್ಷ ಪುಷೋತ್ತಮ ಶೆಟ್ಟಿ ಪದಗ್ರಹಣ ನೆರವೇರಿಸುವರು.

By suddi9

Leave a Reply

Your email address will not be published. Required fields are marked *