ಕೈಕಂಬ: ಬಹುವರ್ಷಗಳ ಹಿಂದೆ ಹುಲಿ ವಾಸವಾಗುತ್ತಿದೆ ಎನ್ನಲಾದ ಗುಹೆಯೊಂದು ಸುರಲ್ಪಾಡಿಯಿಂದ ಮಳಲಿಗೆ ಹೋಗುವ ಅಬ್ಬಿ ಜಲಪಾತದ ಸಮೀಪದ ರಸ್ತೆ ಬದಿಯಲ್ಲಿ ಪತ್ತೆಯಾಗಿದೆ.

Exif_JPEG_420

4 bajpe 2

4 bjape 1
ಇತ್ತೀಚೆಗೆ ರಸ್ತೆ ಅಗಲೀಕರಣ ನಡೆಸುತ್ತಿದ್ದ ಸಂದರ್ಭ ಆಕಸ್ಮತ್ ಆಗಿ ಈ ಗುಹೆ ಕಂಡುಬಂದಿದ್ದು, ಯಾರೂ ಕೂಡಾ ಅದರತ್ತ ಲಕ್ಷ್ಯ ಹರಿಸಿರಲಿಲ್ಲ.
ಆದರೆ ಇತ್ತೀಚೆಗೆ ಸುರಿದ ಮಳೆಯ ನಂತರ ಗುಹೆಯ ಬಾಯಿ ಅಗಲ ಬಿಟ್ಟಿದ್ದು ಒಳಗಿನ ಅವಕಾಶ ಸ್ಪಷ್ಟವಾಗಿ ಕಾಣುತ್ತಿದೆ. ಒಂದು ಹುಲಿ ಬಂದು ಆ ಗುಹೆಯಲ್ಲಿ ಆರಾಮವಾಗಿ ಕುಳಿತುಕೊಳ್ಳಬಹುದಾದ ಸ್ಥಳವಕಾಶವಿದೆ. ಅಲ್ಲದೆ ಕೆಲವು ವರ್ಷಗಳ ಹಿಂದೆ ಇದರಲ್ಲಿ ಹಂದಿ ವಾಸವಾಗುತ್ತಿತ್ತು ಎಂದು ಅಲ್ಲಿನ ಸ್ಥಳೀಯ ನಿವಾಸಿಗಳು ಅಭಿಪ್ರಾಯಪಡುತ್ತಾರೆ.
ಇಲ್ಲಿನ ಸುತ್ತ ಗುಡ್ಡಗಾಡು ಪ್ರದೇಶವಾಗಿದ್ದು ಹುಲಿ, ಕತ್ತೆಕಿರುಬ, ತೋಳ, ನರಿಯಂತಾ ಕ್ರೂರ ಪ್ರಾಣಿಗಳು ಸಾಮಾನ್ಯವಾಗಿತ್ತು ಎಂದು ಕೆಲವು ಇಲ್ಲಿನ ಹಿರಿಯ ತಲೆಗಳು ಅಭಿಪ್ರಾಯಪಡುತ್ತವೆ. ಮಳಲಿ ಸಮೀಪದ ಗುಡ್ಡಗಾಡುಗಳಲ್ಲಿ ಇಂಥಾ ಅನೇಕ ಗುಹೆಗಳು ಇತ್ತು, ಆದರೆ ಅದೆಲ್ಲಾ ಮಳೆ-ಗಾಳಿಗೆ ಮುಚ್ಚಿಹೋಗಿದೆ ಎಂಬುವುದು ಇಲ್ಲಿನವರ ಅಭಿಪ್ರಾಯವಾಗಿದೆ.
ವಿಚಿತ್ರವೆಂದರೆ ಈ ಗುಹೆಯೊಳಗೆ ರಸ್ತೆ ಬದಿಯ ಮಳೆ ನೀರು ರಭಸವಾಗಿ ತುಂಬುತ್ತಿದ್ದರೂ ಗುಹೆಯ ಪಾತಾಳಕ್ಕೆ ನೀರು ಹೋಗುತ್ತಿದೆಯೇ ವಿನಹ ನೀರು ಮಿಕ್ಕಿ ಹೊರಚೆಲ್ಲಿದ್ದಿಲ್ಲ.

By suddi9

Leave a Reply

Your email address will not be published. Required fields are marked *