ಮಂಗಳೂರು: ಸಮನ್ವಯ ಶಿಕ್ಷಣ ಕಲ್ಪನೆಯಲ್ಲಿ 1981ರಲ್ಲಿ ದಿವಂಗತ ಮೋಹಿನಿ ಅಪ್ಪಾಜಿ ನಾೈಕ್‍ರಿಂದಸ್ಥಾಪಿಸಲ್ಪಟ್ಟು ಕಳೆದ 17 ವರ್ಷಗಳಿಂದ ಪೂಜ್ಯಡಾ| ವೀರೇಂದ್ರ ಹೆಗ್ಗಡೆಯವರು ಮುನ್ನಡೆಸುತ್ತಿರುವಂತಹಎಸ್. ಡಿ. ಎಂ.ಮಂಗಳ ಜ್ಯೋತಿ ಸಮಗ್ರ ಶಾಲೆಗೆ ದಿನಾಂಕ 10-1-2017ರಂದು 3181 ವಲಯ3ಇದರರಾಜ್ಯಪಾಲರಾದರೋಟೆರಿಯನ್‍ಡಾ.ಆರ್‍ಎಸ್. ನಾಗಾರ್ಜುನ್, ಚಾಮರಾಜನಗರ ಭೇಟಿ ನೀಡಿದರು.

mangala

ಈ ಸಂದರ್ಭದಲ್ಲಿ ಶಾಲೆಯ ವಿವಿಧ ಚಟುವಟಿಕೆಗಳನ್ನು ಗಮನಿಸಿ ಮೆಚ್ಚುಗೆಯನ್ನು ವ್ಯಕ್ತಪಡಿಸಿ ಮಾತನಾಡುತ್ತಾ ಸಮನ್ವಯ ಶಿಕ್ಷಣದಲ್ಲಿ ಕಳೆದ 36 ವರ್ಷಗಳ ಸೇವಾ ಅನುಭವ ಹೊಂದಿರುವ ಈ ಶಾಲೆ ಜನಮಾನಸದಲ್ಲಿ ಉಳಿದು ಕೊಳ್ಳುವಂತಹ ಅದ್ವಿತೀಯ ಸಾಧನೆಯನ್ನು ಮಾಡಿದೆ.ಮಾತ್ರವಲ್ಲದೆಎಸ್. ಎಸ್. ಎಲ್. ಸಿ.ಪರೀಕ್ಷೆ ಫಲಿತಾಂಶವು ಸರಾಸರಿ ಶೇಕಡ 87 ಪಡೆಯುವಂತದ್ದು ಈ ಸಂಸ್ಥೆಯ ಸಾಧನೆಗೆ ಹಿಡಿದಕೈಗನ್ನಡಿಯಾಗಿದೆ.ಅನೇಕ ಚಟುವಟಿಕೆಗಳಲ್ಲಿ ಇಲ್ಲಿಯ ಮಕ್ಕಳು ರಾಜ್ಯ, ದೇಶ, ಅಂತರ್‍ರಾಷ್ಟ್ರೀಯ ಮಟ್ಟದ ಸ್ಪರ್ಧೆಯಲ್ಲಿ ಭಾಗವಹಿಸಿ ಪ್ರಶಸ್ತಿಗಳನ್ನು ಪಡೆದಿರುವುದು ಹೆಮ್ಮೆಯ ವಿಚಾರವಾಗಿದೆ. ವಿಶಿಷ್ಟ ಚೇತನ ಮಕ್ಕಳ ಕಲಾ ಪ್ರೌಢಿಮೆಗೆ ನಿರ್ಮಾಣವಾದಆರ್ಟ್‍ಗ್ಯಾಲರಿಯಲ್ಲಿರುವಕಲಾಕೃತಿಯನ್ನು ವೀಕ್ಷಿಸಿ ವಿಸ್ಮಯ ವ್ಯಕ್ತಪಡಿಸಿದರು.

ಈ ಸಂದರ್ಭದಲ್ಲಿ ಶಾಲೆಗೆ ದತ್ತಿನಿಧಿಯನ್ನು ನೀಡಿಒಂದು ಮಗುವಿನ ಪೋಷಕತ್ವವನ್ನು ವಹಿಸಿಕೊಳ್ಳುವುದೆಂದು ತಿಳಿಸಿದರು.ರೋಟರಿಕ್ಲಬ್, ದೇರಳ ಕಟ್ಟೆಇದರ ನೇತೃತ್ವದಲ್ಲಿ ಶಾಲೆಗೆ, ವಿಕಲ ಚೇತನ ಮಕ್ಕಳ ಶಿಕ್ಷಣಕ್ಕೆ ಅಗತ್ಯವಿರುವ ಸುಮಾರು 5ಲಕ್ಷ ವೆಚ್ಚದ ಸ್ಮಾರ್ಟ್‍ಕ್ಲಾಸನ್ನು ನಿರ್ಮಿಸಿಕೊಡುವುದಾಗಿ ಭರವಸೆ ನೀಡಿದರು.

ಈ ಸಂದರ್ಭದಲ್ಲಿಡಾ.ಆರ್‍ಎಸ್. ನಾಗಾರ್ಜುನ್‍ಇವರಧರ್ಮ ಪತ್ನಿ ಶ್ರೀಮತಿ ಸುಧಾ ನಾಗಾರ್ಜುನ್,ಉಪರಾಜ್ಯಪಾಲರಾದ ವಿಕ್ರಮದತ್ತ ದೇರಳಕಟ್ಟೆ, ರೋಟರಿಕ್ಲಬ್‍ನಅಧ್ಯಕ್ಷರಾದರಾಮಕೃಷ್ಣ ನಾಯಕ್, ಕಾರ್ಯದರ್ಶಿ ಚಂದ್ರಶೇಖರ್, ರೋಟೆರಿಯನ್ ಪಿ.ಡಿ. ಶೆಟ್ಟಿ, ರೋಟೆರಿಯನ್ ಕೆ. ಆರ್.ಶೆಟ್ಟಿ, ಯೋಜನಾಧಿಕಾರಿಯಾದ ಪುನೀತ್ ಶೆಟ್ಟಿ, ರೋಟರಿ ಪೂರ್ವ ಮಂಗಳೂರಿನ ಶಾಲೆಯ ಹಿತಚಿಂತಕರಾದರೋಟೆರಿಯನ್‍ಆನಂದ ಶೆಟ್ಟಿ ಉಪಸ್ಥಿತರಿದ್ದರು. ಪ್ರೌಢ ಶಾಲಾ ಮುಖ್ಯೋಪಾಧ್ಯಾಯರಾದ ಶ್ರೀ ಅಶೋಕ್‍ಕುಮಾರ್ ಶೆಟ್ಟಿಸ್ವಾಗತಿಸಿ, ಶ್ರೀ ರಮೇಶ್‍ಆಚಾರ್ಯಕಾರ್ಯಕ್ರಮ ನಿರೂಪಿಸಿದರು.

By suddi9

Leave a Reply

Your email address will not be published. Required fields are marked *