ಮಂಗಳೂರು: ಸಮಸ್ತ ಕೇರಳ ಜಂಇಯ್ಯತುಲ್ ಉಲಮಾ ಕೇಂದ್ರ ಸಮಿತಿಯ ಕಾರ್ಯದರ್ಶಿಯು, ಸಮಸ್ತ ಶಿಕ್ಷಣ ಮಂಡಳಿಯ ಪ್ರಧಾನ ಕಾರ್ಯದರ್ಶಿಯು, ಕೇರಳ ಹಜ್ ಗ್ರೂಪಿನ ಚೇರ್ಮೆನ್ರು, ಕಡಮೇರಿ ರಹ್ಮಾನಿಯಾ ಅರಬಿಕ್ ಕಾಲೇಜಿನ ಪ್ರಾಂಶುಪಾಲರು, ಸುಪ್ರಭಾತ ಮಲಯಾಳ ದಿನಪತ್ರಿಕೆಯ ಚೇರ್ಮೆನ್ರು ಆಗಿದ್ದ ಕೋಟುಮಲೆ ಬಾಪು ಮುಸ್ಲಿಯಾರ್ (65) ಇಂದು ಮಧ್ಯಾಹ್ನ ಕಲ್ಲಿಕೋಟೆಯ ಮಿನ್ಸ್ ಹಾಸ್ಪಿಟಲ್ನಲ್ಲಿ ಅಲ್ಪ ಕಾಲದ ಅಸೌಖ್ಯದಿಂದ ನಿಧನರಾದರು. ಮೂರು ಗಂಡು ಮೂರು ಹೆಣ್ಣುಮಕ್ಕಳು, ಪತ್ನಿ ಹಾಗೂ ಅಪಾರ ಅಭಿಮಾನಿಗಳನ್ನು ಅಗಲಿದರು. ಉಸ್ತಾದರು ನಂದಿದಾರುಸ್ಸಲಾಂ ಅರಬಿಕ್ ಕಾಲೇಜು, ಅರಿಪ್ರ, ಕಡಮೇರಿ ಮೊದಲಾದ ಸ್ಥಳಗಳಲ್ಲಿ ಮುದರಿಸ್ ಆಗಿ ಸೇವೆಗೈದರು. 1975 ರಲ್ಲಿ ಪಟ್ಟಿಕ್ಕಾಡ್ ಜಾಮಿಯಾಃ ನೂರಿಯ್ಯಾದಿಂದ ಫೈಝಿ ಬಿರುದು ಪಡೆದರು. ಪ್ರಧಾನ ಅಧ್ಯಾಪಕರು ಶಂಸುಲ್ ಉಲೆಮ ಇ. ಕೆ. ಅಬೂಬಕ್ಕರ್ ಮುಸ್ಲಿಯಾರ್, ತಂದೆಯವರಾದ ಕೋಟುಮಲೆ ಅಬೂಬಕ್ಕರ್ ಮುಸ್ಲಿಯಾರ್ ಮೊದಲಾದವರು ಪ್ರಧಾನ ಅಧ್ಯಾಪಕರಾಗಿದ್ದರು. ಉಸ್ತಾದ್ರವರು ಅರಬಿಕ್ನಲ್ಲಿ ತರ್ಜಿಮತುಲ್ ಕುತುಬ ಎಂಬ ಅರಬಿಕ್ ಗ್ರಂಥವನ್ನು ರಚಿಸಿದ್ದಾರೆ.
ಕೋಟುಮಲೆ ಉಸ್ತಾದರ ನಿಧನಕ್ಕೆ ಸಮಸ್ತ ಪ್ರಧಾನ ಕಾರ್ಯದರ್ಶಿ ಆಲಿಕುಟ್ಟಿ ಉಸ್ತಾದ್, ಪಾಣೆಕ್ಕಾಡ್ ಹೈದರಲಿ ಶಿಹಾಬ್ ತಂಙಳ್, ಸಾದಿಕಲಿ ಶಿಹಾಬ್ ತಂಙಳ್, ಅಬ್ಬಾಸಲಿ ಶಿಹಾಬ್ ತಂಙಳ್, ಜಮಲುಲೈಲಿ ತಂಙಳ್ ಕಲ್ಲಿಕೋಟೆ, ಕೆ.ಪಿ.ಸಿ. ತಂಙಳ್ ವಲ್ಲಪ್ಪುಝು, ಝೈನುಲ್ ಆಬಿದೀನ್ ತಂಙಳ್ ದುಗ್ಗಲಡ್ಕ, ಅಲೀ ತಂಙಳ್ ಕುಂಭೋಲ್, ಎಂ.ಟಿ. ಉಸ್ತಾದ್, ಖಾಝಿ ತ್ವಾಖಾ ಉಸ್ತಾದ್, ಖಾಸಿಂ ಉಸ್ತಾದ್, ಪಿ.ಕೆ.ಪಿ. ಅಬ್ದುಲ್ಲ್ಸಲಾಂ ಮುಸ್ಲಿಯಾರ್, ಕೊಯ್ಯೋಡು ಉಮರ್ ಮುಸ್ಲಿಯಾರ್, ಸಿ.ಕೆ.ಎಂ. ಸಾದಿಕ್ ಮುಸ್ಲಿಯಾರ್ ಎಂ. ಎಂ. ಮುಹ್ಯುದ್ದೀನ್ ಮುಸ್ಲಿಯಾರ್ ಆಲುವ, ಸಚಿವ ಯು. ಟಿ. ಖಾದರ್, ಯು. ಎಂ. ಉಸ್ತಾದ್, ವಿಲ್ಲ್ಯಾಪಳ್ಳಿ ಇಬ್ರಾಹಿಂ ಮುಸ್ಲಿಯಾರ್, ಚೇಲಾಕ್ಕಾಡ್ ಉಸ್ತಾದ್, ಜಬ್ಬಾರ್ ಉಸ್ತಾದ್ ಮಿತ್ತಬೈಲ್, ನೌಶಾದ್ ಬಾಖವಿ, ಅಬ್ದುಸ್ಸಮದ್ ಪೂಕೊಟ್ಟೂರು, ನಾಸಿರ್ ಫೈಝಿ, ಬಂಬ್ರಾಣ್ ಉಸ್ತಾದ್, ಇಬ್ರಾಹಿಂ ಬಾಖವಿ, ಅಮೀರ್ ತಂಙಳ್, ಸುನ್ನೀ ಸಂದೇಶ ಪತ್ರಿಕೆಯ ಹಾಜಿ ಕೆ. ಎಸ್. ಹೈದರ ದಾರಿಮಿ, ಕೆ. ಎಲ್. ಉಮರ್ ದಾರಿಮಿ ಪಟ್ಟೋರಿ, ಕುಕ್ಕಿಲ ದಾರಿಮಿ, ಸಿದ್ಧೀಕ್ ಫೈಝಿ, ಬಶೀರ್ ಅಝ್ಹರಿ ಬಾಯಾರ್, ಸಿತಾರ್ ಅಬ್ದುಲ್ ಮಜೀದ್ ಹಾಜಿ, ಎ ಎಚ್. ನೌಶಾದ್ ಹಾಜಿ ಸೂರಲ್ಪಾಡಿ, ಮುಸ್ತಫ ಫೈಝಿ ಕಿನ್ಯ, ರಫೀಕ್ ಅಜ್ಜಾವರ, ಫ್ರೊಫೆಸರ್ ಶಾಹುಲ್ ಹಮೀದ್ ಐರ್ವರ್ನಾಡು, ಐ. ಮೊೈದಿನಬ್ಬ ಹಾಜಿ ಮಂಗಳೂರು, ರಿಯಾಝ್ ಹಾಜಿ ಬಂದರ್, ಹನೀಫ್ ಹಾಜಿ, ಮೆಟ್ರೋ ಹಾಜಿ, ಇಲ್ಯಾಸ್ ನೇರಳಕಟ್ಟೆ, ಝಾಕಿರ್ ಹುಸೈನ್ ಬಂದರ್, ಮಾಜಿ ಮೇಯರ್ ಕೆ. ಅಶ್ರಫ್, ಮದರ್ ಇಂಡಿಯಾ ಅಬ್ದುಲ್ ಲತೀಫ್ ಹಾಜಿ, ಆಸ್ಕೊ ಅಬ್ದುರ್ರಹ್ಮಾನ್ ಹಾಜಿ, ಶೇಕಬ್ಬ ಹಾಜಿ ಕಿನ್ಯ, ಸುಲೈಮಾನ್ ಹಾಜಿ ಕಲ್ಲಡ್ಕ, ಕೆ. ಎಸ್. ಇಸ್ಮಾಯಿಲ್ ಹಾಜಿ ಕಲ್ಲಡ್ಕ, ಅಬೂಬಕ್ಕರ್ ಹಾಜಿ ಗೋಳ್ತಮಜಲು, ಖಾಸಿಂ ದಾರಿಮಿ ಕಿನ್ಯ, ಅಬ್ದುರ್ರಹ್ಮಾನ್ ದಾರಿಮಿ, ಕಿನ್ಯ, ಟಿ. ಎಂ. ಶಹೀದ್ ಸುಳ್ಯ, ಎಂ. ಕೆ. ಅಬೂಬಕ್ಕರ್ ಕುದ್ರೋಳಿ, ಹಕೀಂ ವಿಟ್ಲ, ಬಿಲಾಲ್ ಮೊೈದೀನ್ ಬೆಂಗರೆ, ಜಲಾಲುದ್ದೀನ್ ಅಜ್ಜಾವರ, ಜಿ. ಎಂ. ಫೈಝಿ ಕಲ್ಲಡ್ಕ, ಅಬ್ದುಲ್ಲಾ ಎಂ. ಎ. ಬೆಳ್ಮ, ಬಶೀರ್ ಹಾಜಿ ದೇರಳಕಟ್ಟೆ, ಬಿ. ಎ. ಬಶೀರ್ ಮುಲ್ಕಿ, ಹುನೈಸ್ ಪೆರಾಜೆ, ಟಿ. ಎಂ. ಮುಹಮ್ಮದ್ ಕಿನ್ಯ, ಅಬ್ದುಲ್ ಗೈಸ್ ಕಜೆ, ಮೊೈದಿನಬ್ಬ ಹಾಜಿ ಪಲಿಮಾರ್, ಇಕ್ಬಾಲ್ ಬಾಳಿಲ, ಕರೀಂ ಹಾಜಿ ಶಿರಸಿ, ಅಬ್ದುರ್ರಹ್ಮಾನ್ ಫೈಝಿ ಪಜೀರ್ ಹಾಗೂ ಕರ್ನಾಟಕ ಇಸ್ಲಾಮಿಕ್ ಸಾಹಿತ್ಯ ಅಕಾಡಮಿಯ ಸದಸ್ಯರು ಮತ್ತು ಎಂ. ಆರ್. ಗ್ರೂಪ್ನ ಸದಸ್ಯರು, ಸುನ್ನೀಸಂದೇಶ ಪತ್ರಿಕಾ ಬಳಗದವರು ಸಂತಾಪ ಸೂಚಿಸಿದ್ದಾರೆ.
ಇಂದು 11ರಂದು ಮದ್ರಸಾಗಳಲ್ಲಿ ನಡೆಯಬೇಕಾದ ಅರ್ಧವಾರ್ಷಿಕ ಪರೀಕ್ಷೆಯನ್ನು ತಾರೀಕು 14ರಂದು ಶನಿವಾರಕ್ಕೆ ಮುಂದೂಡಲಾಗಿದೆ ಎಂದು ಸಮಸ್ತ ಶಿಕ್ಷಣ ಮಂಡಳಿ ನೇತಾರರು ತಿಳಿಸಿದ್ದಾರೆ.
