ಮೂಡುಬಿದಿರೆ: ಬೆಳುವಾಯಿಯ ಶ್ರೀ ಯಕ್ಷದೇವ ಮಿತ್ರಕಲಾ ಮಂಡಳಿಯ ವಿಂಶತಿ ಕಲೋತ್ಸವದ 3 ನೇ ಕಾರ್ಯಕ್ರಮವಾಗಿ ಬೆಳುವಾಯಿ ಕುಕ್ಕುಡೇಲು ಅಯ್ಯಪ್ಪ ಮಂದಿರದಲ್ಲಿ ಕಲಾವಿದ ದಿ. ನಾರಾಯಣ ಶೆಟ್ಟಿಗಾರ್ ದಡ್ಡಿ ಇವರ ಸಂಸ್ಮರಣೆ ಕಾರ್ಯಕ್ರಮ ನಡೆಯಿತು.
ಸಾಹಿತಿ ಡಾ.ನಾ. ಮೊಗಸಾಲೆ ಉದ್ಘಾಟಿಸಿ ಕಲೆ-ಕಲಾವಿದರನ್ನು ಪ್ರೋತ್ಸಾಹಿಸಿ ಮುಂದಿನ ತಲೆಮಾರಿಗೆ ಕೊಂಡೊಯ್ಯುವ ಕೆಲಸ ನಮ್ಮಿಂದ ಆಗಬೇಕಿದೆ. ಆ ನಿಟ್ಟಿನಲ್ಲಿ ಯಕ್ಷದೇವ ಮಿತ್ರ ದೇವಾನಂದ ಭಟ್ ಬೆಳುವಾಯಿಯ ಆಸುಪಾಸಿನ ಮಕ್ಕಳಿಗೆ ಈ ಕಲೆಯ ತರಬೇತಿ ನೀಡಿ ಮಕ್ಕಳಿಗೆ ಕಲೆಯ ಅರಿವು, ಆ ಬಗೆಗಿನ ಉತ್ಸಹ ಹುಟ್ಟಿಸುವ ಕೆಲಸವನ್ನು ಮಾಡುತ್ತಿರುವುದು ಶ್ಲಾಘನೀಯ ಎಂದರು.
ಕಲಾಪೋಷಕ ಭಾಸ್ಕರ್ ಎಸ್ ಕೋಟ್ಯಾನ್ ಅಧ್ಯಕ್ಷತೆವಹಿಸಿದ್ದರು. ಅರ್ಥಧಾರಿ, ಶಿಕ್ಷಕ ಶ್ಯಾಮ್ ಹೆಗ್ಡೆ ಸಮಾರಂಭದಲ್ಲಿ ಸನ್ಮಾನಿಸಲಾಯಿತು.
ಮಹಾವೀರ ಪಾಂಡಿ ಕಾಂತಾವರ ದಿ.ನಾರಾಯಣ ಶೆಟ್ಟಿಗಾರ್ ದಡ್ಡಿ ಇವರ ಸಂಸ್ಮರಣಾ ಭಾಷಣ ಮಾಡಿದರು.
ಉಮಾನಾಥ ಕೋಟ್ಯಾನ್, ಬೆಳುವಾಯಿಯ ಸುರೇಶ್ ಪೈ, ಗುರುಸ್ವಾಮಿ ಗಣೇಶ್ ಉಪಸ್ಥಿತರಿದ್ದರು. ಮಂಡಳಿಯ ಕಾರ್ಯಧ್ಯಕ್ಷ ಎಂ. ದೇವಾನಂದ ಭಟ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಗೋವರ್ಧನ್ ಭಟ್ ಕಾರ್ಯಕ್ರಮ ನಿರೂಪಿಸಿದರು. ಕಾರ್ಯದರ್ಶಿ ರವಿಪ್ರಸಾದ್ ಕೆ ಶೆಟ್ಟಿ ನೀಡಿ ವಂದಿಸಿದರು.
